ಇತ್ತೀಚಿನ ಸುದ್ದಿಕ್ರೀಡೆ
WorldCup2022 ಪಾಕ್ ಬಗ್ಗು ಬಡಿದ ಭಾರತ ಕ್ರಿಕೆಟ್ ತಂಡ
ಮಹಿಳೆಯರ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನ ಮಣಿಸಿದೆ. ಮೌಂಟ್ ಮೌಂಗನುಯಿ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡು ಪಾಕ್ಗೆ 245 ರನ್ಗಳ ಗುರಿಯನ್ನ ನೀಡಿತ್ತು. ಈ ಗುರಿಯನ್ನ ಬೆನ್ನು ಹತ್ತಿದ ಪಾಕಿಸ್ತಾನ 43 ಓವರ್ ಆಡಿ ತನ್ನೆಲ್ಲಾ ವಿಕೆಟ್ಗಳನ್ನ ಕಳೆದುಕೊಂಡು ಸೋಲಿಗೆ ಶರಣಾಯಿತು. ಈ ಮೂಲಕ ಭಾರತ 107 ರನ್ಗಳ ಭರ್ಜರಿ ಗೆಲುವನ್ನ ಸಾಧಿಸಿದೆ. ಕನ್ನಡತಿ ರಾಜೇಶ್ವರಿ ಗಾಯಕ್ವಾಡ್, ಜೂಲನ್ ಗೋ ಸ್ವಾಮಿ, ಸ್ನೆಹ್ ರಾಣ ಮಾರಕ ಬೌಲಿಂಗ್ ಎದುರಾಳಿ ತಂಡ ನಿರುತ್ತರವಾಯ್ತು.
ಭಾರತ ಪರ ಗಾಯಕ್ವಾಡ್ 4 ವಿಕೆಟ್, ಜೂಲನ್ ಗೋಸ್ವಾಮಿ, ಸ್ನೇಹ್ ರಾಣಾ ತಲಾ 2 ವಿಕೆಟ್, ಮೇಘನಾ ಸಿಂಗ್, ದೀಪ್ತಿನ ಶರ್ಮಾ ತಲಾ 1 ವಿಕೆಟ್ ಪಡೆದು ಮಿಂಚಿದ್ರು.