ದರ್ಶನ್, ಆರಾಧನಾರ ‘Kaatera’ ಸಿನಿಮಾ ಮೊದಲ ದಿನ ಕಲೆಕ್ಷನ್ ಮಾಡಿದ್ದೆಷ್ಟು?
ಚಾಲೆಂಜಿಂಗ್ ಸ್ಟಾರ್’ ದರ್ಶನ್, ಆರಾಧನಾ ನಟನೆಯ ‘ಕಾಟೇರ’ ಚಿತ್ರ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿತು ಎಂಬ ಪ್ರಶ್ನೆ ಉದ್ಭವವಾಗುವುದು. ಇನ್ನು ‘ಡಿ ಬಾಸ್’ ಫ್ಯಾನ್ಸ್ ಎದುರು ನೋಡುತ್ತಿದ್ದ ಈ ಚಿತ್ರಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದ್ದು, ಹಾಗಾದರೆ ಮೊದಲ ದಿನದ ಕಲೆಕ್ಷನ್ ಎಷ್ಟು?
ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ
ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ. ಡಿ 29ರಂದು ತೆರೆ ಕಂಡ ಈ ಚಿತ್ರ ಮೊದಲ ದಿನವೇ 19.78 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಮಧ್ಯರಾತ್ರಿಯಿಂದಲೇ ‘ಕಾಟೇರ’ ಶೋಗಳು ಫುಲ್ ಹೌಸ್ ಪ್ರದರ್ಶನ ಕಂಡಿದ್ದವು. ತಡರಾತ್ರಿ 12 ಗಂಟೆಯಿಂದಲೇ ಬ್ಯಾಕ್ ಟು ಬ್ಯಾಕ್ ಶೋ ಇಡಲಾಗಿತ್ತು. ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಕಾರಣದಿಂದ ಇನ್ನು ಇಂದು, ನಾಳೆ ವೀಕೆಂಡ್ ಇರೋದಿಕ್ಕೆ ಇನ್ನಷ್ಟು ವೀಕ್ಷಕರು ಥಿಯೇಟರ್‌ನಲ್ಲಿ ಸಿನಿಮಾ ನೋಡಬಹುದು.
ದೊಡ್ಡ ತಾರಾಗಣವಿರುವ ಸಿನಿಮಾ ಇದು
ದರ್ಶನ್ ಅವರು ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿಜಕ್ಕೂ ಇದು ಪೈಸಾ ವಸೂಲ್ ಸಿನಿಮಾ ಎನ್ನಲಾಗಿದೆ. ವಿನೋದ್ ಆಳ್ವ, ವೈಜನಾಥ್ ಬಿರಾದಾರ್, ಕುಮಾರ್ ಗೋವಿಂದ್, ಮಾ ರೋಹಿತ್, ಶ್ರುತಿ, ರವಿಚೇತನ್, ಜಗಪತಿ ಬಾಬು, ಪದ್ಮಾ ವಾಸಂತಿ ಮುಂತಾದವರು ‘ಕಾಟೇರ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ.
ನಾಯಕಿ ಆರಾಧನಾ ಬಗ್ಗೆ ಹೊಗಳಿದ್ದ ನಟ ದರ್ಶನ್
“ನಟಿ ರಕ್ಷಿತಾ ರಾಮ್ ಅವರು ತುಂಬಾ ಸಿನಿಮಾ ಮಾಡಿದ್ದಾರೆ. ನನ್ನ ಜೊತೆಗೆ ಹೀರೋಯಿನ್ ಆಗಿ ಕೆಲಸ ಶುರು ಮಾಡಿದವರು ಅವರು. ರಚಿತಾ ಇಂಡಸ್ಟ್ರಿಗೆ ಬಂದು 10 ವರ್ಷ ಆಗಿದೆ. ಖಂಡಿತ ಅದೇ ತರಹ ಆರಾಧನಾ ಸ್ಟ್ಯಾಂಡ್ ಆಗುತ್ತಾರೆ. ಆರಾಧನಾ ಒನ್ ಟೇಕ್ ಆರ್ಟಿಸ್ಟ್. ಆರಾಧನಾ ತಾಯಿ ಮಾಲಾಶ್ರೀ. ನಾನು ಅವರ ಬಗ್ಗೆ ಹೇಳಬೇಕಾ? ಅವರು ಯಾರ ಮುಂದೆ ನಿಂತರೂ ಬಡಿದು ಬಾಯಿಗೆ ಹಾಕಿಕೊಳ್ಳುತ್ತಾರೆ” ಎಂದು ಆರಾಧನಾ ಅವರನ್ನು ದರ್ಶನ್ ಹೊಗಳಿದ್ದರು.
ಮಗಳ ಸಿನಿಮಾಕ್ಕೆ ಮಾಲಾಶ್ರೀ ಬೆಂಬಲ
ಇನ್ನು ಮಾಲಾಶ್ರೀ ಅವರು ಮಗಳ ಸಿನಿಮಾಕ್ಕೆ ಸಖತ್ ಬೆಂಬಲ ನೀಡಿದ್ದಾರೆ. ತಾಯಿಯಾಗಿ ಅವರು ಆರಾಧನಾ ಜೊತೆ ಸಿಕ್ಕಾಪಟ್ಟೆ ಸಿನಿಮಾ ಪ್ರಚಾರ ಮಾಡಿದ್ದರು. ಒಟ್ಟಿನಲ್ಲಿ ಆರಾಧನಾ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ಮುಂದಿನ ದಿನಗಳಲ್ಲಿ ಅವರ ಸಿನಿಮಾ ಭವಿಷ್ಯ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.