Uncategorizedಕ್ರೈಂ

ಉದ್ಯಮಿ ಮನೆಯಲ್ಲಿ 150 ಕೋಟಿ; ಹಣದ ರಾಶಿ ಕಂಡು ಸುಸ್ತಾದ ಅಧಿಕಾರಿಗಳು.!

ಕಾನ್ಪುರದ (Kanpur) ಸುಗಂಧ ದ್ರವ್ಯ ಉದ್ಯಮಿಯ ಮನೆ ಕಂಪನಿ ಮೇಲೆ ಐಟಿ ಮತ್ತು ಜಿಎಸ್​ಟಿ (IT and GST) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯ ಕಪಾಟಿನಲ್ಲಿ ಕಂತೆ ಕಂತೆ ಹಣದ ಬಂಡಲ್​ ಕಂಡು ಅಧಿಕಾರಿಗಳು ದಿಗ್ಭ್ರಮೆಗೆ ಒಳಗಾದರು. ದಾಳಿ ವೇಳೆ ಸುಮಾರು 150 ಕೋಟಿಗೂ ಹೆಚ್ಚು ಹಣದ ಪತ್ತೆಯಾಗಿದ್ದು, ಇದನ್ನು ಹೊತ್ತೊಯ್ಯಲು ಕಂಟೆನರ್​ ಕರೆಸಲಾಗಿದೆ. ಐಟಿ ದಾಳಿ ವೇಳೆ ವಶಕ್ಕೆ ಪಡೆದ ಅತಿ ದೊಡ್ಡ ಮೊತ್ತ ಇದಾಗಿದೆ. ಸದ್ಯ ಯಾರನ್ನು ಬಂಧಿಸಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಯೂಷ್​ ಜೈನ್ ಎಂಬ ಉದ್ಯಮಿ ಸಾವಿರಾರು ಕೋಟಿ ಹಣವನ್ನು ತೆರಿಗೆ ಕಟ್ಟದೇ ವಂಚಿಸಿದ್ದಾರೆ. ಇನ್ನು ಉದ್ಯಮಿಯ ಕಾನ್ಪುರ ಮನೆ ಕಚೇರಿ, ಕಾರ್ಖಾನೆ ಸೇರಿದಂತೆ ಕನೌಜ್​, ಮುಂಬೈ, ಗುಜರಾತ್​ ಮನೆ ಮೇಲೂ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮೊದಲು ಕಾನ್ಪುರದಲ್ಲಿಯೂ ಟ್ರಾನ್ಸ್‌ಪೋರ್ಟರ್ – M/s ಗಣಪತಿ ರೋಡ್ ಕ್ಯಾರಿಯರ್ಸ್ ಮಾಲೀಕತ್ವದ ಕಚೇರಿಗಳು ಮತ್ತು ಗೋಡೌನ್‌ಗಳ ಮೇಲೆ ದಾಳಿಗಳನ್ನು ನಡೆಸಲಾಯಿತು. ಬಳಿಕ ಪಿಯೂಷ್​ ಜೈನ್ ಅವರ ಮನೆ ಮೇಲೆ ದಾಳಿ ನಡೆಸಲಾಯಿತು.

ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಸುಗಂಧ ದ್ರವ್ಯಗಳನ್ನು ಪೂರೈಸುತ್ತಿದ್ದ M/s ಓಡೋಕೆಮ್ ಇಂಡಸ್ಟ್ರೀಸ್ ಪಾಲುದಾರರ ವಸತಿ ಆವರಣವನ್ನು ಸಹ ಶೋಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯಲ್ಲಿ ಶೋಧ ನಡೆಸಿದಾಗ ಅಪಾರ ಪ್ರಮಾಣದ ಹಣ ಬಂಡಲ್​ನಲ್ಲಿ ಸುತ್ತಿರುವುದು ಪತ್ತೆಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಕಾನ್ಪುರ್) ಅಧಿಕಾರಿಗಳ ಸಹಾಯದಿಂದ ನಗದು ಎಣಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕು ಸಾಗಣೆದಾರರಿಂದ ನಕಲಿ ಇನ್‌ವಾಯ್ಸ್‌ಗಳ ಮೂಲಕ ಮತ್ತು ಇ-ವೇ ಬಿಲ್‌ಗಳಿಲ್ಲದೆ ಸರಕುಗಳ ರವಾನೆಗೆ ಹಣವನ್ನು ಲಿಂಕ್​​ ಮಾಡಲಾಗಿದೆ. ತೆರಿಗೆ ತಪ್ಪಿಸಲು ನಕಲಿ ಇನ್‌ವಾಯ್ಸ್‌ಗಳ ಸಂಸ್ಥೆ ಸ್ಥಾಪನೆ ಮಾಡಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಜಿಎಸ್‌ಟಿ ಪಾವತಿಸದೆ ಸರಕು ಸಾಗಣೆಗೆ ಬಳಸಲಾಗಿದ್ದ 200ಕ್ಕೂ ಹೆಚ್ಚು ನಕಲಿ ಇನ್‌ವಾಯ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 1.01 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

ಸದ್ಯ ಜಿಎಸ್‌ಟಿ ಕಾಯ್ದೆ ಕಲಂ 69ರನ್ವಯ ಉದ್ಯಮಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಗುರಿಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button