ಜಾಗತಿಕ ದಾಸ್ತಾನುಗಳು ಕಡಿಮೆ ಮಟ್ಟದಲ್ಲಿರುವುದರಿಂದ ಹಾಗೂ ನವೆಂಬರ್ 2014ರಂದು ಕೊನೆಯ ಹಂತ ತಲುಪಿದ್ದ ಯುಎಸ್ ಪ್ರಮಾಣಿತ ತೈಲವು (US Verified Crude Oil) ಅಕ್ಟೋಬರ್ 8ರಂದು ಪ್ರತಿ ಬ್ಯಾರೆಲ್‌ಗೆ 80 ಡಾಲರ್ ದಾಟಿದ್ದು ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಂಭಾವ್ಯ ಇಂಧನ ಬಿಕ್ಕಟ್ಟನ್ನು ಎದುರಿಸುವ ಸಲುವಾಗಿ ಕೇಂದ್ರ ಸರಕಾರವು ಈ ದಿಸೆಯಲ್ಲಿ ಅಲ್ಪಾವಧಿಯ ಹಾಗೂ ಮಧ್ಯಮ ಅವಧಿಯ ಯೋಜನೆಗಳನ್ನು ರೂಪಿಸಬೇಕಾಗಿದೆ.
ಇಲ್ಲದಿದ್ದಲ್ಲಿ, ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ (Petrol and Diesel Prices may touch Rs 150) ಬೆಲೆಯಿಂದ ತತ್ತರಿಸುತ್ತಿರುವ ಸಾಮಾನ್ಯ ಜನ ಪ್ರತಿ ಲೀಟರ್ ಪೆಟ್ರೋಲ್ಗೆ ರೂ 150 ಮತ್ತು ಡೀಸೆಲ್ಗೆ ರೂ 140 ಕೊಡಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಈಗಾಗಲೇ ಶಕ್ತಿ ಸಮೃದ್ಧ ರಾಷ್ಟ್ರ ಅಮೆರಿಕ (Power rich America) ಸೇರಿದಂತೆ ವಿಶ್ವವೇ ಜಾಗತಿಕ ಇಂಧನ ಬಿಕ್ಕಟ್ಟನ್ನು (Global Fuel Crisis) ಎದುರಿಸುತ್ತಿದೆ. ಬಿಕ್ಕಟ್ಟಿನ ತೀವ್ರತೆಯು ದೇಶಗಳು ಹಾಗೂ ಪ್ರಾಂತ್ಯಗಳನ್ನು ಅವಲಂಬಿಸಿವೆ. ಆದರೆ ಭಾರತದಲ್ಲಿ ಸರಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಅಥವಾ ಈ ಕುರಿತು ಯೋಜನೆಗಳನ್ನು ರೂಪಿಸದೇ ಇದ್ದರೆ ಸಾರ್ವಜನಿಕರಿಗೆ ಇದರ ಬಗ್ಗೆ ತಿಳಿಯುವ ಸಾಧ್ಯತೆ ಇರುವುದಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.