ರಾಜ್ಯ
Trending

ಮೆಟ್ರೊ ಮಹಿಳಾ ಪ್ರಯಾಣಿಕರ ಫೋಟೋ ತೆಗೆದು ಇನ್‌ಸ್ಟಾಗೆ ಅಪ್ಲೋಡ್, ಆಕ್ರೋಶ ಹೆಚ್ಚುತ್ತಿದ್ದಂತೆ ಖಾತೆ ಡಿಲೀಟ್

ಬೆಂಗಳೂರು : ನಮ್ಮ ಮೆಟ್ರೊದಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಬೆಂಗಳೂರು ನಗರದ ಜೀವನಾಡಿ ಎನಿಸಿಕೊಂಡಿದೆ. ಮಹಿಳಾ ಉದ್ಯೋಗಿಗಳಿಗೆ ಬಹಳ ಅನುಕೂಲವಾಗಿದೆ. ಆದರೆ ಈ ಸುದ್ದಿಯನ್ನು ಗಮನಿಸಿದರೆ ಮಹಿಳೆಯರಿಗೆ ಮೆಟ್ರೊ ಸೇಫ್ ಅಲ್ಲವೇನೋ ಎನ್ನುವಂತಿದೆ.ನಮ್ಮ ಮೆಟ್ರೊದಲ್ಲಿ ಪ್ರಯಾಣಿಸುವ ಮಹಿಳೆಯರ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಿ, ಅದನ್ನು ಬೆಂಗಳೂರು ಮೆಟ್ರೊ ಕ್ಲಿಕ್ಸ್ (ಮೆಟ್ರೊ ಚಿಕ್ಸ್) ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡುತ್ತಿರುವ ವಿಕೃತ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಮಹಿಳಾ ಪ್ರಯಾಣಿಕರು ಮೆಟ್ರೊ ನಿಲ್ದಾಣದಲ್ಲಿ ಸಂಚರಿಸುತ್ತಿರುವ, ಫೋನ್‌ನಲ್ಲಿ ಮಾತನಾಡುತ್ತಿರುವ, ಆಸನದಲ್ಲಿ ಕೂತು ನಿದ್ರಿಸುತ್ತಿರುವ, ಸ್ನೇಹಿತರ ಜೊತೆ ಪ್ರಯಾಣಿಸುತ್ತಿರುವ ಫೋಟೋ, ವಿಡಿಯೋಗಳನ್ನು ಚಿತ್ರೀಕರಿಸಿಕೊಂಡು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗುತ್ತಿತ್ತು. ಮಹಿಳೆಯರ ಮುಖವನ್ನು ಸ್ಪಷ್ಟವಾಗಿ ತೋರಿಸಲಾಗುತ್ತಿದೆ. ಇದರಿಂದ ಪರಿಚಯಸ್ಥರ ಎದುರು ಮುಜುಗರ ಅನುಭವಿಸುವಂತಾಗುತ್ತಿತ್ತು. ಫೋಟೋ ಜೊತೆಗೆ ಫೈಂಡ್ ಬ್ಯೂಟಿ ಗರ್ಲ್ಸ್ ಆನ್ ನಮ್ಮ ಮೆಟ್ರೊ ಅಂತ ಶೀರ್ಷಿಕೆ ಕೊಡಲಾಗಿದೆ. ಈ ಖಾತೆಯಿಂದ ಇದುವರೆಗೂ ಸುಮಾರು 13 ಪೋಸ್ಟ್‌ಗಳು ಅಪ್ಲೋಡ್ ಆಗಿವೆ. ಈ ಖಾತೆಗೆ ಸುಮಾರು 5690 ಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ಇದು ಟೆಲಿಗ್ರಾಂಗೂ ಲಿಂಕ್ ಆಗಿದ್ದು, ಅಲ್ಲಿ 1328 ಫಾಲೋವರ್ಸ್ ಇದ್ದಾರೆ.

ಬೆಂಗಳೂರು ಪೊಲೀಸರು, ಸೈಬರ್ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಿಕೃತರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.ಈ ಬಗ್ಗೆ ಮೆಟ್ರೊ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಮೆಟ್ರೊ ನಿಲ್ದಾಣ, ರೈಲಿನ ಒಳಗೆ ಮಹಿಳೆಯರಿಗೆ ತಿಳಿಯದಂತೆ ಅವರ ವಿಡಿಯೋ ಚಿತ್ರೀಕರಿಸುತ್ತಿರುವುದು ಗೊತ್ತಾಗಿದೆ. ಈ ಸಂಬಂಧ ನಿಗಮದಿಂದ ಇನ್‌ಸ್ಟಾ ಖಾತೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಈ ಖಾತೆ ನಿಷ್ಕ್ರಿಯ ಮಾಡುವಂತೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದೇವೆ. ಪ್ರಯಾಣಿಕರಿಗೆ ತೊಂದರೆ ಆಗುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದಿದ್ದಾರೆ.


Related Articles

Leave a Reply

Your email address will not be published. Required fields are marked *

Back to top button