
ಐಪಿಎಲ್ 2025 (IPL 2025)ರ ನಂತರ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡಲಿದ್ದು, ಎರಡೂ ತಂಡಗಳ ನಡುವೆ 5 ಟೆಸ್ಟ್ ಪಂದ್ಯಗಳು ನಡೆಯಲಿವೆ. ಇದಾದ ನಂತರ ಭಾರತ ತಂಡ ಏಕದಿನ ಮತ್ತು ಟಿ20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಈ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಟೀಂ ಇಂಡಿಯಾದ (Team India) ಈ ಪ್ರವಾಸವು ಆಗಸ್ಟ್ 17 ರಿಂದ ಪ್ರಾರಂಭವಾಗಲಿದ್ದು, ಕೊನೆಯ ಪಂದ್ಯ ಆಗಸ್ಟ್ 31 ರಂದು ನಡೆಯಲಿದೆ. 2025 ರ ಚಾಂಪಿಯನ್ಸ್ ಟ್ರೋಫಿ ನಂತರ ಇದು ಟೀಂ ಇಂಡಿಯಾದ ಮೊದಲ ಬಿಳಿ ಚೆಂಡಿನ ಸರಣಿಯಾಗಿದೆ. ಇದಲ್ಲದೆ, ಇದು ಬಾಂಗ್ಲಾದೇಶದಲ್ಲಿ ಟೀಂ ಇಂಡಿಯಾದ ಮೊದಲ ಟಿ20 ಸರಣಿಯೂ ಆಗಿರುತ್ತದೆ.
ಬಾಂಗ್ಲಾದೇಶ ಪ್ರವಾಸದಲ್ಲಿ ಭಾರತ ತಂಡ ಮೊದಲು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಾಗಿದೆ. ಈ ಸರಣಿಯ ಮೊದಲ ಪಂದ್ಯ ಆಗಸ್ಟ್ 17 ರಂದು ಮಿರ್ಪುರದಲ್ಲಿ ನಡೆಯಲಿದೆ. ಇದಾದ ನಂತರ, ಎರಡನೇ ಏಕದಿನ ಪಂದ್ಯ ಆಗಸ್ಟ್ 20 ರಂದು ಮಿರ್ಪುರದಲ್ಲಿ ನಡೆಯಲಿದೆ. ನಂತರ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಆಗಸ್ಟ್ 23 ರಂದು ಚಿತ್ತಗಾಂಗ್ನಲ್ಲಿ ನಡೆಯಲಿದೆ. ಏಕದಿನ ಸರಣಿಯ ನಂತರ, 3 ಪಂದ್ಯಗಳ ಟಿ20 ಸರಣಿಯೂ ನಡೆಯಲಿದೆ. ಟಿ20 ಸರಣಿಯು ಆಗಸ್ಟ್ 26 ರಂದು ಚಿತ್ತಗಾಂಗ್ನಲ್ಲಿ ಪ್ರಾರಂಭವಾಗಲಿದೆ. ಟಿ20 ಸರಣಿಯ ಎರಡನೇ ಪಂದ್ಯ ಆಗಸ್ಟ್ 29 ರಂದು ಮತ್ತು ಮೂರನೇ ಪಂದ್ಯ ಆಗಸ್ಟ್ 31 ರಂದು ಮಿರ್ಪುರದಲ್ಲಿ ನಡೆಯಲಿದೆ.
ಭಾರತ- ಬಾಂಗ್ಲಾ ನಡುವೆ 6 ಪಂದ್ಯಗಳು
ಮೊದಲ ಏಕದಿನ ಪಂದ್ಯ – ಆಗಸ್ಟ್ 17 (ಮಿರ್ಪುರ್)
ಎರಡನೇ ಏಕದಿನ ಪಂದ್ಯ- ಆಗಸ್ಟ್ 20 (ಮಿರ್ಪುರ್)
ಮೂರನೇ ಏಕದಿನ ಪಂದ್ಯ – ಆಗಸ್ಟ್ 23 (ಚಟೋಗ್ರಾಮ್)
ಮೊದಲ ಟಿ20 ಪಂದ್ಯ – ಆಗಸ್ಟ್ 26 (ಚಟ್ಟೋಗ್ರಾಮ್)
ಎರಡನೇ ಟಿ20 ಪಂದ್ಯ- ಆಗಸ್ಟ್ 29 (ಮಿರ್ಪುರ್)
ಮೂರನೇ ಟಿ20 ಪಂದ್ಯ – ಆಗಸ್ಟ್ 31 (ಮಿರ್ಪುರ್)
2026 ರ ಟಿ20 ವಿಶ್ವಕಪ್ ದೃಷ್ಟಿಯಿಂದ ಈ ಮೂರು ಪಂದ್ಯಗಳ ಸರಣಿಯು ಭಾರತಕ್ಕೆ ಪ್ರಮುಖವಾಗಿದೆ. ಈ ಪಂದ್ಯಾವಳಿ ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಯತ್ನಿಸಲಿದೆ. ಕಳೆದ ವರ್ಷ ವೆಸ್ಟ್ ಇಂಡೀಸ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತ ತಂಡ ಪ್ರಶಸ್ತಿಯನ್ನು ಗೆದ್ದಿತ್ತು.