ನನ್ನಮ್ಮ ಸೂಪರ್ ಸ್ಟಾರ್ ಗೆದ್ದ ವಂಶಿಕ ಮಾಸ್ಟರ್ ಆನಂದ್ ಅವರಿಗೆ ಸಿಕ್ಕ ಹಣವೆಷ್ಟು ಗೊತ್ತಾ?
ಕಲರ್ಸ್ ಕನ್ನಡ ವಾಹಿನಿ ಕನ್ನಡಿಗರಿಗೆ ಅತ್ಯದ್ಭುತ ಕಾರ್ಯಕ್ರಮಗಳನ್ನು, ರಿಯಾಲಿಟಿ ಶೋಗಳನ್ನು ಕೊಟ್ಟಿದ್ದಾರೆ. ಈ ವರ್ಷ ಕಲರ್ಸ್ ಕನ್ನಡ ವಾಹಿನಿ ನನ್ನಮ್ಮ ಸೂಪರ್ ಸ್ಟಾರ್ ಎಂಬ ರಿಯಾಲಿಟಿ ಷೋ ಅನ್ನು ಶುರು ಮಾಡಿದ್ದರು. ಈ ರಿಯಾಲಿಟಿ ಶೋನಲ್ಲಿ ತಾಯಿ ಹಾಗು ಮಕ್ಕಳೇ ಸ್ಪರ್ದಿಗಳು. ಈ ರಿಯಾಲಿಟಿ ಶೋನಲ್ಲಿ ಹಲವಾರು ಸೆಲೆಬ್ರಟಿ ತಾಯಿ ಮಕ್ಕಳು ಭಾಗವಹಿಸಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಅನುಪಮಾ ಗೌಡ ಅವರು ನಿರೂಪಣೆಯ ಜವಾಬ್ದಾರಿಯನ್ನು ತೆಗೆದುಕೊಂಡರೆ, ಸೃಜನ್ ಲೋಕೇಶ್, ಅನು ಪ್ರಭಾಕರ್ ಹಾಗು ಹಿರಿಯ ನಟಿ ತಾರಾ ಅವರು ಜಡ್ಜ್ ಆಗಿ ಕೆಲಸ ಮಾಡಿದ್ದಾರೆ. ಇವತ್ತು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಷೋ ನ ಫಿನಾಲೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಮೊದಲ ಸ್ಥಾನವನ್ನು ಅಂದರೆ ವಿನ್ನರ್ ಆಗಿ ವಂಶಿಕ ಆನಂದ್ ಅವರನ್ನು ಘೋಷಣೆ ಮಾಡಿದ್ದಾರೆ. ಎರಡನೇ ಸ್ಥಾನವನ್ನು ಆರ್ಯ ಶ್ರೀರಾಮ್ ಅವರಿಗೆ ನೀಡಿದ್ದು, ಮೊದಲ ಸ್ಥಾನವನ್ನು ಮಾಸ್ಟರ್ ಆನಂದ್ ಮಗಳು ವಂಶಿಕ ಅವರನ್ನು ನಾನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನ ವಿನ್ನರ್ ಆಗಿ ಅನುಪಮಾ ಗೌಡ ಅವರು ಅನೌನ್ಸ್ ಮಾಡಿದ್ದಾರೆ.
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಷೋ ನ ವಿನ್ನರ್ ಆಗಿರುವ ವಂಶಿಕ ಆನಂದ್ ಅವರಿಗೆ ಬರೋಬ್ಬರಿ 5 ಲಕ್ಷ ಹಣವನ್ನು ಉಡುಗೊರೆಯಾಗಿ ಕೊಟ್ಟಿದ್ದು, ಇದರ ಜೊತೆಗೆ ಒಂದು ಮಕ್ಕಳ ಸೈಕಲ್ ಹಾಗು ಮಕ್ಕಳ ಬಟ್ಟೆಗಳು, ಚಾಕ್ಲೆಟ್ ಗಳನ್ನೂ ಉಡುಗೊರೆಯಾಗಿ ನೀಡಿದ್ದಾರೆ. ಇನ್ನೂ ವಿಶೇಷವಾಗಿ ಸೃಜನ್ ಲೋಕೇಶ್ ಅವರು ವಂಶಿಕ ಮಾಸ್ಟರ್ ಆನಂದ್ ಅವರಿಗೆ ಒಂದು ಚಿನ್ನದ ಸಾರವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
ಇನ್ನೂ ಎರಡನೇ ಸ್ಥಾನವನ್ನು ತೆಗೆದುಕೊಂಡಿರುವ ಆರ್ಯ ಶ್ರೀರಾಮ್ ಅವರಿಗೆ ಬರೋಬ್ಬರಿ 3 ಲಕ್ಷ ರೂಪಾಯಿ ಹಣವನ್ನು ಉಡುಗೊರೆಯಾಗಿ ನೀಡಿದ್ದು, ಇದರ ಜೊತೆಗೆ ಸಾಕಷ್ಟು ಮಕ್ಕಳ ಬಟ್ಟೆಗಳು, ಚಾಕ್ಲೆಟ್ ಗಳು, ಬಿಸ್ಕೆಟ್ ಗಳು ಹಾಗು ಆಟಿಕೆಗಳನ್ನು ಆರ್ಯ ಶ್ರೀರಾಮ್ ಅವರಿಗೆ ಉಡುಗೊರೆಯಾಗಿ ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ಕೊಟ್ಟಿದ್ದಾರೆ.