Omicron ಆತಂಕದ ನಡುವೆಯೇ ಸಮಾಧಾನಕರ ಸಂಗತಿ.!ತಜ್ಞರು ನೀಡಿದ ಅಭಿಪ್ರಾಯ.
ನವದೆಹಲಿ : ಒಂದೆಡೆ, ಹೆಚ್ಚುತ್ತಿರುವ ಕರೋನಾ (Coronavirus) ಪ್ರಕರಣಗಳ ನಡುವೆ, ಪ್ರಪಂಚದಾದ್ಯಂತ ಜನರ ಕಾಳಜಿ ಕೂಡಾ ಹೆಚ್ಚುತ್ತಿದೆ. ಈ ಮಧ್ಯೆ, ಮುಂದಿನ ವರ್ಷ ಏಪ್ರಿಲ್ ವೇಳೆಗೆ, ಮೊದಲಿನಂತೆಯೇ ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ ಎಂದು ಆರೋಗ್ಯ ತಜ್ಞರು ಭವಿಷ್ಯ ನುಡಿದಿದ್ದಾರೆ. ಏಪ್ರಿಲ್ ವೇಳೆಗೆ COVID-19 ದುರ್ಬಲಗೊಳ್ಳುತ್ತದೆ ಮತ್ತು ಸಾಮಾನ್ಯ ಶೀತಕ್ಕೆ ಮತ್ತೊಂದು ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ ವೇಳೆಗೆ ಕೊನೆಗೊಳ್ಳಲಿದೆ ಕೊರೊನಾ ಭೀತಿ :
ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾನಿಲಯದ ಮೆಡಿಸಿನ್ ಪ್ರಾಧ್ಯಾಪಕ ಪ್ರೊಫೆಸರ್ ಪಾಲ್ ಹಂಟರ್, ಭವಿಷ್ಯದಲ್ಲಿ ಕೊರೊನಾ (Coronavirus) ಪರಿಣಾಮ ಕೊನೆಗೊಳ್ಳಲಿದೆ ಎಂದಿದ್ದಾರೆ. ಇದು ಸಾಮಾನ್ಯ ವೈರಸ್ ಮತ್ತು ರೋಗದಂತೆ ಆಗಲಿದೆ ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ಹೊಸ ವರ್ಷದ ಮೊದಲು ಮತ್ತು ನಂತರ ಇಂಗ್ಲೆಂಡ್ ನಲ್ಲಿ ಯಾವುದೇ ಹೊಸ ನಿರ್ಬಂಧಗಳು (Corona restrictions) ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ.
ಕೋವಿಡ್-19 ಕೂಡಾ ಸಾಮಾನ್ಯ ನೆಗಡಿಯಂತೆ ಇರಲಿದೆ :
ಕೋವಿಡ್ (COVID) ಕೇವಲ ವೈರಸ್ ಆಗಿದ್ದು ಅದು ಏಪ್ರಿಲ್ 2022 ರ ನಂತರ ಇದು ಆತಂಕಕ್ಕೆ ಕಾರಣವಾಗುವುದಿಲ್ಲ ಎಂದು ಹೇಳಿದ್ದಾರೆ. COVID-19 ಏಪ್ರಿಲ್ ನಂತರ ಸಾಮಾನ್ಯ ವೈರಸ್ ಆಗಲಿದೆ. ಹಾಗೆಯೇ ಇದು ಸಾಮಾನ್ಯ ಶೀತಕ್ಕೆ ಕಾರಣವಾಗುತ್ತದೆ ಎಂದು, ಪಾಲ್ ಹಂಟರ್ ಹೇಳಿದ್ದಾರೆ.
ಓಮಿಕ್ರಾನ್ ನಿಂದ ಕಡಿಮೆ ಅಪಾಯ :
‘ಇದು ದೂರವಾಗದ ಕಾಯಿಲೆ, ಸೋಂಕು ಕಡಿಮೆಯಾಗುವುದಿಲ್ಲ. ಆದರೆ ಇನ್ನು ಮುಂದೆ ಇದು ಗಂಭೀರ ಕಾಯಿಲೆಯಾಗಿ ದೀರ್ಘಕಾಲ ಉಳಿಯುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕರೋನಾದ (Coronavirus) ಹೊಸ ರೂಪಾಂತರದ ಓಮಿಕ್ರಾನ್ (Omicron) ಕುರಿತು ಮಾತನಾಡಿದ ಅವರು, ಈ ಹೊಸ ರೂಪಾಂತರವು ಡೆಲ್ಟಾಕ್ಕಿಂತ ಹೆಚ್ಚು ಸಾಂಕ್ರಾಮಿಕವಾಗಿದೆ. ಆದರೆ ಅಪಾಯದ ವಿಚಾರಕ್ಕೆ ಬಂದರೆ, ಇದು ಇಲ್ಲಿಯವರೆಗೆ ಡೆಲ್ಟಾಕ್ಕಿಂತ 50-70% ಕಡಿಮೆಯಾಗಿದೆ ಎಂದು ಪಾಲ್ ಹಂಟರ್ ಹೇಳಿದ್ದಾರೆ.