‘ಹರಿಕಥೆ ಅಲ್ಲ ಗಿರಿಕಥೆ’ ಶೂಟಿಂಗ್ ಮುಗಿಸಿದ ರಿಷಬ್ ಶೆಟ್ಟಿ ಟೀಂ
ರಿಶಬ್ ಶೆಟ್ಟಿ ಅಭಿನಯದ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದ ಶೂಟಿಂಗ್ ಕೆಲಸ ಆರಂಭವಾದ ಬಗ್ಗೆ ನಿಮಗೆ ಗೊತ್ತೇ ಇದೆ. ಇದೀಗ ಚಿತ್ರದ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಮುಂದಾಗಿದೆ.
ಸಂದೇಶ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಕಾಮಿಡಿ ಸಿನಿಮಾ ಇದಾಗಿದ್ದು, ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಇಬ್ಬರು ನಿರ್ದೇಶನ ಮಾಡಿದ್ದಾರೆ.
ಚಿತ್ರೀಕರಣ ಸಂಪೂರ್ಣವಾಗಿರುವ ಚಿತ್ರವೊಂದನ್ನು ರಿಶಬ್ ಶೆಟ್ಟಿ ಫಿಲಂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಚಿತ್ರದಲ್ಲಿ ತಪಸ್ವಿನಿ ಮತ್ತು ರಚನಾ ಇಂದರ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾನದಲ್ಲಿ ಅದಿತಿ ಪಾತ್ರದಲ್ಲಿ ಮಿಂಚಿದ್ದ ರಚನಾ ಇಂದರ್ ಗೆ ಇದು ಎರಡನೇ ಚಿತ್ರ.
ಸದ್ಯ ರಿಷಬ್ ಶೆಟ್ಟಿ ಕೈಯಲ್ಲಿ ಬೆಲ್ ಬಾಟಮ್ 2, ಕಾಂತಾರ, ರುದ್ರ ಪ್ರಯಾಗ, ಗರುಡ ಗಮನ ವೃಷಭ ವಾಹನ ಚಿತ್ರಗಳಿವೆ. ಕೆಲವು ಚಿತ್ರಗಳ ಶೂಟಿಂಗ್ ಮುಗಿದು ಬಿಡುಗಡೆಗೆ ಸಜ್ಜಾಗಿದ್ದರೆ, ಕೆಲವು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ.