ರಾಜ್ಯ
Trending

ಸರ್ಕಾರಿ ನೌಕರರ ಸಮಗ್ರ ಸವಲತ್ತುಗಳ ಪಡೆಯುವ ಮೊದಲ ಆದ್ಯತೆ: ನಾಗೇಶ್

ನಾಗಮಂಗಲ. ಸೆ:- 17. ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಸಮಗ್ರ ಸವಲತ್ತುಗಳ ಬಳಕೆ ಪಡೆಯುವ ಬಗ್ಗೆ ಮೊದಲ ಆದ್ಯತೆ ನೀಡುವುದಾಗಿ ಮಂಡ್ಯ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ನಾಗೇಶ್ ತಿಳಿಸಿದರು

ಅವರು ನಾಗಮಂಗಲದ
ಶಿಕ್ಷಕರ ಭವನ ದಲ್ಲಿ ಆಯೋಜನೆ ಮಾಡಿದ್ದ ನಾಗಮಂಗಲ ತಾಲೂಕು ಸರ್ಕಾರಿ ನೌಕರರ ಸಂಘದ 2024 -2025ರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಉದ್ಘಾಟನೆ ಮಾಡಿ ಮಾತನಾಡಿದರು.

ರಾಜ್ಯ ಸರ್ಕಾರಿ ಎಲ್ಲಾ ನೌಕರರು ಎಲ್ಲಾ ಇಲಾಖೆಯ ಸಮಸ್ಯೆಗಳ ಆಗರವಿದ್ದರು ಪ್ರತಿಯೊಂದು ಸರ್ಕಾರಿ ನೌಕರರು ಸಮನ್ವಯದ ಹೋರಾಟ ದೊಂದಿಗೆ ಸರ್ಕಾರದ ಸವಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ನಮ್ಮ ಮೊದಲೇ ಆದ್ಯತೆ ನೀಡುವ ಮುಖಾಂತರ ನೌಕರರ ಹಿತ ಕಾಯುವ ದೃಷ್ಟಿಯಿಂದ ವೇತನ ಆಯೋಗಗಳ ಬಗ್ಗೆ ಪರಿಪೂರ್ಣ ಮಾಹಿತಿ ಯೊಂದಿಗೆ ಸವಲತ್ತು ಸೌಲಭ್ಯಗಳನ್ನ ಪಡೆಯುವ ನಾವುಗಳು ಸಮ ಸಮನ್ವಯತೆ ಕಾಪಾಡಿಕೊಂಡು ರಾಜ್ಯ ಸರ್ಕಾರಿ ನೌಕರರ ಸಂಘದ ಆದೇಶಗಳ ಪಾಲನೆಯನ್ನು ಅನುಸರಿಸಿ ನೌಕರರ ಹಿತಕಾಯಲು ಸದಾ ಬದ್ಧನಾಗಿರುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ತಾಲೂಕು ಮಟ್ಟದ ಸರ್ಕಾರಿ ನೌಕರರ ಸಂಘಟನೆ ಕ್ರಿಯಾಶೀಲ ಕಾರ್ಯಕ್ರಮಗಳನ್ನು ರೂಪಿಸುತ್ತಾ ನೌಕರರ ಸಂಘಟನಾತ್ಮಕವಾಗಿಬೆಳೆ ಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.

ತಾಲೂಕಿನ ಎಲ್ಲಾ ಇಲಾಖೆಯ ಸರ್ಕಾರಿ ನೌಕರರು ಸಂಘದ ಏಳಿಗೆ ಅಭಿವೃದ್ಧಿಗೆ ಸಹಕಾರ ನೀಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಸಂಘದ ಸಂಘಟನಾತ್ಮಕ ವಿವಿಧ ಇಲಾಖೆಯ ನೌಕರರ ಒಳಗೊಂಡಂತೆ ಸಂಘದ ವಿವಿಧ ಕಾರ್ಯ ಯೋಜನೆಗಳಿಗೆ ಕೈಜೋಡಿಸುವ ಮುಖಾಂತರ ಬಲವರ್ಧನೆ ಮಾಡುವ ಕೆಲಸವಾಗಬೇಕಾಗಿದೆ ಎಂದು ಸರ್ಕಾರಿ ನೌಕರರ ತಾಲೂಕು ಸಂಘದ ಅಧ್ಯಕ್ಷರಾದ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದಜೆ ವೈ ಮಂಜುನಾಥ ಮಾತನಾಡಿದರು.

ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಎನ್ ಎಸ್ ಜಗನ್ನಾಥ್ ರವರು ಪ್ರಾಸ್ತಾವಿಕ ಭಾಷಣ ಮಾಡಿ ಇಂಥ ಅಪರೂಪದ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ.ನೌಕರರ ಹಿತಾಸಕ್ತಿಗೆ ಶ್ರಮಿಸುತ್ತಿರುವ ಜೆ ವೈ ಮಂಜುನಾಥ ನೇತೃತ್ವದ ತಂಡ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸುವ ಮೂಲಕ ನೌಕರರ ಸ್ನೇಹಿಯಾಗಿ ಕೆಲಸ ನಿರ್ವಹಿಸುತ್ತಿರುವ ಸದರಿ ತಂಡಕ್ಕೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತಿವೆಂದು ತಿಳಿಸಿದರು.

ಇಂದಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಎಲ್ಲ ಕಾರ್ಯಕ್ರಮ ಮತ್ತು ಅಜೆಂಡಾಗಳಿಗೆ
ಅನುಮೋದನೆ ನೀಡಿತು.

ನಾಗಮಂಗಲದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ನೂತನವಾಗಿ ಶಿಕ್ಷಣಾಧಿಕಾರಿಯಾಗಿ ಲೋಕೇಶ್ ರವರನ್ನು ಇದೆ ಸಂದರ್ಭದಲ್ಲಿ ಸ್ವಾಗತಿಸಲಾಯಿತು

ಸಮಾರಂಭದಲ್ಲಿ ತಾಲ್ಲೂಕಿನ ನೌಕರರ ಸಂಘದ ಎಲ್ಲ ಪದಾಧಿಕಾರಿಗಳು ಮತ್ತು ನಿರ್ದೇಶಕರು,ನಾಮನಿರ್ದೇಶಿತ ಪದಾಧಿಕಾರಿಗಳು ಮತ್ತು ನಿರ್ದೇಶಕರು, ವೃಂದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಿರ್ದೇಶಕರು ಹಾಗೂ ಇಲಾಖಾಧಿಕಾರಿಗಳು ಮತ್ತು ವಿವಿಧ ಇಲಾಖೆಯ ನೌಕರರು ಈ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button