ಸಿಪಿಐ ಮಾಧ್ಯ ನಾಯಕ್ ಅವರ ನಾಗರಿಕರ ಸೇವೆಗೆ ಎಲ್ಲೆಡೆ ಸಾರ್ವಜನಿಕರ ಮೆಚ್ಚುಗೆ

ಕುಣಿಗಲ್ : ಇವತ್ತಿನ ಕಾಲದಲ್ಲಿ ಪೊಲೀಸ್ ಅಂದರೆ ಅಹಂಕಾರ ಅನ್ನೋ ಭಾವನೆ ಸಾಮಾನ್ಯ, ಆದರೆ ಕುಣಿಗಲ್ ಪೊಲೀಸ್ ಇನ್ಸ್ಪೆಕ್ಟರ್ ಮಾಧ್ಯಾನಾಯಕ್ ಸರ್ ಅದಕ್ಕೆ ಸಂಪೂರ್ಣ ವಿರುದ್ಧ ಎಂದು ನಾಗರಿಕರು ತಿಳಿಸಿದ್ದಾರೆ, ಇವರು ಕುಣಿಗಲ್ ಪಟ್ಟಣ ಪೊಲೀಸ್ ಠಾಣೆಗೆ ಬಂದು ಕೆಲವೇ ದಿನಗಳಲ್ಲಿ ಕುಣಿಗಲ್ ಪಟ್ಟಣವನ್ನೇ ಬದಲಾವಣೆ ಮಾಡಿದ್ದಾರೆ, ನಂತರ ಅಭಿವೃದ್ಧಿಯ ವಿಚಾರದಲ್ಲಿ ಸಿಪಿಐ ಅವರು ಪಟ್ಟಣದ ಜನತೆಯ ಹೃದಯ ಗೆದ್ದಿದ್ದಾರೆ,,
ಅದೇ ರೀತಿ ಕುಣಿಗಲ್ ಪಟ್ಟಣದಲ್ಲಿ ನಾಗರೀಕರ ಹೃದಯ ಗೆದ್ದ ಪೊಲೀಸ್ ಇನ್ಸ್ಪೆಕ್ಟರ್ ಅವರು ಸಂಕಷ್ಟದಲ್ಲಿರುವವರಿಗೆ ನೆರವಾಗುವ, ಅಪರಾಧ ತಡೆ ಗಟ್ಟುವ ಜೊತೆಗೆ ಸಮಾಜದ ಕಳಕಳಿ ತೋರುವ ಮೂಲಕ ಜನಸ್ನೇಹಿ ಪೊಲೀಸ್ ಎನಿಸಿಕೊಂಡಿದ್ದಾರೆ,
ಒಮ್ಮೆ ಸಾಮಾನ್ಯ ವ್ಯಕ್ತಿ ಸಣ್ಣ ಸಮಸ್ಯೆಗಳಿಗಾಗಿ ಪೊಲೀಸ್ ಸ್ಟೇಷನ್ ಗೆ ಹೋದಾಗಲೂ ಸಹ ಅವರನ್ನು ತಳ್ಳಿ ಹಾಕದೆ ಸ್ವತಃ ಸಮಯ ಕೊಟ್ಟು ಮಾತನಾಡಿ ನಾಗರೀಕರ ಎಲ್ಲ ಸಮಸ್ಯೆ ಆಲಿಸಿ ಪರಿಹಾರ ಕೊಡೋದು ಇದೇ ನಿಜವಾದ ಕರ್ತವ್ಯ ಇಂದು ನಾಗರಿಕರು ತಿಳಿಸಿದ್ದಾರೆ,
“ಸಿ ಪಿ ಐ ಮಧ್ಯಾ ನಾಯಕ್”ಅವರಿಗೆ ಅಹಂಕಾರ ಇಲ್ಲ,ಆರ್ಭಟ ಇಲ್ಲ, ಯಾರೇ ಬಂದರೂ ಸಹ ಅವರನ್ನು ಗೌರವದಿಂದ ಮಾತನಾಡಿಸಿ ಸಹಾಯ ಮಾಡುವ ಗುಣ ಹೊಂದಿದ ವ್ಯಕ್ತಿ,ಕಾನೂನು ರೀತಿ ಆಗುವ ಎಲ್ಲಾ ಕೆಲಸಗಳನ್ನು ಅದ್ಭುತವಾಗಿ ಗಮನಹರಿಸುತ್ತಾರೆ, ಇವರಲ್ಲಿ ನಿಜವಾದ ಜನಪರ ಮನಸ್ಸು ಇದೆ ಇಂತಹ ಅಧಿಕಾರಿಗಳು ಇದ್ದರೆ ಜನರಿಗೆ ಭಯಕ್ಕಿಂತ ನಂಬಿಕೆ ಹೆಚ್ಚಾಗುತ್ತದೆ ಎಂದು ಪಟ್ಟಣದ ಜನತೆ ತಿಳಿಸಿದ್ದಾರೆ,,
ಸಿ ಪಿ ಐ ಮಧ್ಯಾನಾಯಕ್ ಅವರ ಸಾಧನೆ
ಪುಟ್ ಬಾತ್ ಒತ್ತುವರಿ ತೆರವು :
ಬೀದಿ ಬದಿ ವ್ಯಾಪಾರ ಮಾಡುವವರು ಪುಟ್ ಬಾತ್ ಒತ್ತುವರಿ ಮಾಡಿಕೊಂಡಿದ್ದು ಹಲವಾರು ವರ್ಷಗಳಿಂದ ಬಗೆಹರಿಯದಿದ್ದ ಸಮಸ್ಯೆಯನ್ನು ಕುಣಿಗಲ್ ಪಟ್ಟಣಕ್ಕೆ ಕೆಲವು ತಿಂಗಳ ಹಿಂದೆ ಸರ್ಕಲ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಯಾಗಿ ಬಂದಂತಹ ಮಾಧ್ಯಾನಾಯಕ್ ಅವರ ಪರಿಶ್ರಮದಿಂದ ಒತ್ತುವರಿ ತೆರವಾಗಿದೆ, ಇದರಿಂದ ಸಾರ್ವಜನಿಕರು ವಾಹನ ಸವಾರರು ಹಾಗೂ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತೆ ಆಗಿದೆ, ಸಾಕಷ್ಟು ಅಡೆತಡೆಗಳ ನಡುವೆ ಪಟ್ಟಣದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಕ್ಕೆ ಇನ್ಸ್ಪೆಕ್ಟರ್ ಮಾಧ್ಯ ನಾಯಕ್ ಅವರು ಪಣ ತೊಟ್ಟಿದ್ದಾರೆ,
ವೃದ್ಧರು ಮತ್ತು ಮಕ್ಕಳ ಸಹಾಯ : ದಾರಿ ತಪ್ಪಿದ ಮಕ್ಕಳನ್ನು ಪೋಷಕರಿಗೆ ಒಪ್ಪಿಸುವುದು ಅಥವಾ ಒಳ್ಳೆಯ ಬುದ್ದಿ ಹೇಳಿ ಸರಿ ದಾರಿಗೆ ತರುವುದು,
ಕೆಲವು ವರ್ಷಗಳ ಹಿಂದೆ ಪಟ್ಟಣದಲ್ಲಿ ಆಟೋ ಚಾಲಕರು ಎಲ್ಲೆಂದರಲ್ಲಿ ಆಟೋ ನಿಲ್ಲಿಸಿ ಸಾರ್ವಜನಿಕರು ಓಡಾಡಲು ತೊಂದರೆ ಆಗುತ್ತಿದ್ದ ಸಂದರ್ಭದಲ್ಲಿ ಕೂಡಲೇ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಿದ್ದಾರೆ
ಬೈಕ್ ಸವಾರರಿಗೆ ಪ್ರತಿನಿತ್ಯ ಎಚ್ಚರಿಕೆ ನೀಡಿ ಹೆಲ್ಮೆಟ್ ಧರಿಸಿ ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಿ ಎಂದು ನಾಗರೀಕರಿಗೆ ಉತ್ತಮ ಸಂದೇಶ ನೀಡಿದ್ದಾರೆ,
ಅಪರಾಧ ತಡೆಗಟ್ಟುವಿಕೆಯಲ್ಲಿ ಕ್ರಿಯಾಶೀಲತೆ : ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅಪರಾಧಗಳನ್ನು ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು,
ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವ ಇನ್ಸ್ಪೆಕ್ಟರ್ ಗಳು ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಮಾದರಿಯಾಗುತ್ತಾರೆ,,,
ಸಿಪಿಐ ಮಾಧ್ಯಾನಾಯಕ್ ಅವರು ಪ್ರಚಾರ ಪ್ರಿಯರಲ್ಲ, ಕೆಲಸ ಮಾಡಿ ತೋರಿಸುವ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ ಎಂಬುದು ಜನ ಜನಿತವಾದ ಮಾತಾಗಿದೆ, ಹಾಗೆಯೇ ಪಟ್ಟಣದಲ್ಲಿ ಮತ್ತಷ್ಟು ಅತ್ಯುತ್ತಮ ಕಾರ್ಯ ಅವರಿಂದ ಆಗುವ ನಿರೀಕ್ಷೆಯಲ್ಲಿದ್ದಾರೆ,,,
ವರದಿ ನರಸಿಂಹರಾಜು

