ಸಿನಿಮಾಸುದ್ದಿ

ಖ್ಯಾತ ನಟಿ ತಮನ್ನಾರಿಂದ ನಿರ್ಮಾಪಕರಿಗೆ 5 ಕೋಟಿ ರೂಪಾಯಿ ನಷ್ಟ! ಕಾರಣವೇನು ಗೊತ್ತಾ..?

ಕೆಲವೊಮ್ಮೆ ಟಿವಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋಗಳು(Reality Show)  ತುಂಬಾ ಜನಪ್ರಿಯವಾದರೆ, ಶೋ ನಡೆಸಿಕೊಟ್ಟ ನಟ ನಟಿಯರಿಗೆ ಕೈ ತುಂಬಾ ದುಡ್ಡು ದೊರೆಯುವುದು ಗ್ಯಾರಂಟಿ. ಆದರೆ ಅದೇ ರಿಯಾಲಿಟಿ ಶೋಗಳು ನಿರೀಕ್ಷೆಯ ಮಟ್ಟದ ಯಶಸ್ಸು ಕಾಣದೆ ಹೋದರೆ, ನಟ ನಟಿಯರು ಚಿತ್ರೀಕರಣವನ್ನು ಸಮಯಕ್ಕೆ ಮುಗಿಸದೆ ಇದ್ದರೆ ಮತ್ತು ಹಣವು ಸರಿಯಾಗಿ ನೀಡದಿದ್ದರೆ ಆಗ ಶುರುವಾಗುತ್ತೆ ಈ ಆರೋಪ ಪ್ರತ್ಯಾರೋಪಗಳ ಆಟ.

ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದ್ದು, ತೆಲುಗು ರಿಯಾಲಿಟಿ ಶೋನ (Telugu Reality Show) ಮಾಜಿ ನಿರೂಪಕಿ ಮತ್ತು ನಟಿ ತಮಗೆ ಬರಬೇಕಾದ ಹಣ ಇನ್ನೂ ನಿರ್ಮಾಪಕರು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರೆ, ಇತ್ತ ನಿರ್ಮಾಪಕರು ನಟಿಯಿಂದ ಇಷ್ಟೊಂದು ಹಣ ನಮಗೆ ನಷ್ಟವಾಗಿದೆ ಎಂದು ನಟಿಯನ್ನು ದೋಷಿಸಿದ್ದಾರೆ. ಯಾರಪ್ಪಾ ಇವರು ಅಂತೀರಾ?

ತೆಲುಗಿನ ‘ಮಾಸ್ಟರ್ ಚೆಫ್’ (MasterChef) ರಿಯಾಲಿಟಿ ಶೋನ ಮಾಜಿ ನಿರೂಪಕಿಯಾದ ನಟಿ ತಮನ್ನಾ ಭಾಟಿಯಾ (Tamannaah Bhatia) ತನಗೆ ಕೊಡಬೇಕಾದ ಹಣವು ಇನ್ನೂ ಕೊಡುವುದು ಬಾಕಿ ಇದೆ ಎಂದು ಆರೋಪಿಸಿ ನಿರ್ಮಾಪಕರಿಗೆ ಕಾನೂನು ನೋಟಿಸ್ ಕಳುಹಿಸಿದ್ದರು. ಇದರ ನಂತರ ರಿಯಾಲಿಟಿ ಶೋ ನಿರ್ಮಾಪಕರಾದ ಇನ್ನೋವೇಟಿವ್ ಫಿಲ್ಮ್ ಅಕಾಡೆಮಿ (IFA) ಸಹ ನಟಿ ತಮನ್ನಾರಿಂದ ನಮಗೆ ಬರೋಬ್ಬರಿ 5 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ದೂಷಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button