ಆರೋಗ್ಯಇತ್ತೀಚಿನ ಸುದ್ದಿಸುದ್ದಿ

ಡ್ರೈ ಫ್ರೂಟ್ಸ್​​ಗಳಲ್ಲಿ ಒಂದಾದ ವಾಲ್​ನಟ್​  ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವು..

ವಾಲ್ ನಟ್ಸ್‌ ನಲ್ಲಿ ಮೆಗ್ನೀಸಿಯಮ್‌, ತಾಮ್ರ, ವಿಟಮಿನ್‌ ಎ, ಡಿ , ಆ್ಯಂಟಿ ಆಕ್ಸಿಡೆಂಟ್​ ಸೇರಿದಂತೆ ವಿವಿಧ ಪೋಷಕಾಂಶಗಳನ್ನು ಹೊಂದಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

 ವಾಲ್​ನಟ್​ ಸೇವನೆ ಪುರುಷರಿಗೆ ಹೆಚ್ಚು ಸಹಾಯ ಮಾಡುತ್ತದೆ. ಇದು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವುದಲ್ಲದೇ, ವೀರ್ಯ ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

ಪ್ರತಿದಿನ 4 ರಿಂದ 6 ವಾಲ್​ನಟ್​​ ತಿಂದು ನೀರು ಕುಡಿಯುವುದರಿಂದ ನಿಮ್ಮ ತೂಕ ಇಳಿಯುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿದೆ. ಒಮೆಗಾ 3 ಕೊಬ್ಬಿನಾಮ್ಲಗಳು, ಪ್ರೋಟೀನ್‌ ಇರುವುದರಿಂದ ಹಸಿವಾಗದಂತೆ ತಡೆಯುತ್ತದೆ.

ಗರ್ಭಿಣಿಯರಲ್ಲಿ ಕೆಲವೊಮ್ಮೆ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ, ಇದು ಮಗುವಿನ ಆರೋಗ್ಯಕ್ಕೆ ಅಪಾಯ, ಹಾಗಾಗಿ ಗರ್ಭಿಣಿಯರು ದಿನಕ್ಕೆ 2 ವಾಲ್​ನಟ್​ ತಿನ್ನುವುದು ಒಳ್ಳೆಯದು.

ವಾಲ್​ನಟ್​ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ಹೆಚ್ಚು ಉತ್ತಮ. ವಾಲ್ ನಟ್ಸ್‌ನಲ್ಲಿ ಅಪಾರ ಪ್ರಮಾಣದ ಮೊನೊಸಾಚುರೇಟೆಡ್‌ ಕೊಬ್ಬುಗಳಿದ್ದು, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡುತ್ತದೆ.

ವಾಲ್ ನಟ್ಸ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದ್ದು, ಅನೇಕ ರೋಗಗಳು ನಮ್ಮನ್ನ ಕಾಡದಂತೆ ತಡೆಯುತ್ತವೆ. ಇದನ್ನು ದಿನಕ್ಕೆ ಒಂದು ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.

ವಾಲ್​ನಟ್​ನಲ್ಲಿರುವ ಮೈಕ್ರೋಬಯೋಟಾ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಈ ಮೂಲಕ ನಮ್ಮ ಜೀರ್ಣಕ್ರಿಯೆಯ ಮೇಲೆ ಸಹ ಪರಿಣಾಮ ಬೀರುವುದರಿಂದ , ಯಾವುದೇ ರೀತಿಯ ಜೀರ್ಣಕ್ರಿಯೆ ಸಮಸ್ಯೆ ಬರದಂತೆ ತಡೆಯುತ್ತದೆ

ವಾಲ್ ನಟ್ಸ್‌ ಫೈಟೊಕೆಮಿಕಲ್‌ಗಳನ್ನು ಒಳಗೊಂಡಿರುತ್ತವೆ, ಇದು ಮೆದುಳಿನ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ವೈದ್ಯರು. ಇದರಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಮೆದುಳಿನಲ್ಲಿನ ಆಕ್ಸಿಡೇಟಿವ್‌ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೇವಲ ಗರ್ಭಿಣಿಯರು ಮಾತ್ರವಲ್ಲ , ಅಧಿಕ ರಕ್ತದೊತ್ತಡದ ಸಮಸ್ಯೆ ಇರುವ ಯಾವುದೇ ವ್ಯಕ್ತಿಗಳು, ದಿನಕ್ಕೆ ಒಂದಾದರೂ ವಾಲ್​ನಟ್​ ತಿನ್ನಿ ಎಂದು ವೈದ್ಯರು ಸಲಹೆ ನೀಡುತ್ತಾರೆ.

 ಪ್ರತಿದಿನ 4 ರಿಂದ 6 ವಾಲ್​ನಟ್​​ ತಿಂದು ನೀರು ಕುಡಿಯುವುದರಿಂದ ನಿಮ್ಮ ತೂಕ ಇಳಿಯುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿದೆ. ಒಮೆಗಾ 3 ಕೊಬ್ಬಿನಾಮ್ಲಗಳು, ಪ್ರೋಟೀನ್‌ ಇರುವುದರಿಂದ ಹಸಿವಾಗದಂತೆ ತಡೆಯುತ್ತದೆ.

ವಾಲ್​ನಟ್​ ಸೇವನೆ ಮಾಡುವುದರಿಂದ ಸ್ತನ ಕ್ಯಾನ್ಸರ್​ ಬರದಂತೆ ತಡೆಯಬಹುದು ಎನ್ನಲಾಗುತ್ತದೆ. ಅಲ್ಲದೇ ಈಗಾಗಲೇ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದರೆ, ಇದನ್ನು ತಿಂದರೆ ಪರಿಣಾಮಕಾರಿ ಪ್ರಯೋಜನ ನೀಡುತ್ತದೆ.

ವಾಲ್​ನಟ್​ ಸೇವನೆ ಪುರುಷರಿಗೆ ಹೆಚ್ಚು ಸಹಾಯ ಮಾಡುತ್ತದೆ. ಇದು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವುದಲ್ಲದೇ, ವೀರ್ಯ ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

Related Articles

Leave a Reply

Your email address will not be published. Required fields are marked *

Back to top button