ಹಾಸನ: ಹಾಸನಾಂಬೆ ದೇವಾಲಯದ (Hasanamba Temple) ಹುಂಡಿ ಕಾರ್ಯ ಆರಂಭಗೊಂಡಿದ್ದು, ಭಕ್ತರು (Devotees) ತಮ್ಮ ನೋವು, ಸಮಸ್ಯೆಗಳನ್ನು ಬಗೆಹರಿಸು ತಾಯಿ ಎಂದು ಬರೆದು ಚೀಟಿಗಳನ್ನು ಹಾಕಿದ್ದಾರೆ. ಸ್ಥಳೀಯ.ಶಾಸಕರನ್ನು (MLA) ಬದಲಾಗುವಂತೆ ಮಾಡು ತಾಯಿ ಎಂದು ಕಾಗದದಲ್ಲಿ (Letter) ಬರೆದು ಹಾಕಲಾಗಿದೆ. ಹುಂಡಿ ಕಾರ್ಯ ಎಣಿಕೆಗೂ ಮುನ್ನ ಅಪಾರ ಚೀಟಿಗಳು ಲಭ್ಯವಾಗಿದ್ದು, ಫೋಟೋಗಳು ವೈರಲ್ (Viral Photo) ಆಗುತ್ತಿವೆ. ನವೆಂಬರ್ 6ರಂದು ಮಧ್ಯಾಹ್ನ 1.05 ನಿಮಿಷಕ್ಕೆ ಹಾಸನಾಂಬೆ ದೇವಾಲಯದ ಗರ್ಭಗುಡಿಯ ಮುಚ್ಚಲಾಗಿತ್ತು. ಈ ಬಾರಿ ಅ.28 ರಿಂದ ನ.6 ರವರೆಗೆ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಒಂಭತ್ತು ದಿನದಲ್ಲಿ ಏಳು ದಿನ ಮಾತ್ರ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಲಕ್ಷಾಂತರ ಭಕ್ತರು ಈ ಬಾರಿ ಅಮ್ಮನ ದರ್ಶನ ಪಡೆದು ಪುನೀತರಾಗಿದ್ದಾರೆ. 1000, 300 ರೂ ವಿಶೇಷ ಟಿಕೆಟ್, ಲಾಡು ಹಾಗೂ ಹುಂಡಿ ಕಾಣಿಕೆಯಿಂದ ಹೆಚ್ಚು ಆದಾಯ ನಿರೀಕ್ಷೆ ಮಾಡಲಾಗಿದೆ.
ಭಕ್ತರು ಬರೆದ ಚೀಟಗಳು
ನಿನ್ನ ಕೃಪೆಯಿಂದ ಹೊಳೆನರಸೀಪುದ ಎಂ.ಎಲ್.ಎ. ಬದಲಾಗಬೇಕು. ಜನರನ್ನು ಕಷ್ಟದಿಂದ ಪಾರುಮಾಡು H.D.ರೇವಣ್ಣ ಕುಟುಂಬ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದಾರೆ. ಅವರ ಕುಟುಂಬದವರನ್ನೆಲ್ಲಾ ಸೋಲಿಸಿ ಬಿಡು ತಾಯಿ. ಅವರು ಮುಂದೆ ಯಾರನ್ನು ಬರಲು ಬಿಡುತ್ತಿಲ್ಲ. ಹೊಳೆನರಸೀಪುರ ಜನತೆಗೆ ಒಳ್ಳೆಯದು ಮಾಡು ತಾಯಿ ಎಂದು ಬರೆಯಲಾಗಿದೆ.
ನನ್ನ ದೊಡ್ಡಮಗನಿಗೆ ಮದುವೆ ಮಾಡು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.90 ಪರ್ಸಂಟೇಜ್ ಬರಲಿ. ಒಂದು ವರ್ಷದೊಳಗೆ ಮನೆ ಕಟ್ಟಿದರೆ 301 ಕಾಣಿಕೆ ಹಾಕುತ್ತೇನೆ, ಕೊರೊನ ತೊಲಗಿಸಿ ಎಲ್ಲರಿಗೂ ಒಳ್ಳೆಯ ಆರೋಗ್ಯ ಕೊಡು. ನಮ್ಮ ಬೀದಿಯ ರಸ್ತೆ ಗುಂಡಿ ಬಿದ್ದಿದೆ ಅದನ್ನು ಸರಿ ಮಾಡಿಸು ಎಂದು ಹಾಸನದ 35 ನೇ ವಾರ್ಡ್ ನ ವ್ಯಕ್ತಿಯೊಬ್ಬರು ದೇವಿಗೆ ಕಾಗದದಲ್ಲಿ ಬರೆದು ಮನವಿ ಮಾಡಿಕೊಳ್ಳಲಾಗಿದೆ.