ಇತ್ತೀಚಿನ ಸುದ್ದಿ

ಆಯುಷ್ಮಾನ್ ಆರೋಗ್ಯ ಕೇಂದ್ರ ಕಾಂಪೌಂಡ್ ಕಾಮಗಾರಿ ಕಳಪೆ:ಜಯರಾಮೇಗೌಡ ಆರೋಪ

ಪಾಂಡವಪುರ: ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡದ ಸುತ್ತ ತಡೆಗೋಡೆ ಕಾಮಗಾರಿಯು ನಡೆಯುತ್ತಿದ್ದು ತಳಪಾಯಕ್ಕೆ ಸಿಮೆಂಟ್ ಪ್ಲಾಸ್ಟಿಂಗ್ ಮಾಡದೆ ಗೋಡೆ ಪ್ಲಾಸ್ಟಿಂಗ್ ಮಾಡಿ ಬಣ್ಣವನ್ನು ಹೊಡೆಯುತ್ತಿದ್ದಾರೆ ಹಾಗೂ ಆಸ್ಪತ್ರೆ ಸುತ್ತ ಕಾಂಕ್ರಿಟ್ ಮಾಡದೆ ತಮಗೆ ಅನುಕೂಲಕ್ಕೆ ತಕ್ಕಂತೆ ಕೆಲಸ ನಿರ್ವಹಿಸುತ್ತಿದ್ದಾರೆ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಜಯರಾಮೆಗೌಡ ಆರೋಪ ಮಾಡಿದರು.

ತಾಲ್ಲೂಕಿನ ಕನಗನಮರಡಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಪಕ್ಕದಲ್ಲಿ ಆರೋಗ್ಯ ಇಲಾಖೆಯ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡವಿದ್ದು ಹಳೆಯ ಕಟ್ಟಡವಾಗಿರುವುದರಿಂದ ಕಟ್ಟಡ ನವೀಕರಣಕ್ಕೆ ಕಾಮಗಾರಿ ನಡೆಯುತ್ತಿದ್ದು ಕಟ್ಟಡ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಿದ್ದು ಕಾಮಗಾರಿಯು ಸರಿಯಾಗಿ ಮಾಡುತ್ತಿಲ್ಲ ಎಂದು ಆರೋಪ ಕೇಳಿ ಬಂದಿದೆ

ಕನಗನಮರಡಿ ಗ್ರಾಮದ ಮುಖಂಡ ಜಯರಾಮೇಗೌಡ ಮಾತನಾಡಿ ನಮ್ಮ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಿದ್ದು ಇದಕ್ಕೆ ಕಾಂಪೌಂಡ್ ನಿರ್ಮಾಣ ಮಾಡಲು ಕಾಮಗಾರಿ ಪ್ರಾರಂಭಿಸಿದ್ದು ತಳಪಾಯವನ್ನೇ ಸರಿಯಾಗಿ ಮಾಡಿಲ್ಲ ಆಗಲೇ ಗೋಡೆಗೆ ಬಣ್ಣ ಹೊಡೆಯುತ್ತಿದ್ದಾರೆ ಒಳಗಡೆ ಸರಿಯಾಗಿ ಸಿಲಿಂಗ್ ಮಾಡಿಲ್ಲ ಮಳೆ ಬಂದರೆ ನೀರು ಹೋಗಲು ಪೈಪ್ ಲೈನ್ ಹಾಕಿಲ್ಲ ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಗಮನಕ್ಕೆ ತಂದಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಗೇಟ್ ಮಾಡಿದ್ದಾರೆ ಒಳಗಡೆ ನಾಯಿಗಳು ನುಗ್ಗುವ ಹಾಗೆ ಮಾಡಿದ್ದಾರೆ ಆಸ್ಪತ್ರೆಗೆ ಬಂದವರು ನಾಯಿ ಕಡಿತಕ್ಕೆ ಒಳಗಾಗಿ ಅವರ ಹತ್ತಿರನೆ ಚಿಕಿತ್ಸೆ ಪಡೆಯಬೇಕೆಂಬ ರೀತಿಯಲ್ಲಿ ಗೇಟ್ ಮಾಡಿಸಿದ್ದಾರೆ ಗುತ್ತಿಗೆದಾರನ ಕೇಳಿದರೆ ನೀನು ಯಾರೂ ನನ್ನ ಕೇಳುವ ಅಧಿಕಾರ ನಿನಗೆ ಇಲ್ಲ ಎಂದು ನಮಗೆ ಬೆದರಿಕೆ ಹಾಕುತ್ತಾರೆ ದಯವಿಟ್ಟು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಈ ಇಲಾಖೆಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಗುತ್ತಿಗೆದಾರ ಮಾಡಿರುವುದು ಸರಿಯಾಗಿ ಇದೆಯ ಎಂದು ಪರಿಶೀಲನೆ ಮಾಡಬೇಕು ಎಂದು ಒತ್ತಾಯ ಮಾಡಿದರು.

ವರದಿ ಕೃಷ್ಣ ಇ. :ಪಾಂಡವಪುರ

Related Articles

Leave a Reply

Your email address will not be published. Required fields are marked *

Check Also
Close
Back to top button