ಇತ್ತೀಚಿನ ಸುದ್ದಿ
Trending

ವಿಮಾನ ಹೊರಡುವ ಮುನ್ನ ಈ ಶಬ್ದ ಆಗಲೇಬೇಕು, ಯಾಕೆ ಗೊತ್ತಾ?

ಟೇಕಾಫ್​ ಆದ ಕೆಲವೇ ಸೆಕೆಂಡ್​ಗಳಲ್ಲಿ ಅಹಮದಾಬಾದ್‌ ವಿಮಾನ ನಿಲ್ದಾಣ (Ahmedabad Airport) ದ ಬಳಿ ಏರ್​ ಇಂಡಿಯಾ (air india) ಪತನಗೊಂಡ ಸುದ್ದಿಯೂ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸಾಕಷ್ಟು ಕನಸುಗಳನ್ನು ಹೊತ್ತು ಬಾನೇತ್ತರಕ್ಕೆ ಹಾರಿದ ಅದೆಷ್ಟೋ ಜೀವಗಳು ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯನ್ನು ಕಂಡಾಗ ಈ ವಿಮಾನ ಪ್ರಯಾಣ ಎಷ್ಟು ಸೇಫ್ ಎನ್ನುವ ಪ್ರಶ್ನೆಯೊಂದು ನಿಮ್ಮಲ್ಲಿ ಬರಬಹುದು. ಆದರೆ ವಿಮಾನಯಾನ ಸಂಸ್ಥೆಗಳು ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ವೇಳೆಯಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತವೆ. ಅದರಲ್ಲಿಯೂ ಈ ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ವೇಳೆಯಲ್ಲಿ ಪಟಾಕಿ (fireworks) ಯನ್ನು ಸಿಡಿಸಲಾಗುತ್ತದೆಯಂತೆ. ಹಾಗಾದ್ರೆ ಇದರ ಹಿಂದಿನ ಉದ್ದೇಶವೇನು? ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ಆಗುವ ಎಷ್ಟು ನಿಮಿಷಗಳ ಮುಂಚಿತವಾಗಿ ಪಟಾಕಿ ಸಿಡಿಸಲಾಗುತ್ತದೆ? ಎನ್ನುವ ಕುರಿತಾದ ಕುತೂಹಲಕಾರಿ ಮಾಹಿತಿಯನ್ನು ನೀವಿಲ್ಲಿ ತಿಳಿದುಕೊಳ್ಳಿ.

ವಿಮಾನ ನಿಲ್ದಾಣಗಳಲ್ಲಿ ಪಕ್ಷಿಗಳು ಆಗಾಗ್ಗೆ ವಿಮಾನ ಹಾರಾಟದ ಸುರಕ್ಷತೆಗೆ ಅಪಾಯವನ್ನುಂಟು ಮಾಡಬಹುದು. ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ವೇಳೆ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ವಿಮಾನಗಳ ಮೇಲೆ ಅಪ್ಪಳಿಸುವುದರಿಂದ ಅಪಘಾತಗಳು ಸಂಭವಿಸಬಹುದು. ಈ ವಿಮಾನ ನಿಲ್ದಾಣಗಳಲ್ಲಿ ಪಕ್ಷಿಗಳ ನಿಯಂತ್ರಣವು ಅತ್ಯಗತ್ಯವಾಗಿದೆ. ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ವೇಳೆ ಹಕ್ಕಿಗಳ ಹಾರಾಟವನ್ನು ತಪ್ಪಿಸುವುದು ಬಹಳ ಮುಖ್ಯ. ಹೀಗಾಗಿ ಈ ಪಕ್ಷಿಗಳನ್ನು ಓಡಿಸಲು ವಿವಿಧ ರೀತಿಯ ಶಬ್ದಗಳು, ಲೇಸರ್ ಕಿರಣಗಳು ಹೀಗೆ ವಿವಿಧ ತಂತ್ರಗಳನ್ನು ಅನುಸರಿಸಲಾಗುತ್ತದೆ. ಪಟಾಕಿ ಸಿಡಿಸುವುದು ಅಥವಾ ಝೋನ್ ಗನ್ ಬಳಸಿ ಶಬ್ದಗಳನ್ನು ಮಾಡುವ ಪಕ್ಷಿಗಳ ಹಾರಾಟವನ್ನು ತಪ್ಪಿಸಲಾಗುತ್ತದೆ. ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ಆಗುವ ಐದು ನಿಮಿಷಗಳಿಗೆ ಮುಂಚಿತವಾಗಿ ಈ ರೀತಿ ಪಟಾಕಿ ಸಿಡಿಸಿ ಹಕ್ಕಿಗಳನ್ನು ಓಡಿಸಲಾಗುತ್ತದೆ.

ವಿಮಾನ ನಿಲ್ದಾಣದ ಅಕ್ಕ ಪಕ್ಕದಲ್ಲಿ ಪಕ್ಷಿಗಳಿಗೆ ಆಕರ್ಷಕವಲ್ಲದ ವಾತಾವರಣವನ್ನು ಸೃಷ್ಟಿಸುವುದು ಬಹಳ ಮುಖ್ಯವಾಗಿರುತ್ತದೆ. ಹಿನ್ನಲೆಯಲ್ಲಿ ಹುಲ್ಲು ಸೇರಿದಂತೆ ಮರ ಗಿಡಗಳನ್ನು ಬೆಳೆಯಲು ಅವಕಾಶ ಮಾಡಿಕೊಡುವುದಿಲ್ಲ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಆಹಾರ, ನೀರು ಅಥವಾ ವಸತಿ ಸೌಕರ್ಯಗಳನ್ನು ಕಡಿಮೆ ಮಾಡಲಾಗುತ್ತದೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸ ಮತ್ತು ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ ಪಕ್ಷಿಗಳನ್ನು ಆಕರ್ಷಿಸುವುದನ್ನು ತಡೆಯಲಾಗುತ್ತದೆ. ಈ ರೀತಿಯ ವಿಧಾನವನ್ನು ಅನುಸರಿಸುವ ಮೂಲಕ ಪಕ್ಷಿಗಳು ವಿಮಾನ ನಿಲ್ದಾಣದ ಪ್ರದೇಶಕ್ಕೆ ಬರದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ವೇಳೆ ಹಕ್ಕಿಗಳ ಹಾರಾಟವನ್ನು ತಪ್ಪಿಸುವುದು ಬಹಳ ಮುಖ್ಯವಾಗಿರುತ್ತದೆ. ಲ್ಯಾಂಡಿಂಗ್ ಸಮಯದಲ್ಲಿ ವಿಮಾನಗಳು 0-3000 ಅಡಿ ಎತ್ತರದಲ್ಲಿರುವ ಕಾರಣ ಹಕ್ಕಿಗಳ ಹಾರಾಟವಿದ್ದರೆ ಈ ವಿಮಾನಗಳಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಯೇ ಹೆಚ್ಚು ಎನ್ನಬಹುದು. ಒಂದು ವೇಳೆ  ಡಿಕ್ಕಿ ಹೊಡೆದರೆ ವಿಮಾನದ ಎಂಜಿನ್, ರೆಕ್ಕೆಗಳು ಹಾಗೂ ವಿಂಡ್ ಶೀಲ್ಡ್ ಗೆ ಹಾನಿಯಾಗಬಹುದು. ಅಪಘಾತಗಳು ಸಂಭವಿಸುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button