ಇತ್ತೀಚಿನ ಸುದ್ದಿ
Trending

ಅಗ್ನಿ ಅವಘಡ ವೇಳೆ ಧೈರ್ಯ ಮುಖ್ಯ: ಅಗ್ನಿಶಾಮಕ ಠಾಣಾಧಿಕಾರಿ ಆನಂದಪ್ಪ

ಹೊಸನಗರ: ಯಾವುದೇ ಅಗ್ನಿ ಅವಘಡದ ವೇಳೆ ಸಂಭವನೀಯ ದುರಂತ ತಪ್ಪಿಸಲು ಜನತೆ ಆಗತ್ಯ ಜಾಗೃತಿ ವಹಿಸಬೇಕೆಂದು ತಾಲೂಕಿನ ಅಗ್ನಿಶಾಮಕ ಠಾಣಾಧಿಕಾರಿ ಆನಂದಪ್ಪ ತಿಳಿಸಿದರು.

ಪಟ್ಟಣದ ಎಂ, ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ,ಆವರಣದಲ್ಲಿ ಇಲಾಖೆ ಸಾರ್ವಜನಿಕ ಪ್ರತ್ಯಕ್ಷಿಕೆ ನೀಡಿ ಮಾತನಾಡಿದರು.

ಅಡಿಗೆ ತಯಾರಿ ವೇಳೆ ಗ್ಯಾಸ್ ಸಿಲಿಂಡರ್ ಅನ್ನು ನೇರವಾಗಿ ನಿಲ್ಲಿಸಬೇಕು. ಸುತ್ತ ಯಾವುದೇ ತರಹದ ಬೆಂಕಿ ಹತ್ತು ಆ ವಸ್ತುಗಳು ಇಡಬಾರದು. ಒಮ್ಮೆ ಸಿಲೆಂಡರ್ ಲಿಕ್ ಆಗಿ ಅನಿಲ ಸೋರಿ ಸಿಲಿಂಡರ್ ಗೆ ಬೆಂಕಿ ತಗಲಿದರೆ ಯಾರು ಧೈರ್ಯ ಗೆ ಡಬಾರದು. ಕಬ್ಬಿಣ ರಾಡ್ ಬಳಸಿ ಗ್ಯಾಸ್ ಸಿಲಿಂಡರ್ಮನೆಯೊಳಗಿಂದ ಬಯಲು ಪ್ರದೇಶಕ್ಕೆ,ಎಳೆದು ಹಾಕಬೇಕು. ಪ್ಲಾಸ್ಟಿಕ್ ಬಕೆಟ್ ಬಳಸಿ ಸಿಲಿಂಡರ್ ಮೇಲಿಂದ ಹಾಕಿ ಗಾಳಿಯಡದಂತೆ ತೆಡೆಯುವ ಮೂಲಕ ಬೆಂಕಿ ನಂದಿಸಬಹುದು. ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದಲ್ಲಿ ಅಗತ್ಯ ಕ್ರಮಕೈಗೊಳ್ಳುವವರು
ಎಂಬ ಮಾಹಿತಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಎನ್. ಪ್ರವೀಣ್ ಕುಮಾರ್,ಉಪಾಧ್ಯಕ್ಷೆ ಸುಧಾ.ಸದ್ಯಸರುಗಳಾದ ದಿವ್ಯ ಸತೀಶ್.ಪಿಡಿಓ ಯೋಗೀಶ್, ಅಗ್ನಿ ಶಾಮಕ ಸಿಬ್ಬಂದಿಗಳಾದ ಭೀಷ್ಮ ಚಾರಿ,ನರೇಶ್, ಶಿವರಾಜ್.ಸೇರಿ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button