
ಶ್ರೀ ಎಸ್.ಎಸ್.ವಿದ್ಯಾ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಎಚ್.ಎಸ್.ಪಾಟೀಲ ಸ್ವತಂತ್ರ ವಿಜ್ಞಾನ ಪಧವಿಪೂರ್ವ ಕಾಲೇಜು ಮಾಸ್ಟರ್ ಮೈಂಡ್ ಅಕಾಡೆಮಿ ನೇತೃತ್ವದಲ್ಲಿ ನಾಳೆ ದಿ.೬ ರವಿವಾರರಂದು ಎಸ್.ಎಸ್.ಎಲ್.ಸಿ.ಪರಿಕ್ಷೆ ಬರೆದಂತಹ ಪ್ರಥಮ ಪಿಯುಸಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ಟ್ಯಾಲೇಂಟ್ ಸರ್ಚ ಪರಿಕ್ಷೆಯನ್ನು ಆಯೋಜಿಸಲಾಗಿದೆ ಎಂದು ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ ಅವರು ಹೇಳಿದರು.
ಸಂಸ್ಥೆಯ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಎಚ್.ಎಸ್.ಪಾಟೀಲ ವಿಜ್ಞಾನ ಪಧವಿ ಪೂರ್ವ ಕಾಲೇಜನ್ನು ಮಾಸ್ಟರ್ ಮೈಂಡ್ ಅಕಾಡೆಮಿಯೊಂದಿಗೆ ಸೇರಿಸಿಕೊಳ್ಳಲಾಗಿದೆ ಉತ್ತಮ ಶಿಕ್ಷಣದ ಜೊತೆಗೆ ನೀಟ್ ಮತ್ತು ಜೆಇಇಇ ಅಲ್ಲದೇ ವೃತ್ತಿಪರ ಕೋರ್ಸಗಳಿಗೆ ಅನುಕೂಲವಾಗುವ ರೀತಿಯಲ್ಲಿ ಶಿಕ್ಷಣ ಒದಗಿಸುವ ಮಹಾದಾಸೆಯನ್ನು ಹೊಂದಲಾಗಿದೆ ದಿ.೬ ರಂದು ನಡೆಯಲಿರುವ ಟ್ಯಾಲೇಂಟ್ ಸರ್ಚ ಪರಿಕ್ಷೆಯಲ್ಲಿ ವಿಜೇತರಾಗುವ ೩ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವಂತಹ ಕಾರ್ಯಕ್ಕೆ ಮುಂದಾಗಲಾಗಿದೆ ಎಂದ ಅವರು ಎಸ್.ಎಸ್.ಎಲ್.ಸಿ. ಪರಿಕ್ಷೆ ಬರೆದಂತಹ ಕನ್ನಡ ಮತ್ತು ಆಂಗ್ಲ ಮಾಧ್ಯಾಮ ಎರಡೂ ವಿದ್ಯಾರ್ಥಿಗಳಿಗೆ ಪರಿಕ್ಷೆ ಬರೆಯಲು ಅವಕಾಶವಿದ್ದು ಪ್ರತ್ಯೇಕ ಪ್ರಶ್ನೇ ಪತ್ರಿಗಳನ್ನು ನೀಡಲಾಗುತ್ತದೆ ೬೦ ಅಂಕದ ಪ್ರಶ್ನೇ ಪತ್ರಿಕೆಹೊಂದಿದ್ದು ಈ ಪರಿಕ್ಷೆಯಲ್ಲಿ ರ್ಯಾಂಕ್ ಪಡೆಯುವ ೩ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ ನಗದು ಭಹುಮಾನವನ್ನು ನೀಡಲಾಗುತ್ತಿದೆ ಪ್ರಥಮ ಭಹುಮಾನವಾಗಿ ೧೦ ಸಾವಿರ, ಎರಡನೇ ಭಹುಮಾನ ೭೫೦೦ ಮೂರನೇ ಭಹುಮಾನ ೫ ಸಾವಿರ ನೀಡಲಾಗುವದು ೪ ರಿಂದ ೨೦ನೇ ರ್ಯಾಂಕಿನ ವರೆಗೆ ವಿದ್ಯಾರ್ಥಿಗಳಿಗೆ ಶೇ.೫೦ ರಷ್ಟು ರೀಯಾಯಿತಿ ಘೋಷಿಸಲಾಗಿದೆ ೨೧ ರಿಂದ ೪೦ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜ್ ಫೀದಲ್ಲಿ ಶೇ.೨೫ ರಿಯಾಯಿತಿ ಇನ್ನೂಳಿದ ಪರಿಕ್ಷೆ ಬರೆದಂತಹ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಫಿದಲ್ಲಿ ೫ ಸಾವಿರ ರೂ. ರೀಯಾಯಿತಿ ನೀಡಲಾಗುವದು ಕಾರಣ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಇನ್ನೋರ್ವ ಎಸ್.ಎಸ್.ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಚೀನ ಪಾಟೀಲ ಅವರು ಮಾತನಾಡಿ ಆಂದ್ರ ಪ್ರದೇಶದಲ್ಲಿ ನೀಟ್ ಮತ್ತು ಜೆಇಇಗೆ ಪ್ರತಿಷ್ಠಿತವಾಗಿರುವಂತಹ ಮಾಸ್ಟರ್ ಮೈಂಡ್ ಅಕಾಡೆಮಿ ಅವರೊಂದಿಗೆ ನಮ್ಮ ಎಚ್.ಎಸ್.ಪಾಟೀಲ ವಿಜ್ಞಾನ ಪಧವಿ ಪೂರ್ವ ಕಾಲೇಜ್ನ್ನು ಹೊಂದಿಸಿಕೊಳ್ಳಲಾಗಿದೆ ನಮ್ಮ ಭಾಗದಲ್ಲಿ ನೀಟ್ ಮತ್ತು ಜೆಇಇಗೆ ಹೆಚ್ಚಿನ ಆದ್ಯತೆ ನೀಡುವ ದೃಷ್ಠಿಕೋನದಿಂದ ಮತ್ತು ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ವರ್ಷದಿಂದ ಉತ್ತಮ ಭೋದನಾ ಕೌಶಲ್ಯಹೊಂದಿರುವ ನುರಿತ ಅನುಭವಿ ಶಿಕ್ಷಕರ ಮೂಲಕ ಸಾಧನೆಯ ತವಕದಲ್ಲಿರುವ ವಿದ್ಯಾರ್ಥಿಗಳಿಗಾಗಿ ಹೊಸ ಹೆಜ್ಜೆಯನ್ನು ಇಟ್ಟಿದ್ದೇವೆ ಸುಸರ್ಜಿತವಾದ ಕಟ್ಟದ ಭೋದನಾ ಕೌಶಲ್ಯ ಮತ್ತು ವಸತಿ ವ್ಯವಸ್ಥೆಯೊಂದಿಗೆ ಉತ್ತಮ ಶಿಕ್ಷಣಕ್ಕೆ ಮುಂದಾಗಲಾಗಿದ್ದು ಈ ಭಾಗದ ಎಲ್ಲ ವಿದ್ಯಾರ್ಥಿಗಳು ಈ ಟ್ಯಾಲೇಂಟ್ ಸರ್ಚ ಪರಿಕ್ಷೆಯಲ್ಲಿ ಭಾಗವಹಿಸಿ ಸಂಸ್ಥೆಯ ವತಿಯಿಂದ ಘೋಷಿಸಲಾಗಿರುವ ಉಚಿತ ಶಿಕ್ಷಣದ ಲಾಭವನ್ನು ಪಡೆದುಕೊಳ್ಳಬೇಕೆಂದರು.
ಈ ಟ್ಯಾಲೇಂಟ್ ಸರ್ಚ ಪರಿಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಮೋ.ನಂ.೯೬೩೨೨೭೮೧೦೫ಗೆ ನೊಂದಣಿ ಮಾಡಿಕೊಳ್ಳಬಹುದು ಅಥವಾ ಅಂದೇ ನೇರವಾಗಿ ಪರಿಕ್ಷೆಗೆ ಹಾಜರಾಗಿ ಪರಿಕ್ಷೆಯನ್ನೂ ಕೂಡಾ ಬರೆಯಬಹುದಾಗಿದೆ ಈ ಪರಿಕ್ಷೆಯಲ್ಲಿ ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ನೀಟ್ ಮತ್ತು ಜೆಇಇ ಸಂಬಂದಿತ ಪುಸ್ತಕ ಕಾಲೇಜಿನ ಸಮವಸ್ತ್ರವನ್ನೂ ಕೂಡಾ ಶಿಕ್ಷಣ ಸಂಸ್ಥೆಯವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ ಈ ಪರಿಕ್ಷೆಯಲ್ಲಿ ವಿಜ್ಞಾನ ಮತ್ತು ಗಣಿತ ಎರಡು ಪರಿಕ್ಷೆ ನಡೆಯುತ್ತದೆ ವಿಜ್ಞಾನ ೩೦ ಅಂಕ ಗಣಿತ ೩೦ ಅಂಕವನ್ನು ಹೊಂದಿರುತ್ತದೆ ಎಂದು ಮಾಸ್ಟರ್ ಮೈಂಡ್ ಅಕಾಡೆಮಿ ಪ್ರಾಚಾರ್ಯ ಸಿದ್ದಲಿಂಗರೆಡ್ಡಿ ಅವರು ತಿಳಿಸಿದರು.