ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ
ಶಿರಸಿ: ಶುಕ್ರವಾರ ನಗರದ ಅಂಚೆ ವೃತ್ತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಖಾಸಗೀಕರಣ, ನಿರುದ್ಯೋಗ ಸಮಸ್ಯೆ ಪ್ರಶ್ನಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ ಉತ್ತರ ಕನ್ನಡ ಜಿಲ್ಲಾ ಯುವಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆ ನಡೆಸಲಾಯಿತು.
ರಾಷ್ಟ್ರೀಯ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿಯಾದ ಅನಿಲ್ ಯಾದವ್,
ಕಾರ್ಯದರ್ಶಿ ಸುರಭಿ ತ್ರಿವೇದಿ, ರಾಜ್ಯ ಯುವಕಾಂಗ್ರೆಸ್ ಉಪಾಧ್ಯಕ್ಷ ಭವ್ಯಾ, ಪ್ರಧಾನ ಕಾರ್ಯದರ್ಶಿ ಆರಿಫ್, ಕಾರ್ಯದರ್ಶಿ ದಿಲೀಪ್, ಪ್ರ ಕಾರ್ಯದರ್ಶಿ ಅಬ್ದುಲ್ ದೇಸಾಯಿ, ದೀಪಿಕಾ ಹಾಗೂ ಸಯೇದ್ ಖಾಲಿದ ಅಹ್ಮದ್, ಜಿಲ್ಲಾ ಯುವ ಅಧ್ಯಕ್ಷ ಸಂತೋಷ ಶೆಟ್ಟಿ, ಕುಮಾರ ಜೋಶಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಕ್ಷೇತ್ರ ಉಸ್ತುವಾರಿ ಸುಷ್ಮಾ ರಾಜಗೋಪಾಲ, ಏ.ರವೀಂದ್ರ ನಾಯ್ಕ, ಜಿ.ಎನ್.ಹೆಗಡೆ ಮುರೇಗಾರ, ಜಿಲ್ಲಾ ವಕ್ತಾರ ದೀಪಕ ದೊಡ್ಡೂರು, ಜಗದೀಶ ಗೌಡ, ಇತರರು ಇದ್ದರು.
ಪ್ರತಿಭಟನೆಯಲ್ಲಿ ತಳ್ಳುಗಾಡಿಯಲ್ಲಿ ಖಾಲಿ ಸಿಲೆಂಡರ್, ಬೈಕ್ ಇಟ್ಟು ಪ್ರತಿಭಟಿಸಿದರೆ, ಮೆರವಣಿಗೆಯಲ್ಲಿ ಎತ್ತಿನ ಗಾಡಿ ಬಳಸಿದರು.