ವಿದೇಶ

ಇಂದು ವಾಷಿಂಗ್ಟನ್ ನಲ್ಲಿ ಕ್ವಾಡ್ ಶೃಂಗಸಭೆ: ಆಸ್ಟ್ರೇಲಿಯಾ, ಜಪಾನ್ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ನಿನ್ನೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರನ್ನು ಕ್ವಾಡ್ ಶೃಂಗಸಭೆಗೆ ಮುನ್ನ ಭೇಟಿ ಮಾಡಿ ವಿಸ್ತಾರವಾಗಿ ಇಂಡೊ-ಫೆಸಿಫಿಕ್ ಸೇರಿದಂತೆ ದ್ವಿಪಕ್ಷೀಯ, ಸ್ಥಳೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಪ್ರಧಾನಿ ಮೋದಿ ಮತ್ತು ಮಾರಿಸನ್ ನಡುವೆ ಭೇಟಿಗೆ ಒಂದು ವಾರದ ಮುನ್ನ ಉಭಯ ನಾಯಕರು ದೂರವಾಣಿ ಮೂಲಕ ಮಾತನಾಡಿದ್ದರು. ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಇತ್ತೀಚಿನ ಪ್ರಗತಿಯನ್ನು ಪರಿಶೀಲಿಸಿದರು.

ಕೋವಿಡ್-19 ಸಾಂಕ್ರಾಮಿಕ ನಂತರದ ಅವಧಿಯಲ್ಲಿ ಉಭಯ ನಾಯಕರ ನಡುವಿನ ಮೊದಲ ವೈಯಕ್ತಿಕ ಭೇಟಿ ಇದಾಗಿದೆ. ಕಳೆದ ಬಾರಿ ಜೂನ್ 4 ರಂದು ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ದ್ವಿಪಕ್ಷೀಯ ಸಭೆಯನ್ನು ಕಾರ್ಯತಂತ್ರದ ಪಾಲುದಾರಿಕೆಯ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ ಸಭೆಗೆ ಉನ್ನತೀಕರಿಸಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ನಿನ್ನೆ ನಡೆದ ಸಭೆಯಲ್ಲಿ, ಮೋದಿ ಮತ್ತು ಮಾರಿಸನ್ ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಶಾಲ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ.

ಉಭಯ ದೇಶಗಳ ಪ್ರಧಾನಮಂತ್ರಿಗಳು, ಪರಸ್ಪರ ಯೋಗಕ್ಷೇಮಕ್ಕಾಗಿ ನಿಕಟ ಸಹಕಾರವನ್ನು ಮುಂದುವರಿಸಲು ಮುಕ್ತ, ಸಮೃದ್ಧ ಮತ್ತು ನಿಯಮ ಆಧಾರಿತ ಇಂಡೋ-ಪೆಸಿಫಿಕ್ ಪ್ರದೇಶದ ತಮ್ಮ ಹಂಚಿಕೆಯ ಉದ್ದೇಶವನ್ನು ಮುಂದುವರಿಸಲು ನಿರ್ಧರಿಸಿದರು. ಭಾರತ, ಯುಎಸ್ ಮತ್ತು ಇತರ ಹಲವು ವಿಶ್ವಶಕ್ತಿಗಳು ಈ ಪ್ರದೇಶದಲ್ಲಿ ಚೀನಾ ಹೆಚ್ಚುತ್ತಿರುವ ಸೇನಾ ಕುಶಲತೆಯ ಹಿನ್ನೆಲೆಯಲ್ಲಿ ಮುಕ್ತ ಮತ್ತು ಅಭಿವೃದ್ಧಿ ಹೊಂದುತ್ತಿರುವ ಇಂಡೋ-ಪೆಸಿಫಿಕ್ ಅನ್ನು ಖಚಿತಪಡಿಸಿಕೊಳ್ಳುವ ಅಗತ್ಯತೆಯ ಬಗ್ಗೆ ಮಾತನಾಡುತ್ತಿವೆ.

ತೈವಾನ್, ಫಿಲಿಪೈನ್ಸ್, ಬ್ರೂನಿ, ಮಲೇಷ್ಯಾ ಮತ್ತು ವಿಯೆಟ್ನಾಂ ಎಲ್ಲಾ ಭಾಗಗಳು ತಮ್ಮ ಭಾಗವೆಂದು ಹೇಳಿಕೊಂಡರೂ, ಚೀನಾ ಬಹುತೇಕ ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ತನ್ನದಾಗಿಸಿಕೊಂಡಿದೆ. ಬೀಜಿಂಗ್ ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳು ಮತ್ತು ಮಿಲಿಟರಿ ಸ್ಥಾಪನೆಗಳನ್ನು ನಿರ್ಮಿಸಿದೆ. ಮಾರಿಸನ್ ಅವರನ್ನು ಪ್ರಧಾನಿ ಮೋದಿ ಭಾರತಕ್ಕೆ ಆಹ್ವಾನಿಸಿದರು.

ಅಮೆರಿಕ ಅಧ್ಯಕ್ಷ ಜೊ ಬೈಡನ್ ಆತಿಥ್ಯ ವಹಿಸಲಿರುವ ಮೊದಲ ವೈಯಕ್ತಿಕ ಕ್ವಾಡ್ ಸಭೆಗೆ ಮುಂಚಿತವಾಗಿ ದ್ವಿಪಕ್ಷೀಯ ಕಾರ್ಯತಂತ್ರದ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಲು ಮೋದಿ ಅವರು ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರನ್ನು ಸಹ ನಿನ್ನೆ ಭೇಟಿ ಮಾಡಿದ್ದಾರೆ.

ಮೋದಿ ಮತ್ತು ಸುಗಾ ಅವರು ಈ ವರ್ಷ ಏಪ್ರಿಲ್‌ನಲ್ಲಿ ದೂರವಾಣಿ ಮೂಲಕ ಮಾತನಾಡಿ, ಒಟ್ಟಾಗಿ ಕೆಲಸ ಮಾಡುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು, ವೈವಿಧ್ಯಮಯ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ರಚಿಸುವುದು, ನಿರ್ಣಾಯಕ ವಸ್ತುಗಳು ಮತ್ತು ತಂತ್ರಜ್ಞಾನಗಳ ವಿಶ್ವಾಸಾರ್ಹ ಪೂರೈಕೆಯನ್ನು ಖಾತ್ರಿಪಡಿಸುವುದು ಮತ್ತು ಉತ್ಪಾದನೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಹೊಸ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಿದ್ದರು.

“ನಾವು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಫಲಪ್ರದ ಚರ್ಚೆಗಳನ್ನು ನಡೆಸಿದ್ದೇವೆ ಮತ್ತು ಜಪಾನ್-ಭಾರತ ಸಹಕಾರವನ್ನು ಮುಕ್ತಗೊಳಿಸಲು ಮತ್ತು ಇಂಡೋ-ಪೆಸಿಫಿಕ್ ಅನ್ನು ಮುಕ್ತವಾಗಿಸಬೇಕು ಎಂದು ಮಾತನಾಡಿಕೊಂಡೆವು ಎಂದು ಜಪಾನ್ ಪ್ರಧಾನಿ ಹೇಳಿದ್ದರು.

ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು (MAHSR) ಯೋಜನೆಯನ್ನು ತಮ್ಮ ಸಹಕಾರದ ಒಂದು ಉಜ್ವಲ ಉದಾಹರಣೆಯಾಗಿ ಮತ್ತು ಅದರ ಕಾರ್ಯಗತಗೊಳಿಸುವಿಕೆಯ ಸ್ಥಿರ ಪ್ರಗತಿಯನ್ನು ಸ್ವಾಗತಿಸಿದರು. ಕಳೆದ ಏಪ್ರಿಲ್ ನಲ್ಲಿ ನಿಗದಿಯಾಗಿದ್ದ ಜಪಾನ್ ಪ್ರಧಾನಿ ಭಾರತ ಭೇಟಿ ಕೋವಿಡ್-19 ಹಿನ್ನೆಲೆಯಲ್ಲಿ ರದ್ದಾಗಿತ್ತು.

ಜಪಾನ್ ಪ್ರಧಾನ ಮಂತ್ರಿ ಸುಗಾ ಮತ್ತು ನಾನು ಈ ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಸಮಯದಲ್ಲಿ, ಸ್ನೇಹ ಮತ್ತು ನಮ್ಮ ಪಾಲುದಾರಿಕೆ ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೆ ಇನ್ನಷ್ಟು ಒತ್ತು ನೀಡುತ್ತಿದ್ದೇವೆ. ಇಂದು ನಾವು ಹಲವಾರು ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವಾಗ, ಅದು ನಮ್ಮ ಸ್ನೇಹ ಮತ್ತು ಸಂಬಂಧ ದಿನದಿಂದ ದಿನಕ್ಕೆ ಬಲಗೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button