ಸಿನಿಮಾಸುದ್ದಿ

Puneeth Rajkumar ನಿವಾಸಕ್ಕೆ CM ಭೇಟಿ: ತಿಥಿ ಸೇರಿದಂತೆ ಮುಂದಿನ ಕಾರ್ಯಗಳ ಬಗ್ಗೆ ಕುಟುಂಬದೊಂದಿಗೆ ಚರ್ಚೆ..!

Puneeth Rajkumar House: ಕಳೆದ ಶುಕ್ರವಾರ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Power Star Puneeth Rajkumar) ಅಕಾಲಿಕ ಮರಣ ಹೊಂದಿದರು. ಅಪ್ಪು(Appu) ಎಲ್ಲರನ್ನೂ ಅಗಲಿ ವಾರ ಕಳೆದರೂ ಶೋಕ ಮುಗಿಯುತ್ತಿಲ್ಲ. ಇಂದು ಸಹ ಪರಭಾಷಾ ನಟರು ರಾಜ್ ಕುಟುಂಬವನ್ನು(Raj Family) ಭೇಟಿ ಮಾಡಿ ಸಾಂತ್ವನ ಹೇಳಿದರು. ಸಂಜೆ ವೇಳೆಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಸಹ ಸದಾಶಿವನಗರದಲ್ಲಿರುವ ಪುನೀತ್ ಅವರ ಮನೆಗೆ ಭೇಟಿ ನೀಡಿದರು.

ಪುನೀತ್ ಅಂತಿಮ ದರ್ಶನ, ವಿಧಿವಿಧಾನಗಳನ್ನು ಯಾವುದೇ ತೊಂದರೆ ಇಲ್ಲದೆ ಸರ್ಕಾರ ನಡೆಸಿಕೊಟ್ಟ ಬಳಿಕ ಇಂದು ಸಿಎಂ ಬೊಮ್ಮಾಯಿ ಅವರು ಪುನೀತ್ ಅವರ ಮನೆಗೆ ಭೇಟಿ ನೀಡಿದರು.

ಮುಖ್ಯಮಂತ್ರಿ ಅವರು ಸಚಿವರಾದ ಆರ್ ಅಶೋಕ್ ಹಾಗೂ ಅಶ್ವಥ್ ನಾರಾಯಣ್ ಜೊತೆಯಲ್ಲಿ ಭೇಟಿ ನೀಡಿ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಧೈರ್ಯ ತುಂಬಿದರು.

ಈ ವೇಳೆ ರಾಘವೇಂದ್ರ ರಾಜ್ ಕುಮಾರ್, ಅವರ ಪುತ್ರ ಯುವ ರಾಜ್ ಕುಮಾರ್, ಚಿನ್ನೇಗೌಡರು ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button