ಇಂದಿನ ಜೀವನಶೈಲಿಯಲ್ಲಿ(Lifestyle) ಆಗುತ್ತಿರುವ ಬದಲಾವಣೆಯಿಂದ ಅಸಿಡಿಟಿ(Acidity) ಸಮಸ್ಯೆ ಅನೇಕರಿಗೆ ಕಾಡುತ್ತಿದೆ. ಕೆಲವೊಮ್ಮೆ ಜನರು ಸರಿಯಾದ ಆಹಾರದ ಕೊರತೆಯಿಂದ ಆಮ್ಲೀಯತೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಸ್ಯೆ ಸಾಮಾನ್ಯವಾಗಿರಬಹುದು, ಆದರೆ ಕೆಲವೊಮ್ಮೆ ಇದು ಗಂಭೀರವಾಗುತ್ತದೆ ಮತ್ತು ಜನರ ಸಮಸ್ಯೆಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ.
ಈ ಒಂದು ಸಮಸ್ಯೆ ಆರಂಭವಾದರೆ ಅದು ಹಲವಾರು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅನೇಕ ಜನರು ಅಸಿಡಿಟಿ ಮತ್ತು ಹೊಟ್ಟೆಯ ಸಮಸ್ಯೆಗಳಿಂದ(Health Problems) ಬಳಲುತ್ತಿದ್ದಾರೆ. ಇಗಂತೂ ಹೆಚ್ಚಿನ ವ್ಯಾಯಾಮ ಮಾಡದೆ, ಮನೆಯಲ್ಲಿಯೇ ಕೆಲಸ ಮಾಡುತ್ತಿರುವ ಕಾರಣ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದರ ಹಿಂದಿನ ಕಾರಣವೆಂದರೆ ಹೆಚ್ಚಿನ ಪ್ರಮಾಣದಲ್ಲಿ ಬಿಸಿ ಆಹಾರ ಅಥವಾ ಕರಿದ ಆಹಾರವನ್ನು ಸೇವಿಸುವುದು. ಇಂತಹ ಪದಾರ್ಥಗಳನ್ನು ತಿನ್ನುವುದರಿಂದ ಅಜೀರ್ಣ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆ. ಈ ವಿಷಯಗಳನ್ನು ತಪ್ಪಿಸಬೇಕಾದರೆ, ಆಹಾರದಲ್ಲಿ ಸಣ್ಣ ಬದಲಾವಣೆ ಅಗತ್ಯ.
ಅಸಿಡಿಟಿ ಇರುವವರು ಏನು ಸೇವಿಸಬೇಕು ಮತ್ತು ಅವರ ಆಹಾರ ಕ್ರಮ ಹೇಗಿರಬೇಕು ಎಂಬುದು ಇಲ್ಲಿದೆ
ಕಲ್ಲಂಗಡಿ
ಕಲ್ಲಂಗಡಿ ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸುತ್ತದೆ.ಇದರ ಸೇವನೆಯಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಮತ್ತು ಗ್ಯಾಸ್ ಉಂಟಾಗುವ ಸಮಸ್ಯೆ ಇರುವುದಿಲ್ಲ. ಕಲ್ಲಂಗಡಿಯಲ್ಲಿ ಬಾಳೆಹಣ್ಣಿನಂತಹ ನಾರಿನಂಶವೂ ಹೆಚ್ಚಿದ್ದು,ಇದು ಆಹಾರವನ್ನು ಜೀರ್ಣ ಮಾಡಲು ತುಂಬಾ ಪ್ರಮುಖವಾದ ಅಂಶಗಳನ್ನು ಹೊಂದಿದೆ. ಆಹಾರವು ಸರಿಯಾಗಿ ಜೀರ್ಣವಾಗಿದ್ದರೆ, ಹೊಟ್ಟೆಯಲ್ಲಿ ಗ್ಯಾಸ್ ರೂಪುಗೊಳ್ಳುವುದಿಲ್ಲ. ನೀವು ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ, ನೀವು ಕಲ್ಲಂಗಡಿ ಸೇವಿಸಬೇಕು. ಅಲ್ಲದೇ ಇದು ತೂಕ ಇಳಿಸಲು ಸಹ ಸಹಕಾರಿ ಎನ್ನಲಾಗುತ್ತದೆ.
ಬಾಳೆಹಣ್ಣು ತಿನ್ನಲು ಮರೆಯದಿರಿ
ಬಾಳೆಹಣ್ಣು ದೇಹಕ್ಕೆ ತುಂಬಾ ಆರೋಗ್ಯಕರ. ಇದು ಕ್ಯಾಲ್ಸಿಯಂ ಮತ್ತು ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಬಾಳೆಹಣ್ಣು ತಿಂದರೆ ಹೊಟ್ಟೆ ಉಬ್ಬರ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಇದು ಆಂಟಿ ಆಕ್ಸಿಡೆಂಟ್‌ಗಳು ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳನ್ನು ಸಮೃದ್ಧವಾಗಿ ಹೊಂದಿದೆ.