ವಿದೇಶ

ಹೆರಿಗೆ ನೋವಿನಲ್ಲೂ ಸೈಕಲ್ ತುಳಿದೇ ಆಸ್ಪತ್ರೆ ಸೇರಿದ ಮಹಾತಾಯಿ..!

ನ್ಯೂಜಿಲ್ಯಾಂಡ್ ಸಂಸದೆ ಜೂಲಿ ಅನ್ನೆ ಸಾಹಸ..

ನ್ಯೂಜಿಲೆಂಡ್​​ನ ಸಂಸದೆ ಜೂಲಿ ಅನ್ನೆ ಈ ಸಾಹಸ ಮಾಡಿದವರು. ಇವರು ರಾಜಕಾರಣಿಯಾಗುವುದಕ್ಕೂ ಮೊದಲು ಒಬ್ಬರು ಸೈಕ್ಲಿಸ್ಟ್​. ಆದರೆ ತುಂಬು ಗರ್ಭ, ಆ ಹೆರಿಗೆ ನೋವಿನ ಮಧ್ಯೆ ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ಸೈಕಲ್​ ತುಳಿದುಕೊಂಡು ಬಂದು ಆಸ್ಪತ್ರೆ ಸೇರಿ ಒಂದೇ ತಾಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದು ಇದೀಗ ಬಹುದೊಡ್ಡ ಸುದ್ದಿಯಾಗಿದೆ. ಒಂದು ಸುಂದರವಾದ, ಆರೋಗ್ಯಯುತವಾದ ಮಗುವಿಗೆ ಜನ್ಮ ನೀಡಿದ್ದಾರೆ. ಅದಾದ ಬಳಿಕ ಈ ಬಗ್ಗೆ ಫೇಸ್​ಬುಕ್​​ನಲ್ಲಿ ಪೋಸ್ಟ್​ ಹಾಕಿದ್ದಾರೆ. ಈಕೆಯ ಕೆಲಸಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಮಿಶ್ರ ಬೆಂಬಲ ವ್ಯಕ್ತವಾಗಿದೆ. ಈ ರೀತಿಯ ಮಹಾತಾಯಿಯನ್ನು ನಾನು ನೋಡೇ ಇಲ್ಲ ಅಂತ ಒಬ್ಬರು ಕಮೆಂಟ್​ ಮಾಡಿದ್ದಾರೆ.

ಹೆರಿಗೆಯಾದ ಬಳಿಕ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಅನ್ನೆ, ಬಿಗ್​ ನ್ಯೂಸ್​ ! ಇಂದು ಮುಂಜಾನೆ 3.04ಗಂಟೆ ಹೊತ್ತಿಗೆ ನಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಎಂಟ್ರಿಯಾಗಿದ್ದಾರೆ. ಈ ಸಲ ಹೆರಿಗೆಗೆ ಸೈಕಲ್ ತುಳಿದು ಕೊಂಡು ಹೋಗಿ ಅಡ್ಮಿಟ್ ಆಗುವ ಯೋಜನೆ ಇರಲಿಲ್ಲ. ಆದರೆ ಕೊನೆಯಲ್ಲಿ ಹಾಗೆಯೇ ಬರುವಂತಾಯ್ತು ಎಂದಿದ್ದಾರೆ. ಹಾಗೇ, ನನಗೆ 2 ಗಂಟೆ ಹೊತ್ತಿಗೆ ಹೆರಿಗೆ ನೋವು ಬರಲು ಶುರುವಾಯಿತು. ಆದರೆ ಅದು ತೀವ್ರವಾಗಿ ಇರಲಿಲ್ಲ. 2-3 ನಿಮಿಷಕ್ಕೊಮ್ಮೆ ಬಿಟ್ಟುಬಿಟ್ಟು ಬರುತ್ತಿತ್ತು. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ತೀವ್ರವಾಯಿತು. ನಾನು ಆಸ್ಪತ್ರೆ ಸೇರಿದ ಬಳಿಕ ನನಗೆ ಹೆರಿಗೆ ನೋವು ತೀವ್ರವಾಗಿ ಕಾಣಿಸಿಕೊಳ್ತು. ಒಂದು ತಾಸಿನ ಬಳಿಕ ಮಗು ಹುಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

ಮೊದಲ ಹೆರಿಗೆಗೂ ಹೀಗೆ ಮಾಡಿದ್ದ ಸಂಸದೆ!

ಈ ಸಂಸದೆ ಹೀಗೆ ಸೈಕಲ್​ ಹೊಡೆದುಕೊಂಡು ಹೋಗಿ ಹೆರಿಗೆಗೆ ಅಡ್ಮಿಟ್​ ಆಗಿದ್ದು ಇದೇ ಮೊದಲಲ್ಲ. 2018ರಲ್ಲಿ ಇವರು ತಮ್ಮ ಮೊದಲ ಮಗನಿಗೆ ಜನ್ಮ ನೀಡುವಾಗಲೂ ಸೈಕಲ್​ ತುಳಿದುಕೊಂಡು ಹೋಗಿಯೇ ಆಕ್ಲೆಂಡ್​ ನಗರದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಆಗ  ಈ ವಿಚಾರ ಕೂಡ ಸಖತ್​ ವೈರಲ್ ಆಗಿತ್ತು. ಇದೀಗ ಮತ್ತೆ ಎರಡನೇ ಬಾರಿ ಈ ಸಾಹಸ ಮಾಡಿದ್ದಾರೆ. ಇನ್ನೂ ನೆಟ್ಟಿಗರು ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಾಯಿ ಮಗುವಿಗೆ ಶುಭ ಹಾರೈಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button