Real Hulk: ಅರ್ಬಾಬ್ ಖಿಝೆರ್ ಹಾಯತ್(Arbab Khizer Hayat) ಹೆಸರಿನ ಈ ವ್ಯಕ್ತಿ ಖಾನ್ ಬಾಬಾ(Khan Baba) ಎಂಬ ಹೆಸರಿನಿಂದ ಫೇಮಸ್. ಸೋಷಿಯಲ್ ಮೀಡಿಯಾದಲ್ಲಿ ಈತನ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ಈತನ ತೂಕ ಬರೋಬ್ಬರಿ 436 ಕೆ.ಜಿ, ಆತ ಎದುರಿಗೆ ನಿಂತರೆ ಬಂಡೆಯೇ ನಿಂತಂತೆ. ಅಂದಹಾಗೆ ನಾವು ಹೇಳ್ತಿರೋದು ಪಾಕಿಸ್ತಾನ(Pakistan)ದ ಹಲ್ಕ್(Hulk) ಬಗ್ಗೆ. ಅರ್ಬಾಬ್ ಖಿಝೆರ್ ಹಾಯತ್(Arbab Khizer Hayat) ಹೆಸರಿನ ಈ ವ್ಯಕ್ತಿ ಖಾನ್ ಬಾಬಾ(Khan Baba) ಎಂಬ ಹೆಸರಿನಿಂದ ಫೇಮಸ್. ಸೋಷಿಯಲ್ ಮೀಡಿಯಾದಲ್ಲಿ ಈತನ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
ಪಾಕಿಸ್ತಾನದ ಖೈಬರ್ ಪ್ರಾಂತ್ಯದ ಅರ್ಬಾಬ್ ಖಿಝೆರ್ ಹಾಯತ್ ಅಲಿಯಾಸ್ ಖಾನ್ ಬಾಬಾ 18ನೇ ವಯಸ್ಸಿನಲ್ಲಿ ಇದ್ದಾಗ ವಿಪರೀತವಾಗಿ ದೇಹದ ತೂಕ ಹೆಚ್ಚುತ್ತಾ ಹೋಗಿತ್ತು. ಇದೇ ರೀತಿ ದೇಹದ ತೂಕ ಹೆಚ್ಚುತ್ತಾ ಹೆಚ್ಚುತ್ತಾ ಖಾನ್ ಬಾಬಾ ಬರೋಬ್ಬರಿ 436 ಕೆ.ಜಿ.ಗೆ ತಲುಪಿದ್ದಾನೆ.