ಸಿನಿಮಾಸುದ್ದಿ

ಬೆಳಕಿನ ಹಬ್ಬದಂದು ತೆರೆ ಮೇಲೆ `ಅಣ್ಣಾತೆ’ ಮಿಂಚಿಂಗ್​, ಫಸ್ಟ್​ ಶೋ Exclusive Report..!

ಭಾರತೀಯ ಚಿತ್ರರಂಗ(Indian Film Industry)ದ ಸೂಪರ್ ಸ್ಟಾರ್​ ರಜನಿಕಾಂತ್​ (Super Star Rajinikanth)ಸಿನಿಮಾ ತೆರೆಕಂಡಾಗೆಲ್ಲ, ಅದು ಅವರ ಅಭಿಮಾನಿ(Fans)ಗಳಿಗೆ ದೀಪಾವಳಿ ಇದ್ದಂತೆ. ಆದರೆ ಈ ಬಾರಿ ರಜನಿ ಸಿನಿಮಾ ದೀಪಾವಳಿಯಂದೇ ರಿಲೀಸ್ ಆಗಿರುವುದು ಅವರ ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. ಇಂದಿನಿಂದ ಅಣ್ಣಾತೆ (Annaatthe) ಸಿನಿಮಾ ವಿಶ್ವದಾದ್ಯಂತ(Worldwide) ಬಿಡುಗಡೆಯಾಗಿದೆ.

ಕಾಲಾ(Kala) ಸಿನಿಮಾದ ಬಳಿಕ ತೆರೆ ಮೇಲೆ ಸೂಪರ್​ ಸ್ಟಾರ್​​ ರಜನಿಕಾಂತ್​ ಬಂದಿದ್ದಾರೆ. ಮುಂಜಾನೆಯಿಂದಲೇ ತಮಿಳುನಾಡಿ(Tamilnadu)ನಲ್ಲಿ ಫ್ಯಾನ್ಸ್ ಶೋ(Fans Show)ಗಳು ನಡೆದಿವೆ. ಸಿನಿಮಾ ನೋಡಿದ ಪ್ರತಿಯೊಬ್ಬರು ರಜನಿ ನಟನೆ(Rajini Acting)ಗೆ ಫಿದಾ ಆಗಿದ್ದಾರೆ. ತಮಿಳುನಾಡು ಸರ್ಕಾರ ನವೆಂಬರ್​ 1 ರಿಂದ ಚಿತ್ರಮಂದಿರಗಳಲ್ಲಿ ಶೇಕಡ 100ರಷ್ಟು ಪ್ರೇಕಕ್ಷಕರಿಗೆ ಅವಕಾಶ ಕೊಟ್ಟಿತ್ತು. ಪುದುಕೋಟೆ, ಚೆನ್ನೈ ತೂತುಕುಡಿ ಸೇರಿದಂತೆ ಹಲವೆಡೆ ಮುಂಜಾನೆ 4 ಗಂಟೆಗೆ ಫಶ್ಟ್​ ಶೋ  ಪ್ರಾರಂಭವಾಗಿತ್ತು. ಸಾವಿರಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಅಣ್ಣಾತೆ ದರ್ಶನ ಕೊಟ್ಟಿದ್ದಾರೆ. ತಲೈವಾ ರಜನಿಕಾಂತ್​ ಅವರನ್ನು ಹಳ್ಳಿ ಗೆಟಪ್​ನಲ್ಲಿ ಕಂಡು ಅಭಿಮಾಣಿಗಳು ದಂಗಾಗಿ ಹೋಗಿದ್ದಾರೆ.

ಕ್ರೇಜ್​ ಕಾ ಬಾಪ್​ ರಜನಿಕಾಂತ್​

ಇಡೀ ಭಾರತ ಚಿತ್ರರಂಗದಲ್ಲಿ ರಜನಿಕಾಂತ್​ಗೆ ಇರುವ ಕ್ರೇಜ್​ ಯಾರಿಗೂ ಇಲ್ಲ. ತಲೈವಾ ಸಿನಿಮಾ ಬಿಡುಗಡೆಯಾಗುತ್ತಿದೆ ಅಂದರೆ ಅವತ್ತು ರಜಾದಿನದಂತೆ ಭಾಸವಾಗುತ್ತೆ. ತಮಿಳುನಾಡಿನಲ್ಲಿ ಪ್ರೈವೆಟ್​ ಕಂಪನಿಗಳಿಗೆ ಯಾರು ಅಂದು ಕೆಲಸ ಮಾಡಲು ಹೋಗಲ್ಲ. ಕಬಾಲಿ ಹಾಗೂ ಕಾಲಾ ಸಿನಿಮಾದ ಬಿಡುಗಡೆ ವೇಳೆ `ನಮಗೆ ರಜೆ ಬೇಕು ನಾವು ರಜನಿ ಸಿನಿಮಾ ನೋಡಲು ಹೋಗಬೇಕು’ ಅಂತ ಅದೆಷ್ಟೋ ಜನ ಕಂಪನಿಗೆ ರಜೆ ಕೇಳಿದ್ದರು. ಆದರೆ ಈ ಬಾರಿ ದೀಪಾವಳಿ ಹಬ್ಬಕ್ಕೆ ರಜನಿ ಸಿನಿಮಾ ಬಿಡುಗಡೆಯಾಗಿರೋದು, ಅವರ ಕ್ರೇಜ್​ ಮತ್ತಷ್ಟು ಹೆಚ್ಚಿಸಿದೆ. ರಜನಿ ಬ್ಯಾನರ್​ಗಳಿಂದ ತಮಿಳುನಾಡಿನ ಬಹುತೇಕ್​ ಚಿತ್ರಮಂದಿರಗಳು ಮುಚ್ಚಿ ಹೋಗಿದೆ. ಬೆಳ್ಳಂಬೆಳಗ್ಗೆ ರಜನಿ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿದ್ದಾರೆ.

ರಜನಿ ಹಿಂದಿನ ಸಿನಿಮಾಗಳಲ್ಲಿ ಮಾಸ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಅಣ್ಣಾತೆ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಣ್ಣ-ತಂಗಿ ನಡುವಿನ ಸೆಂಟಿಮೆಂಟ್​ ಕಥೆ ಹೊಂದಿದೆ ಈ ಸಿನಿಮಾ. 70ರ ವಯಸ್ಸಿನಲ್ಲಿ ರಜನಿ 20ರ ಯುವಕನಂತೆ ಸಿನಿಮಾದಲ್ಲಿ ಕಾಣಿಸುತ್ತಾರೆ. ಫೈಟ್​, ಡ್ಯಾನ್ಸ್​​​​​, ಸೆಂಟಿಮೆಂಟ್​ ದೃಶ್ಯಗಳಲ್ಲಿ ಅವರಿಗೆ ಅವರೇ ಸಾಟಿ. ಅಣ್ಣಾತೆ ಸಿನಿಮಾ ಮೊದಲ ಶೋನಲ್ಲೇ ಹೆಣ್ಣುಮಕ್ಕಳ ಮನಗೆದ್ದಿದೆ. ಫ್ಯಾಮಿಲಿ ಪ್ರೇಕ್ಷಕರಿಗೆ ಬೇಕಿರುವ ಎಲ್ಲ ಅಂಶಗಳು ಈ ಸಿನಿಮಾದಲ್ಲಿದೆ ಅಂತಿದ್ದಾರೆ ಫ್ಯಾನ್ಸ್. ಶೋ ಮುಗಿಸಿ ಹೊರಗಡೆ ಕಣ್ಣೀರು ಹಾಕುತ್ತಲೇ ಬರುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button