ಅಮೆರಿಕದ(America) ಅಧ್ಯಕ್ಷ ಜೋ ಬೈಡೆನ್(Joe Biden) ಅವರು ಅಮೇರಿಕದಲ್ಲಿ ನೆಲೆಸಿರುವ ಭಾರತೀಯ ರವಿ ಚೌಧರಿಯನ್ನು(Ravi Chaudhary) ಪೆಂಟಗನ್‌ನಲ್ಲಿರುವ(Pentagon) ಪ್ರಮುಖ ಸ್ಥಾನಕ್ಕೆ ನಾಮಿನೇಟ್ ಮಾಡುವ ಇಂಗಿತವನ್ನು ಪ್ರಕಟಿಸಿದ್ದಾರೆ. ಮಾಜಿ ವಾಯುಪಡೆಯ ಅಧಿಕಾರಿ, ರವಿ ಚೌಧರಿ ಅವರನ್ನು ವಾಯುಪಡೆಯ ಸ್ಥಾಪನೆಗಳು, ಶಕ್ತಿ ಮತ್ತು ಪರಿಸರ ಖಾತೆಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ನಾಮಿನೇಟ್ ಮಾಡಲಾಗಿದೆ.
ಈ ಪ್ರಮುಖ ಪೆಂಟಗನ್ ಸ್ಥಾನಕ್ಕೆ ಅವರು ಪ್ರಮಾಣ ವಚನ ಸ್ವೀಕರಿಸುವ ಮೊದಲು ಅವರು ಯುನೈಟೆಡ್ ಸ್ಟೇಟ್ಸ್ ಸೆನೆಟ್ ನಿಂದ ದೃಢೀಕರಿಸಬೇಕಾಗಿದೆ. ರವಿ ಚೌಧರಿ ಈ ಹಿಂದೆ ಯುಎಸ್ ಸಾರಿಗೆ ಇಲಾಖೆಯಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು, ಅಲ್ಲಿ ಅವರು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ನಲ್ಲಿ ಕಛೇರಿಯ ಸುಧಾರಿತ ಕಾರ್ಯಕ್ರಮಗಳು ಮತ್ತು ನಾವೀನ್ಯತೆಯ ನಿರ್ದೇಶಕರಾಗಿದ್ದರು ಎಂದು ವೈಟ್ ಹೌಸ್ ಬಿಡುಗಡೆ ಮಾಡಿದ ಅವರ ಒಂದು ಬಯೋದಲ್ಲಿ ತಿಳಿಸಲಾಗಿದೆ.
ವಿಮಾನಯಾನ ಕಾರ್ಯಚರಣೆಯಲ್ಲಿ ಹೆಸರುವಾಸಿ
ಇದರಲ್ಲಿ, ರವಿ ಚೌಧರಿ ಅವರು ಎಫ್‌ಎಎ ಯ ಬಾಹ್ಯಾಕಾಶ ಕಾರ್ಯಾಚರಣೆಗೆ ಬೆಂಬಲವಾಗಿ ಸುಧಾರಿತ ಅಭಿವೃದ್ಧಿ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು ನಿರ್ವಹಿಸುವ ಹೊಣೆ ಹೊತ್ತಿದ್ದರು.ಸಾರಿಗೆ ಇಲಾಖೆಯಲ್ಲಿರುವಾಗ, ಅವರು ರಾಷ್ಟ್ರವ್ಯಾಪಿ ಇರುವ ಒಂಬತ್ತು ಪ್ರದೇಶಗಳಲ್ಲಿ ವಿಮಾನಯಾನ ಕಾರ್ಯಾಚರಣೆಗಳ ಏಕೀಕರಣ ಮತ್ತು ಬೆಂಬಲದ ಜವಾಬ್ದಾರಿಯನ್ನು ಹೊಂದಿದ್ದ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಪ್ರದೇಶಗಳು ಮತ್ತು ಕೇಂದ್ರ ಕಾರ್ಯಾಚರಣೆಗಳನ್ನು ಸಹ ನಿರ್ವಹಿಸಿದರು.