ರಾಜ್ಯ
Trending

ರಾಜ್ಯದ 5 ಜಿಲ್ಲೆಗೆ ರೆಡ್, 4 ಜಿಲ್ಲೆಗಳಿಗೆ ಆರೆಂಜ್​ ಅಲರ್ಟ್ ಘೋಷಣೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೆಚ್ಚು ಮಳೆ ಬೀಳುತ್ತಿದೆ. ಮುಂದಿನ ಎರಡು ದಿನಗಳ ಕಾಲ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರೆಡ್ ಅಲರ್ಟ್ : ಈ ಹಿನ್ನೆಲೆಯಲ್ಲಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದು (ಸೋಮವಾರ) ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಹಾವೇರಿ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನುಳಿದಂತೆ, ಚಾಮರಾಜನಗರ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಯಾದಗಿರಿ, ಬೀದರ್ ಹಾಗೂ ಗದಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ​ಘೋಷಣೆ ಮಾಡಲಾಗಿದೆ.

ಹೆಚ್ಚಿನ ಮಳೆ ಮುನ್ಸೂಚನೆ : ಜೊತೆಗೆ, ರಾಮನಗರ, ತುಮಕೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಯಚೂರು, ವಿಜಯನಗರ ಹಾಗೂ ಕೊಪ್ಪಳದಲ್ಲಿ ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಮಳೆ ವರದಿ : ಆಗುಂಬೆ, ಕೊಪ್ಪ, ಧರ್ಮಸ್ಥಳ, ಕಳಸ, ಸಿದ್ದಾಪುರ, ಬಾಳೆಹೊನ್ನೂರು, ಕ್ಯಾಸಲ್​​ರಾಕ್, ಶೃಂಗೇರಿಯಲ್ಲಿ ಭಾರಿ ಮಳೆಯಾಗಿದೆ. ಮಾಣಿ, ಕಾರ್ಕಳ, ಜೋಯ್ಡಾ, ಸುಳ್ಯ, ಪುತ್ತೂರು, ಮಂಕಿ, ಮಂಗಳೂರು, ಲೋಂಡಾ, ಕೊಟ್ಟಿಗೆಹಾರ, ಬೆಳ್ತಂಗಡಿ, ಬಂಟ್ವಾಳ, ಸೋಮವಾರಪೇಟೆ, ಶಿರಾಲಿ, ನಾಪೋಕ್ಲು, ಕದ್ರಾ, ಭಾಗಮಂಡಲ, ಔರಾದ್, ಉಪ್ಪಿನಂಗಡಿ, ಎನ್​.ಆರ್.​ಪುರ, ಮೂಡುಬಿದಿರೆ, ಮಸ್ಕಿ, ತ್ಯಾಗರ್ತಿ, ಗೇರುಸೊಪ್ಪ, ಸೇಡಂ, ಮಸ್ಕಿ, ಖಾನಾಪುರ, ಹಳಿಯಾಳ, ಬನವಾಸಿ, ಯಲ್ಲಾಪುರ, ನಿಪ್ಪಾಣಿ, ಮುದ್ದೇಬಿಹಾಳ, ಮಂಗಳೂರು, ಕುಮಟಾ, ಕುಷ್ಟಗಿ, ಗುರುಮಿಟ್ಕಲ್, ಕಮಲಾಪುರ, ಗದಗ, ಧಾರವಾಡ, ಚಿಂಚೋಳಿ, ಬೆಂಗಳೂರು ಹಾಗೂ ಅಜ್ಜಂಪುರದಲ್ಲಿ ಭಾನುವಾರ ಹೆಚ್ಚಿನ ಮಳೆಯಾಗಿದೆ.

ರಾಜಧಾನಿಯಲ್ಲಿ ಹೇಗಿದೆ ವಾತಾವರಣ : ಬೆಂಗಳೂರಿನ ಬಹುತೇಕ ಕಡೆ ಭಾನುವಾರ ಮಳೆಯಾಗಿದೆ. ಇಂದು ಕೂಡ ಮೋಡ ಕವಿದ ವಾತಾವರಣವಿದೆ. ನಗರದಲ್ಲಿ 26.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹೆಚ್​ಎಎಲ್​​ನಲ್ಲಿ 27.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 27.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹಲವೆಡೆ ಇಂದು ಶಾಲೆಗಳಿಗೆ ರಜೆ : ಭಾರಿ ಮಳೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಬೆಳಗಾವಿ, ಉಡುಪಿ, ಕೊಡಗು, ದಾವಣಗೆರೆ ಜಿಲ್ಲೆಗಳ ವಿವಿಧ ತಾಲೂಕುಗಳ ಶಾಲೆ, ಕಾಲೇಜುಗಳಿಗೆ ಸೋಮವಾರ (ಇಂದು) ರಜೆ ಘೋಷಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮ ವಹಿಸುವಂತೆ ಆಯಾ ಜಿಲ್ಲಾಧಿಕಾರಿಗಳು ಪ್ರಕಟಣೆ ಮೂಲಕ ಸೂಚನೆ ನೀಡಿದ್ದಾರೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button