ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ರಾಜ್ಯ ಬಜೆಟ್ ಕುರಿತು ಪತ್ರಿಕಾ ಹೇಳಿಕೆ
ವಿಷಯ: 2022-2023ನೇ ಆಯವ್ಯಯದಲ್ಲಿ ಸರ್ಕಾರಿ/ಮಹಾನಗರ ಪಾಲಿಕೆ ಅಧಿಕಾರಿ/ನೌಕರರನ್ನು ಕಡೆಗಣಿಸಿರುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಬಹುನಿರೀಕ್ಷೆಯ 7ನೇ ವೇತನ ಆಯೋಗ ಜಾರಿಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿ/ನೌಕರರು ಮತ್ತು ಪುರಸಭೆ, ನಗರಸಭೆ ಅಧಿಕಾರಿ/ನೌಕರರು ಬಹುನಿರೀಕ್ಷೆಯಲ್ಲಿರುವುದು ತಮಗೆ ಗೊತ್ತಿರುವ ವಿಷಯ ಆದರೆ 2023-2024ನೇ ಸಾಲಿನ ಆಯವ್ಯಯದಲ್ಲಿ ಯಾವುದೇ ಅನುದಾನವನ್ನು 7ನೇ ವೇತನ ಆಯೋಗ ಜಾರಿಗೆ ಮೀಸಲಿಡದೆ ಇರುವುದು ಖಂಡನೀಯ, ಆದ್ದರಿಂದ ಕೂಡಲೇ ದಿನಾಂಕ:01-04-2022ರಿಂದ ಜಾರಿಗೆ ಬರುವಂತೆ ಮಧ್ಯಂತರ ಪರಿಹಾರವನ್ನು ಘೋಷಣೆ ಮಾಡಿ ಹಾಗೂ ಎನ್.ಪಿ.ಎಸ್ ರದ್ದು ಮಾಡಿ ಓ.ಪಿ.ಎಸ್ ಪದ್ಧತಿಯನ್ನು ಜಾರಿಗೆ ತರಲು ಈ ಮೂಲಕ ಕೋರಲಾಗಿದೆ. ತಪ್ಪಿದ್ದಲ್ಲಿ, ಮುಂದಿನ ದಿನಗಳಲ್ಲಿ ಯಾವುದೇ ಮುನ್ಸೂಚನೆ ನೀಡದೆ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಮಹಾನಗರ ಪಾಲಿಕೆ ಅಧಿಕಾರಿ/ನೌಕರರು ನ್ಯಾಯಾಯುತ ಬೇಡಿಕೆಗಾಗಿ ಹೋರಾಟ ಮಾಡುವುದಾಗಿ ಎಂದು ಎ.ಅಮೃತ್ ರಾಜ್ ರವರು ಹೇಳಿದರು.