ದೊಡ್ಡವರ ಮಕ್ಕಳಿಗೆ ಬಡವರು(Poor People) ಅಥವಾ ಅವರಿಗಿಂತ ಕೆಳ ಹಂತದಲ್ಲಿ ಜೀವನ ನಡೆಸುತ್ತಿರುವವರನ್ನ ಕಂಡರೆ ಅಸಡ್ಡೆ. ಬಡವರ ಪ್ರಾಣಕ್ಕೆ ನಿಜಕ್ಕೂ ಈ ಜಗತ್ತಿನಲ್ಲಿ ಬೆಲೆ ಇಲ್ವಾ? ಶ್ರೀಮಂತರ ಮಕ್ಕಳು ಏನೇ ತಪ್ಪು ಮಾಡಿದರು ನಡೆಯುತ್ತಾ? ಅವರ ಹುಚ್ಚಾಟಕ್ಕೆ ಕೊನೆಯೆ ಇಲ್ವಾ? ಹಲವಾರು ಅಪಘಾತ(Accident) ಪ್ರಕರಣಗಳೇ ಇದಕ್ಕೆ ಸಾಕ್ಷಿ. ಶ್ರೀಮಂತ(Rich)ರ ಮಕ್ಕಳು ಅಥವಾ ಪ್ರಭಾವಿಗಳ ಮಕ್ಕಳು ಅಪಘಾತ ಮಾಡಿ, ಸಾಮಾನ್ಯರ ಬದುಕನ್ನು ಕಸಿದುಬಿಡುತ್ತಾರೆ.
ಆದರೆ ಅವರ ಮೇಲೆ ಮಾತ್ರ ಯಾವುದೇ ಕೇಸ್ ಆಗದೆ ಪೊಲೀಸರು(Police) ಬಿಟ್ಟು ಕಳುಹಿಸಿತ್ತಾರೆ. ಅಪಘಾತವಾದಾಗ ಅವರು ಗಾಡಿ ಚಾಲನೆ ಮಾಡುತ್ತಿರಲಿಲ್ಲ ಎಂದು ಹೇಳಿ ಡ್ರೈವರ್(Driver)ನನ್ನ ಜೈಲಿಗೆ ಹಾಕಿ ಕೇಸ್(Case) ಕ್ಲೋಸ್(Close) ಮಾಡುತ್ತಾರೆ ಪೊಲೀಸರು.
ಆದರೆ ರಾಜಸ್ಥಾನ(Rajasthan)ದಲ್ಲಿ ಪೊಲೀಸ್ ಅಧಿಕಾರಿಯ ಮಗನೊಬ್ಬ ಅಪಘಾತ ಮಾಡಿ ಸಾರ್ವಜನಿಕರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ತನ್ನ ಆಡಿ(Audi)ಕಾರನ್ನು ಅತಿ ವೇಗ(Over speed)ದಿಂದ ಓಡಿಸಿ ಅಪಘಾತ ಮಾಡಿದ್ದಾನೆ. ಘಟನೆಯಲ್ಲಿ ಸ್ಕೂಟಿ(Scootu) ಓಡಿಸಿಕೊಂಡು ಹೋಗುತ್ತಿದ್ದ ಸವಾರ ಮೃತಪಟ್ಟಿದ್ದಾನೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.