ಇತ್ತೀಚಿನ ಸುದ್ದಿ

ನಿರ್ಮಲಾ ಸೀತಾರಾಮನ್ ಒಂದು ಪೈಸೆ ದುಡ್ಡು ಕೊಡಲಿಲ್ಲ: ಸಿದ್ದರಾಮಯ್ಯ

ಮೈಸೂರು: ಮೈಸೂರಲ್ಲಿ ಲೋಕಸಭಾ ಎಲೆಕ್ಷನ್ ಹೊಸ್ತಿಲಲ್ಲಿ ಕಾಂಗ್ರೆಸ್ ದೊಡ್ಡ ಆಪರೇಷನ್ ನಡೆಸಿದೆ. ಕೆಆರ್ ಕ್ಷೇತ್ರದ ಪ್ರಮುಖ ಮುಖಂಡರನ್ನ ಸೆಳೆದು ಬಿಜೆಪಿಗೆ ಶಾಕ್ ಕೊಟ್ಟಿದೆ. ಮೈಸೂರಿನ ಭೂತಾಳೆ ಮೈದಾನದಲ್ಲಿ ಕಾಂಗ್ರೆಸ್ ಸೇರ್ಪಡೆ ಬೃಹತ್ ಸಮಾವೇಶ ನಡೆಸಲಾಗಿದ್ದು,. ಸಮಾವೇಶದಲ್ಲಿ ಬಿಜೆಪಿ-ಜೆಡಿಎಸ್ ನಾಯಕರು‘ಕಮಲ’ ಬಿಟ್ಟು ‘ಕೈ’ ಹಿಡಿದಿದ್ದಾರೆ. ಅವರಲ್ಲಿ ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಎಚ್ ವಿ ರಾಜೀವ್, ಬಿಎಲ್ ಭೈರಪ್ಪ ಹಾಗೂ ಕೆವಿ ಮಲ್ಲೇಶ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ – ಜೆಡಿಎಸ್ ಮುಖಂಡರಿಗೆ ಶಾಲು ಹೊದಿಸಿ, ಹಾರ ಹಾಕಿ ಸಿಎಂ ಸಿದ್ದರಾಮಯ್ಯ ಸ್ವಾಗತ ಕೋರಿದರೆ, ಡಿಸಿಎಂ ಡಿಕೆ ಶಿವಕುಮಾರ್ ಅವರು ಅವರಿಗೆ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಸಚಿವರಾದ ದಿನೇಶ್ ಗುಂಡೂರಾವ್, ಕೆ.ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಶಾಸಕರಾದ ಹರೀಶ್‌ ಗೌಡ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿ ಹಲವರು ಉಪಸ್ಥಿತರಿದ್ದರು. “ನಮ್ಮ ಕಾಂಗ್ರೆಸ್ ಪಕ್ಷ ಅಭಿವೃದ್ಧಿಯನ್ನ ಮಾತ್ರ ನೋಡುವ ಪಕ್ಷ.

ನಮ್ಮ ಯೋಜನೆಗಳು ಎಲ್ಲಾ ಪಕ್ಷಗಳ ಜನರಿಗೂ ತಲುಪಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವ್ರು ಒಂದು ಕಡೆ… ಸಬ್‌ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಅಂತಾರೆ. ಇನ್ನೊಂದು ಕಡೆ ಗಡ್ಡ ಬುಟ್ಟವ್ರು, ಬುರ್ಕಾ ಹಾಕಿದವ್ರು, ಶಿಲುಬೆ ಹಾಕಿದವ್ರು ಬರಬೇಡಿ ಅಂತಾರೆ. ಈ ದೇಶದಲ್ಲಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ಯಾರಾದ್ರೂ ಬಂದಿದ್ರೆ ಅದು ಶ್ರೀಮಾನ್ ನರೇಂದ್ರ ಮೋದಿ ಮಾತ್ರ’’ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. “ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮ್‌ಗೆ ಸಿಎಂ ಸವಾಲ್ ಹಾಕಿದ್ರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗೆ ಒಂದು ಪೈಸೆ ಕೊಡಬೇಡಮ್ಮ. ನಮ್ಮ ಹಕ್ಕಿನ ಹಣ ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ. ಬನ್ನಿ ಚರ್ಚೆಗೆ ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗಾಡಿಬೇಡಿ. ಮೊನ್ನೆ ಮೈಸೂರಿಗೆ ನಿರ್ಮಲಾ ಸೀತಾರಾಮ್ ಬಂದು ಸುಳ್ಳು ಹೇಳಿ ಹೋಗಿದ್ದಾರೆ” ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button