ವಿದೇಶ

ಮೂರನೇ ಬಾರಿ ತನ್ನ ಮದುವೆ ಮುಂದೂಡುತ್ತಿರುವುದಕ್ಕೆ ಪರಿಹಾರ ಕೇಳಿ ಪ್ರಧಾನಿಗೆ ಪತ್ರ ಬರೆದ ಯುವತಿ.!

ಲಂಡನ್ : ಹೆಚ್ಚುತ್ತಿರುವ ಒಮಿಕ್ರಾನ್ (Omicron) ಪ್ರಕರಣಗಳಿಂದಾಗಿ ಮತ್ತೆ ಎಲ್ಲಾ ಕಡೆ ನಿರ್ಬಂಧಗಳನ್ನು ಹೇರಲಾಗುತ್ತಿದೆ.   ಸೋಂಕು ಹರಡದಂತೆ ತಡೆಗಟ್ಟಲು ಹಲವು ದೇಶಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಬ್ರಿಟಿಷ್ ಸರ್ಕಾರ ಕೂಡ ಲಾಕ್‌ಡೌನ್ Lockdown) ಹೇರಲು ಯೋಜಿಸುತ್ತಿದೆ. ಈ ಮಧ್ಯೆ, ಬ್ರಿಟನ್‌ನಲ್ಲಿ ಯುವತಿಯೊಬ್ಬಳು ದೇಶದ ಪ್ರಧಾನಿ ಬೋರಿಸ್ ಜಾನ್ಸನ್‌ಗೆ (Boris Johnson) ಪತ್ರ ಬರೆದಿದ್ದಾಳೆ. ಈ ಪತ್ರದಲ್ಲಿ ತನ್ನ ಮದುವೆಯನ್ನು ಮೂರನೇ ಬಾರಿಗೆ ಮುಂದೂಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾಳೆ. 

ಈ ತಿಂಗಳು ನಿಗದಿಯಾಗಿತ್ತು ಮದುವೆ :
ಮೂಲಗಳ ಪ್ರಕಾರ, ಪ್ರಧಾನಿಗೆ ಪತ್ರ ಬರೆದ ಯುವತಿಯ ಹೆಸರು ಕ್ಯಾಟ್. ಇದೇ ತಿಂಗಳ 30ರಂದು ಕ್ಯಾಟ್ ಮದುವೆ ನಿಶ್ಚಯವಾಗಿತ್ತು. ಕರೋನಾ (Coronavirus) ಕಾರಣದಿಂದಾಗಿ ಈ ಹಿಂದೆ ಎರಡು ಬಾರಿ ಕ್ಯಾಟ್ ಮದುವೆ ಮುಂದೂಡಲ್ಪಟ್ಟಿತ್ತು. ಇದೀಗ ಮೂರನೇ ಬಾರಿಗೆ ಮದುವೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಈಗ ಒಮಿಕ್ರೋನ್ (Omicron) ಕಾರಣದಿಂದಾಗಿ ಮತ್ತೆ ನಿರ್ಬಂಧಗಳನ್ನು ಹೇರಲಾಗುತ್ತಿದೆ

ಪ್ರಧಾನಿ ಬಳಿ ನೋವು ತೋಡಿಕೊಂಡ ವಧು :
ಕ್ಯಾಟ್ ತನ್ನ ಸಮಸ್ಯೆಯ ಬಗ್ಗೆ ನೇರವಾಗಿ ಪ್ರಧಾನಿ ಬೋರಿಸ್ ಜಾನ್ಸನ್‌ಗೆ (Boris Johnson) ಪತ್ರ ಬರೆದಿದ್ದಾರೆ. ತನ್ನ ತಂದೆ ಮತ್ತು ಭಾವಿ ಅತ್ತೆ, ಮಾವನ ವಯಸ್ಸಿನ ಕಾರಣದಿಂದಾಗಿ ಅವರು ಮದುವೆ ಕಾರ್ಯಗಳಲ್ಲೂ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. , ಹೆಚ್ಚುತ್ತಿರುವ ಕರೋನಾ (COVID-19) ಪ್ರಕರಣದಿಂದಾಗಿ ಸಮಸ್ಯೆಯಾಗದಂತೆ  ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ವಯಸ್ಸಾದವರು ಓಮಿಕ್ರಾನ್ ರೂಪಾಂತರಕ್ಕೆ ಹೆದರುತ್ತಿದ್ದಾರೆ. ಆರತಕ್ಷತೆ ಸ್ಥಳದಲ್ಲಿಯೂ ಸೀಮಿತ ವ್ಯಕ್ತಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಹೀಗಿರುವಾಗ ಅತಿಥಿಗಳು ಬಾರದೇ ಹೋದರೆ  ನಷ್ಟವಾಗುತ್ತದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.  

ಪರಿಹಾರ ಸೂಚಿಸುವಂತೆ ಮನವಿ : 
ಹೂವುಗಳನ್ನು ಆರ್ಡರ್ ಮಾಡಲಾಗಿದೆ ಮತ್ತು ಸಂಗೀತಗಾರರನ್ನು ಸಹ ಬುಕ್ ಮಾಡಲಾಗಿದೆ ಎಂದು ಕ್ಯಾಟ್ ತನ್ನ ಪತ್ರದಲ್ಲಿ ಬರೆದಿದ್ದಾರೆ. ಅತಿಥಿಗಳ ಆಗಮನಕ್ಕೆ ಬಸ್‌ಗಳನ್ನು ಕಾಯ್ದಿರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳಿಗೆ ಈಗಾಗಲೇ ಹಣವನ್ನು ಕೂಡಾ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಒಂದೋ ಹೆಚ್ಚು ಜನರು ಕಾರ್ಯಕ್ರಮಕ್ಕೆ ಹಾಜರಾಗಲು ಅವಕಾಶ ನೀಡಬೇಕು ಅಥವಾ ನಾವು ಹೇಗೆ ಮದುವೆಯಾಗಬೇಕು ಎನ್ನುವುದನ್ನು ಸರಿಯಾಗಿ ತಿಳಿಸಬೇಕು ಎಂದು ಕೇಳಿಕೊಂಡಿದ್ದಾರೆ. ಕೊನೆ ಕ್ಷಣದಲ್ಲಿ ಇಂತಹ ನಿರ್ಬಂಧಗಳನ್ನು (Cororna guidelines) ಹಾಕುವ ಮೂಲಕ ಸರ್ಕಾರವು ಹಾನಿಯನ್ನುಂಟುಮಾಡುತ್ತಿದೆ ಎಂದು ಯುವತಿ ಪತ್ರದಲ್ಲಿ ಬರೆದಿದ್ದಾರೆ. ಇದರಿಂದ ನಮ್ಮ ಬಹಳಷ್ಟು ಹಣ ವ್ಯರ್ಥವಾಗುತ್ತದೆ. ಇದೀಗ ಮೂರನೇ ಬಾರಿಗೆ ಮದುವೆಯನ್ನು ಮುಂದೂಡಬೇಕಾಗಿದೆ ಎಂದು ಯುವತಿ ಬೇಸರ ವ್ಯಕ್ತಪಡಿಸಿದ್ದಾರೆ. 

Related Articles

Leave a Reply

Your email address will not be published. Required fields are marked *

Back to top button