ಸೈಫ್ ಆಲಿಖಾನ್ (Saif Ali Khan) ಮಗಳು ಸಾರಾ ಆಲಿಖಾನ್ (Sara Ali Khan) ಇತ್ತೀಚೆಗಷ್ಟೆ ನಟಿ ಜಾಹ್ನವಿ ಕಪೂರ್ (Janhavi Kapoor) ಜೊತೆ ಕೇದಾರನಾಥ (Kedarnath Temple) ಯಾತ್ರೆ ಮುಗಿಸಿ ಬಂದಿದ್ದಾರೆ. ಈ ಅದ್ಬುತ ಪ್ರವಾಸದ ಫೋಟೋವನ್ನು ನಟಿ ಸಾರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅನೇಕರು ಧರ್ಮದ ವಿಚಾರದಲ್ಲಿ ಆಕೆಯನ್ನು ಟ್ರೋಲ್ ಮಾಡಿದ್ದಾರೆ.
ಇಂದು ನಟಿ ಸಾರಾ ಆಲಿಖಾನ್ ಅವರ ಹುಟ್ಟುಹಬ್ಬ. ಅವರ ಅಭಿಮಾನಿಗಳು ಶುಭ ಕೋರಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನ ಕಳುಹಿಸುತ್ತಿದ್ದಾರೆ. ಇದೇ ವೇಳೆ ಕೆಲವು ಮಂದಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ
ನಟಿ ಸಾರಾ ಟ್ರೋಲ್ ಆಗಲು ಕಾರಣ ಇತ್ತೀಚೆಗೆ ಅವರು ನಡೆಸಿದ್ದ ಕೇದಾರನಾಥ ಯಾತ್ರ. ನಟಿ ಜಾಹ್ನವಿ ಕಪೂರ್ ಜೊತೆ ಅವರು ಕೇದರಾನಾಥ್ಗೆ ಭೇಟಿ ನೀಡಿದ್ದಾರೆ. ಈ ಫೋಟೋಗಳನನು ತಮ್ಮ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ
ಕೆಲವರು ಈ ಫೋಟೋಗೆ ಮೆಚ್ಚಿದ್ದರೆ, ಮತ್ತೆ ಕೆಲವರು ಇಸ್ಲಾಂ ಧರ್ಮದವರಾದ ನೀವು ಕೇದಾರನಾಥ ಯಾತ್ರೆ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಅನೇಕರು ಅವರ ಧರ್ಮ ಉಲ್ಲೇಖಿಸಿ ಟ್ರೋಮ್ ಮಾಡಿದ್ದಾರೆ