ಇತ್ತೀಚಿನ ಸುದ್ದಿಸುದ್ದಿ

ಗಾರ್ಬೆಜ್ ಟ್ಯಾಕ್ಸ್ ವಸೂಲಿಗೆ ಮುಂದಾದ ಬಿಬಿಎಂಪಿ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿಗೆ ಕರೆಂಟ್ ಬಿಲ್‌ ಜೊತೆ ಗಾರ್ಬೆಜ್ ಯೂಸರ್ ಬಿಲ್ ಕೂಡ ಕೊಡಬೇಕಾಗುವಂತಹ ದಿನಗಳು ಬರಲಿವೆ. ಗಾರ್ಬೆಜ್ ಸೆಸ್ ಜೊತೆ ಜೊತೆಗೆ ಗಾರ್ಬೆಜ್ ಯೂಸರ್ ಫೀ ಕೂಡಾ ಶೀಘ್ರದಲ್ಲೇ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ತಿಂಗಳು ಕರೆಂಟ್ ಬಿಲ್ ಜೊತೆಗೆ ಗಾರ್ಬೆಜ್ ಬಿಲ್ ಕೂಡ ಬರಲಿದೆ. ಹಾಗೇ ವರ್ಷಕ್ಕೊಮ್ಮೆ ಗಾರ್ಬೆಜ್ ಸೆಸ್ ಕಟ್ಟಬೇಕು. ಪ್ರತಿ ತಿಂಗಳಿಗೊಮ್ಮೆ ಗಾರ್ಬೆಜ್ ಟ್ಯಾಕ್ಸ್ ಕಟ್ಟಲು ಹೊಸ ನಿಯಮ ಜಾರಿಗೆ ಇಲಾಖೆ ಮುಂದಾಗಿದೆ.

ಗಾರ್ಬೆಜ್ ಬಿಲ್ ಹೇಗೆ ನಿಗದಿಯಾಗುತ್ತೆ? 

ಕರೆಂಟ್ ಬಿಲ್ ಆಧಾರದ ಮೇಲೆ ಗಾರ್ಬೆಜ್ ಬಿಲ್ ನಿಗದಿ ಮಾಡಲಾಗುತ್ತೆ. ಬೆಂಗಳೂರಿನಲ್ಲಿರುವ ನಿವಾಸಿಗಳು ಕರೆಂಟ್ ಬಿಲ್ ಜೊತೆಗೆ ಗಾರ್ಬೆಜ್ ಟ್ಯಾಕ್ಸ್ ಕೂಡಾ ಕಟ್ಟಬೇಕು. ಈ ಬಗ್ಗೆ ಈಗಾಗಲೇ ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಬಿಬಿಎಂಪಿ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಸಿಕ್ಕರೆ ಬೆಂಗಳೂರಿನ ಮಂದಿ ಮತ್ತೊಂದು ಬಿಲ್ ಕಟ್ಟಬೇಕಾಗುತ್ತೆ. ಬಿಬಿಎಂಪಿ ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿದೆ. ಕಸ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತಿದ್ದು, ನಿರ್ವಹಣೆ ಆದಾಯ ಕ್ರೂಢೀಕರಣಕ್ಕೆ ಪ್ಲಾನ್ ಮಾಡಿದೆ. ಬೆಂಗಳೂರು ಮಂದಿ ಸಧ್ಯ ವರ್ಷಕ್ಕೊಮ್ಮೆ ಪ್ರಾರ್ಪಟಿ ಟ್ಯಾಕ್ಸ್ ಕಟ್ಟುತ್ತಿದ್ದು ಪ್ರಾರ್ಪಟಿ ಟ್ಯಾಕ್ಸ್ ಕಟ್ಟುವ ವೇಳೆ ಗಾರ್ಬೆಜ್ ಸೆಸ್ ಕಟ್ಟುತ್ತಿದ್ದಾರೆ. ಸೆಸ್ ಹಣ ಕಸ ನಿರ್ವಹಣೆಗೆ ಸಾಕಾಗುತ್ತಿಲ್ಲವೆಂದು ಬಿಬಿಎಂಪಿ ಇನ್ನು ಮುಂದೆ ಪ್ರತಿ ತಿಂಗಳು ಮನೆ ಮನೆಗಳಿಂದ ಗಾರ್ಬೆಜ್ ಟ್ಯಾಕ್ಸ್ ವಸೂಲಿ ಮಾಡಲು ಮುಂದಾಗಿದೆ. ಪ್ರತಿ ತಿಂಗಳು 40 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದರಿಂದ ಕಸದ ಗುತ್ತಿಗೆದಾರರಿಗೆ ಬಿಲ್, ಪೌರಕಾರ್ಮಿಕರಿಗೆ ಸಂಬಳ ನೀಡಲು ಅನುಕೂಲವಾಗಲಿದೆ.

Related Articles

Leave a Reply

Your email address will not be published. Required fields are marked *

Back to top button