ರಾಜ್ಯಸುದ್ದಿ

Diwali 2021 Offer: ಐಫೋನ್ 13 ಅನ್ನು 55,900 ರೂ.ಗೆ ನಿಮ್ಮದಾಗಿಸಿಕೊಳ್ಳವ ಸುವರ್ಣಾವಕಾಶ..!

ಐಫೋನ್ ತೆಗೆದುಕೊಳ್ಳುವ ಆಲೋಚನೆಯಲ್ಲಿರುವವರು Iphone13 ಕೊಳ್ಳಲು ಒಂದು ಸುವರ್ಣಾವಕಾಶ ಇಲ್ಲಿದೆ. ಏಕೆಂದರೆ ದೀಪಾವಳಿ (Diwali) ಪ್ರಯುಕ್ತ ಹೊಸದಾಗಿ ಬಿಡುಗಡೆ ಮಾಡಿದ ಐಫೋನ್ 13 ಭಾರಿ ರಿಯಾಯಿತಿಗಳೊಂದಿಗೆ ಲಭ್ಯವಿದೆ.ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಐಫೋನ್ 13 ಸರಣಿಯು ಈಗಾಗಲೇ ಖರೀದಿದಾರರ ಮನಗೆದ್ದಿದೆ. ಸ್ಮಾರ್ಟ್‍ಫೋನ್ ಬೆಲೆ ಹೆಚ್ಚಾಗಿದ್ದರೂ ಆ್ಯಪಲ್‍ನ ಅಧಿಕೃತ ಮರುಮಾರಾಟಗಾರರು ರಿಯಾಯಿತಿ ದರದಲ್ಲಿ ಸ್ಮಾರ್ಟ್‍ಫೋನ್ ಖರೀದಿಸಲು ಸಹಾಯ ಮಾಡುತ್ತಾರೆ. ಐಫೋನ್ 13 128GB ಅನ್ನು ಭಾರತದಲ್ಲಿ 79,900 ರೂ.ಗೆ ಬಿಡುಗಡೆ ಮಾಡಲಾಯಿತು. ಐಫೋನ್ 13 ಜೊತೆಗೆ, Apple Iphone13, Iphone13 mini, Iphone13 Pro ಮತ್ತು Iphone13 Pro Max ಅನ್ನು ಸಹ ಬಿಡುಗಡೆ ಮಾಡಿದೆ.

ಹಾಗಾಗಿ ನೀವು ಐಫೋನ್ 13 ಖರೀದಿಸಲು ಯೋಜಿಸುತ್ತಿದ್ದರೆ ಆ್ಯಪಲ್‍ನ ಅಧಿಕೃತ ಮರುಮಾರಾಟಗಾರ ಇಂಡಿಯಾ ಐಸ್ಟೋರ್ ಆ್ಯಪಲ್ 13ನಲ್ಲಿ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಸ್ಮಾರ್ಟ್‍ಫೋನ್‌ ಅನ್ನು 55,900 ರೂಪಾಯಿಗಳ ಪರಿಣಾಮಕಾರಿ ಬೆಲೆಯಲ್ಲಿ ಖರೀದಿಸಬಹುದು. ಅಂಗಡಿಯು 6000 ರೂ.ಗಳ ರಿಯಾಯಿತಿ ನೀಡುತ್ತಿದೆ. HDFC ಬ್ಯಾಂಕ್ ಕಾರ್ಡ್‍ಗಳ ಮೇಲೆ ಇಎಂಐ ಕೂಡ ಅನ್ವಯಿಸುತ್ತದೆ. ಇದರಿಂದ ಬೆಲೆ 73,900 ರೂ.ಗೆ ಇಳಿಕೆಯಾಗಿದೆ.

ನೀವು ಹಳೆಯ ಐಫೋನ್ ಹೊಂದಿದ್ದರೆ, ಮರುಮಾರಾಟಗಾರರು ನಿಮಗೆ ಸುಮಾರು 18,000 ರಿಯಾಯಿತಿ ನೀಡುತ್ತಾರೆ. ಹಳೆಯ ಐಫೋನ್ XR 64ಜಿಬಿ ಬೆಲೆ ರೂ 18,000 ವರೆಗೆ ಇರುತ್ತದೆ. ನಿಮ್ಮ ಹಳೆಯ ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ, ನೀವು 3000 ರೂಪಾಯಿಗಳ ಎಕ್ಚೇಂಜ್ ಬೋನಸ್ ಅನ್ನೂ ಪಡೆಯಬಹುದು. ಆದ್ದರಿಂದ ಬೆಲೆಯು 55,900 ರೂ.ಗೆ ಇಳಿಕೆಯಾಗುತ್ತದೆ. ನಿಮ್ಮ ಹಳೆಯ ಐಫೋನ್ 11 ಅಥವಾ ಹೆಚ್ಚಿನ ಮಾದರಿಗಳನ್ನು ನೀವು ವಿನಿಮಯ ಮಾಡಿಕೊಂಡರೆ, ನೀವು ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು.

Related Articles

Leave a Reply

Your email address will not be published. Required fields are marked *

Back to top button