SIT releases six photos : ಉತ್ತರ ಪ್ರದೇಶ(Uttar Pradesh) ದ ಲಿಖಿಂಪುರ ಖೇರಿ (Lakhimpur Kheri) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್ಐಟಿ(SIT) ಟೀಂ ಆರು ಮಂದಿ ಶಂಕಿತ ಆರೋಪಿಗಳ ಫೋಟೋ(Photo)ಗಳನ್ನ ರಿಲೀಸ್ ಮಾಡಿದೆ. ಅಕ್ಟೋಬರ್ 3ರಂದು ರೈತರ ಮೇಲೆ ಎಸ್ಯುವಿ(SUV) ವಾಹನ(Vehicle) ಹರಿದು ನಾಲ್ಕು ಮಂದಿ ಮೃತಪಟ್ಟಿದ್ದರು. ಬೆಂಕಿ ಹೊತ್ತಿಸಲಾದ ಅದೇ ಎಸ್ಯುವಿ ವಾಹನದ ಬಳಿ ನಿಂತಿರುವ ಆರು ಜನರ ಚಿತ್ರ ಈಗ ಬಿಡುಗಡೆಯಾಗಿದೆ.
ಈ ಘಟನೆಗೆ ಸಂಬಂಧಿಸದಂತೆ ಮಾಹಿತಿ ನೀಡುವವರ ವಿವರ ಬಹಿರಂಗ ಪಡಿಸುವುದಿಲ್ಲ ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ನೀಡುವವರಿಗೆ ಸೂಕ್ತ ಬಹುಮಾನ(Prize) ನೀಡಲಾಗುತ್ತೆ ಎಂದು ಎಸ್ಐಟಿ(SIT) ಹೇಳಿದೆ. ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಗಾಗಿ ಯುಪಿ ಸಿಎಂ ಯೋಗಿ ಆದಿತ್ಯಾನಾಥ್(Yogi Adityanath) ಸರ್ಕಾರ ಎಸ್ಐಟಿ ತಂಡವನ್ನು ರಚಿಸಿತ್ತು.
ಶಂಕಿತರ ಮಾಹಿತಿ ನೀಡುವಂತೆ SIT ಮನವಿ
ಬಿಜೆಪಿ ಕಾರ್ಯಕರ್ತರನ್ನು ಥಳಿಸಿರುವ ಘಟನೆಗೆ ಸಂಬಂಧಿಸಿದ ಹಲವು ಚಿತ್ರಗಳು ಹಾಗೂ ವಿಡಿಯೋಗಳನ್ನು ಎಸ್ಐಟಿ ಸಂಗ್ರಹಿಸಿದ್ದು, ಇದೀಗ ಶಂಕಿತರ ಫೋಟೋಗಳನ್ನು ಬಿಡುಗಡೆ ಮಾಡಿ, ಅವರ ಬಗ್ಗೆ ಏನಾದರು ಗೊತ್ತಿದರೆ ನೀಡುವಂತೆ ಜನರಿಗೆ ಎಸ್ಐಟಿ ಟೀಂ ಮನವಿ ಮಾಡಿಕೊಂಡಿದೆ. ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ ಘಟನೆ ಸಂಬಂಧ ವಿಚಾರಣೆಗಾಗಿ ಎಸ್ಐಟಿ ಈಗಾಗಲೇ ಸುಮಾರು ನಲವತ್ತಕ್ಕೂ ಹೆಚ್ಚು ರೈತರಿಗೆ ನೋಟಿಸ್ ನೀಡಿದೆ. ಇನ್ನೂ ಈಗಾಗಲೇ ಕೆಲ ಶಂಕಿತರನ್ನು ಕರೆಸಿ, ವಿಚಾರಣೆ ನಡೆಸಿದೆ.