ರಾಜ್ಯಸುದ್ದಿ

Channapatna ಬೊಂಬೆಗಳು ಸಾಗರೋತ್ತರ ಮಾರುಕಟ್ಟೆಗೆ ವಿಸ್ತರಣೆಗೆ ಸಹಾಯಹಸ್ತ: ಅಕ್ಟೋಬರ್​ 28ರಿಂದ ಭಾರತೀಯ ಕರಕುಶಲ ಮತ್ತು ಉಡುಗೊರೆ ಮೇಳ..!

ಜಗದ್ವಿಖ್ಯಾತ ಚನ್ನಪಟ್ಟಣದ ಬೊಂಬೆ (Channapatna toys) ಆಟಿಕೆಗಳಿಗೀಗ ಸಿಂಗಾಪುರದಲ್ಲೂ (singapore) ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಮುಖೇಶ್ ಅಂಬಾನಿ (mukesh ambani) ಅವರ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಬೆನ್ನುಲುಬಾಗಿ ನಿಂತಿರುವ ಖಲಾರ (Qalara)ವೇದಿಕೆಯು ಚನ್ನಪಟ್ಟಣದ ಆಟಿಕೆಗಳಿಗೆ ಮಾರುಕಟ್ಟೆ ಒದಗಿಸಲು ಮುಂದಾಗಿದೆ. ಖಲಾರ ಭಾರತದ ಬೃಹತ್ ಸಾಗರೋತ್ತರ ಬಿಟುಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ವೇದಿಕೆಯಾಗಿದ್ದು, ಭಾರತೀಯ ಕುಶಲಕರ್ಮಿ ಉತ್ಪನ್ನಗಳನ್ನು ಜಾಗತಿಕ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ರೂಪಿಸಿದೆ. ಇದರ ಭಾಗವಾಗಿ ಕರ್ನಾಟಕದ ಪ್ರಮುಖ ಸಾಂಪ್ರದಾಯಿಕ ಚನ್ನಪಟ್ಟಣದ ಆಟಿಕೆಗಳಿಗೆ ಸಿಂಗಾಪುರದಲ್ಲಿ ಹೊಸ ಗ್ರಾಹಕರನ್ನು ಖಲಾರ ಸೃಷ್ಟಿಸಿದೆ.

ಖಲಾರ ಸಹಭಾಗಿತ್ವದಲ್ಲಿ ದೆಹಲಿಯಲ್ಲಿ ಅಕ್ಟೋಬರ್ 28ರಿಂದ 31ರವರೆಗೆ ಆಯೋಜಿಸಲಾಗಿರುವ ಏಷ್ಯಾದ ಅತಿದೊಡ್ಡ ಭಾರತೀಯ ಕರಕುಶಲವಸ್ತುಗಳು ಮತ್ತು ಉಡುಗೊರೆಗಳ ಮೇಳದಲ್ಲಿ ಗೃಹಲಂಕಾರ, ಕಸೂತಿ, ಉಡುಗೊರೆ, ಒಳಾಂಗಣ ಮತ್ತು ಹೊರಾಂಗಣ ಆಂಲಕಾರಿಕೆಗಳು, ಅಡುಗೆಕೊಣೆ ಮತ್ತು ಊಟದಮನೆ ಆಲಂಕಾರಿಕ ವಸ್ತುಗಳು ಸೇರಿದಂತೆ 75,000 ಕ್ಕೂ ಮೀರಿದ ಕುಶಲಕರ್ಮಿಗಳು ಸಿದ್ದಪಡಿಸಿದ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ.

ರಿಲಯನ್ಸ್ ಬೆನ್ನೆಲುಬಾಗಿ ನಿಂತಿರುವ ಖಲಾರ ವೇದಿಕೆಯು ಸಾವಿರಾರು ಭಾರತೀಯ ಕುಶಲಕರ್ಮಿಗಳು ಸಿದ್ದಪಡಿಸಿದ ಕಲಾಕೃತಿಗಳಿಗೆ ಜಗತ್ತಿನಾದ್ಯಂತ ಮಾರುಕಟ್ಟೆಯನ್ನು ಒದಗಿಸುತ್ತಿದೆ. ತತ್ಪರಿಣಾಮ ಚಿನ್ನಮಲೈನಲ್ಲಿ ಕೈಮಗ್ಗದಿಂದ ನೇಯ್ದ ಕಿಚನ್ ಟವಲ್ ಗಳು ಲಾಸ್ ಏಂಜಲೀಸ್ ನಲ್ಲಿ, ಬಂಗಾಳದಲ್ಲಿ ಸಬೈ ಹುಲ್ಲನಿಂದ ತಯಾರಿಸಿದ ಊಟದಮೇಜು ಅಲಂಕಾರಿಕ ಚೌಕಗಳು ಹಾಂಗ್ ಕಾಂಗ್ ಮಾರುಕಟ್ಟೆಯಲ್ಲಿ, ಮಣಿಪುರದ ಲಾಂಗ್ಪಿ ಗ್ರಾಮದಲ್ಲಿ ತಯಾರಿಸಿದ ಮಡಿಕೆಗಳು ಕೆನಾಡಾದ ಮಾರುಕಟ್ಟೆಯಲ್ಲಿ, ಚನ್ನಪಟ್ಟಣದ ಆಟಿಕೆಗಳು ಸಿಂಗಾಪೂರ ಮಾರುಕಟ್ಟೆಯಲ್ಲಿ, ಸಹರನ್ ಪುರದ ಕೈಕೆತ್ತನೆ ಮರದ ಅಲಂಕಾರಿಕ ಕೃತಿಗಳು ಮಾರಿಷಸ್ ಮಾರುಕಟ್ಟೆಯಲ್ಲಿ, ಒಡಿಸಾದ ಕೈಯಲ್ಲಿ ರಚಿಸಿದ ಸುಂದರಕಲಾಕೃತಿಯ ಪಾನೀಯ ಪಾತ್ರೆಗಳು ಲಂಡನ್ ಮಳಿಗೆಗಳಲ್ಲಿ, ಆಗ್ರದಲ್ಲಿ ತಯಾರಿಸಿದ ಮೆದುಕಲ್ಲಿನ ದೀಪಗಳು ಯುನೈಟೆಂಡ್ ಕಿಂಗ್ಡಮ್ ಮಳಿಗೆಗಳಲ್ಲಿ ಲಭ್ಯವಿವೆ. ಜೈಪುರದ ಸಾಂಪ್ರದಾಯಿಕ ಆಭರಣಗಳು ಯುರೋಪ್, ಆಸ್ಟ್ರೇಲಿಯಾ, ಕೆನಡಾ, ಅಮೆರಿಕಾ ಮತ್ತಿತರ ದೇಶಗಳ ಮಾರುಕಟ್ಟೆಯಲ್ಲೂ ಲಭ್ಯವಾಗುತ್ತಿವೆ.

Related Articles

Leave a Reply

Your email address will not be published. Required fields are marked *

Back to top button