‘ಪಿಎಂ ಕೇರ್ಸ್’ ಭಾರತ ಸರ್ಕಾರಕ್ಕೆ ಸೇರುವ ನಿಧಿಯಲ್ಲವೆಂದ ಕೇಂದ್ರ
ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿ ನಿಧಿಯಲ್ಲಿ ಪರಿಹಾರ ಕಾನೂನಿನ ಅಡಿಯಲ್ಲಿ ಒಂದು ಚಾರಿಟಬಲ್ ಟ್ರಸ್ಟ್, ಆಗಿದ್ದು ಇದರಲ್ಲಿನ ಫಂಡ್ ಭಾರತದ ಏಕೀಕೃತ ನಿಧಿಗೆ ಸೇರೋದಿಲ್ಲ ಅಂತ ದೆಹಲಿ ಹೈಕೋರ್ಟ್ ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಪಿಎಂ ಕೇರ್ಸ್ ನಲ್ಲಿ ಸಂಗ್ರಹವಾಗಿರೋ ನಿಧಿಯ ಕುರಿತಾಗಿ ಪಾರದರ್ಶಕತೆ ಬೇಕು. ಅಲ್ಲದೆ ಪ್ರಧಾನ ಮಂತ್ರಿ, ಗೃಹ ಮತ್ತು ರಕ್ಷಣಾ ಮತ್ತು ಹಣಕಾಸು ಸಚಿವರು ಮೊದಲಾದ ಟ್ರಸ್ಟಿಗಳಿಂದ ಸ್ಥಾಪಿಸಲ್ಪಟ್ಟ ನಿಧಿಯನ್ನು ಸರ್ಕಾರದ ನಿಯಂತ್ರಣವಿಲ್ಲದ ನಿಧಿಯಾಗಿ ಘೋಷಿಸಲಾಗಿದೆ ಅಂತ ದೇಶದ ನಾಗರಿಕರು ಅಸಮಾಧಾನ ಹೊಂದಿದ್ದಾರೆ. ಹೀಗಾಗಿ ‘ಪಿಎಂ ಕೇರ್ಸ್’ ಹೆಸರನ್ನು ‘ದಿ ಸ್ಟೇಟ್ ‘ ಅಂತ ಬದಲಿಸುವಂತೆ ವಕೀಲ ಸಮ್ಯಕ್ ಗಂಗ್ವಾಲ್ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ರು. ಪ್ರತಿಪಾದಿಸಲಾಗಿತ್ತು. ಈ ಕುರಿತು ಸದ್ಯ ಸ್ಪಷ್ಟನೆ ನೀಡಿರೋ ಕೇಂದ್ರ ಸರ್ಕಾರ ಪಿಎಂ ಕೇರ್ ಟ್ರಸ್ಟ್ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತದ ಸಿಎಜಿ ಪ್ಯಾನಲ್ ನ ಚಾಟರ್ಡ್ ಅಕೌಂಟೆಂಟ್ ಇದರ ಲೆಕ್ಕ ಪರಿಶೋಧನೆ ನಡೆಸ್ತಿದ್ದಾರೆ ಅಂತ ನ್ಯಾಯಾಲಯಕ್ಕೆ ಕೇಂದ್ರ ಅಫಿಡವಿಟ್ ಸಲ್ಲಿಸಿದೆ.
ಇನ್ನು ಈ ಅರ್ಜಿಯ ಮುಂದಿನ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 27 ಕ್ಕೆ ನಿಗದಿಪಡಿಸಿದೆ.
ಕೊವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಾಗರಿಕರಿಗೆ ನೆರವಾಗೋ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ 2020ರಲ್ಲಿ ಪಿಎಂ-ಕೇರ್ಸ್ ನಿಧಿಯನ್ನು ರಚಿಸಿದ್ದರು.