
ಸಂಡೂರು ನಗರದ ಎಲ್.ಬಿ.ಕಾಲೋನಿಯ ಸ್ಮಾರ್ಟ್ ಕಿಡ್ ಅಬ್ಯಾಕಸ್ ಸೆಂಟರ್ ನಲ್ಲಿ ಕವಿತಾ ಮಿಡಿಯಾ ಸೋರ್ಸ್ ಪ್ರೈ.ಲಿ. ಮಹಿಳಾ ಧ್ವನಿ ಸಂಸ್ಥೆ (ರಿ) ಕೊಪ್ಪಳ ಮಕ್ಕಳಿಗೆ ನಟನಾ ಕೌಶಲ್ಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಉಮಾ. ಜಿ ಉದ್ಘಾಟಿಸಿದರು ಇದೇ ವೇಳೆ ಮಾತನಾಡಿದ ಅವರು ಮಕ್ಕಳಿಗೆ ರಜಾ ದಿನಗಳಲ್ಲಿ ಅವರಲ್ಲಿರುವ ಕೌಶಲ್ಯವನ್ನು ಹೊರಹಾಕಲು ಪಾಲಕರು ಪ್ರೋತ್ಸಾಹಿಸಿ,ಓದಿನ ಜೊತೆಗೆ ನಟನಾ ಕೌಶಲ್ಯ ಹಾಗೂ ನಾಯಕತ್ವ ಗುಣಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ಎಂದರು.
ಮಹಿಳಾ ಧ್ವನಿ ಸಂಸ್ಥಾಪಕಿ ಪ್ರಿಯದರ್ಶಿನಿ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಬದುಕಿನ ಕೌಶಲ್ಯಗಳು ಕೂಡ ಮುಖ್ಯ, ಕಲೆ,ಸಂಗೀತ,ನಟನೆಯಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗಿ ಓದಿನ ಆಸಕ್ತಿ ದ್ವಿಗುಣವಾಗುತ್ತದೆ.ಮಕ್ಕಳಿಗೆ ಯಾವುದಕ್ಕೂ ಒತ್ತಡ ಹಾಕದೆ ಆಸಕ್ತಿ ಇರುವ ಕ್ಷೇತ್ರದ ಕಡೆ ಹೆಚ್ಚಿನ ಗಮನ ಹರಿಸಿ ಎಂದರು.
ಇದೇ ವೇಳೆ ನಟನಾ ತರಬೇತಿದಾರರಾಗಿ ರಶ್ಮಿ ಕನಕಗಿರಿ,ವಾಣಿ ಮತ್ತಿತರು ಉಪಸ್ಥಿತಿ ಇದ್ದರು.ಸಂಡೂರು ನಗರದ ಮಕ್ಕಳು 10 ದಿನದ ನಟನಾ ಕೌಶಲ್ಯ ತರಬೇತಿ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-9448991621,6362880857.