
ಕುಣಿಗಲ್ : ಪಟ್ಟಣದ ಕುಣಿಗಲ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆದ ನವೀನ ಗೌಡ ಎಸ್ ಬಿ, ಆರಕ್ಷಕ ನಿರೀಕ್ಷಕರು ನನ್ನ ಎಲ್ಲಾ ದಲಿತ ಮುಖಂಡರುಗಳಿಗೂ ಹಾಗೂ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೂ ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳನ್ನು, ತಿಳಿಸುವುದರ ಮೂಲಕ ಇಂದು ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಬಗ್ಗೆ ಸಭೆ ಕರೆದು ದಲಿತ ಮುಖಂಡರುಗಳ ಸ್ವೀಕರಿಸಿ ಚರ್ಚೆಯನ್ನು ನಡೆಸಿದರು.
ಈ ಸಭೆಯಲ್ಲಿ ಭಾಗವಹಿಸಿದ ಆರ್ ಎನ್ ಹಟ್ಟಿರಂಗಯ್ಯ ( ರಂಗಣ್ಣ ) ನವರು ಮಾತನಾಡಿ ತಾಲೂಕಿನಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಇಡುವುದು ಕಡ್ಡಾಯವಾಗಿದೆ,, ಸರ್ಕಾರದ ಸುತ್ತೋಲೆ ಇದ್ದರೂ ಕೂಡ ಕೆಲವು ಇಲಾಖೆಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋಗಳನ್ನು ಇಡದೆ ಅವರಿಗೆ ಅವಮಾನವನ್ನು ಮಾಡಿದ್ದಾರೆ, ಸರ್ಕಾರಿ ಅಧಿಕಾರಿಗಳು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಿರುವುದು ಮರೆತಿದ್ದಾರೆ, ಈ ಕೂಡಲೇ ಎಚ್ಚೆತ್ತುಕೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋವನ್ನು ಎಲ್ಲ ಇಲಾಖೆಗಳಲ್ಲಿ ಕಡ್ಡಾಯವಾಗಿ ಇಡಬೇಕು ಎಂದು ಸಭೆಯಲ್ಲಿ ಚರ್ಚಿಸಿದರು.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ದಲಿತ ಮುಖಂಡರು ಎಸ್ ಟಿ ರಾಜು ರವರು ಅವರವರ ಮನೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋವನ್ನು ಇಟ್ಟುಕೊಳ್ಳಲಿ,ನಂತರ ಸರ್ಕಾರಿ ಕಚೇರಿಯಲ್ಲಿ ಇಡಬೇಕು ಎನ್ನುವ ಮಾಹಿತಿ ತಿಳಿಸಲಿ,ಎಂದು ಮಾತನಾಡಿದರು,, ಇದಕ್ಕೆ ಪ್ರತ್ಯುತ್ತರ ನೀಡಿದ ತಾಲೂಕು ದಲಿತ ಸೇನೆ ಉಪಾಧ್ಯಕ್ಷರಾದ “ಆರ್ ಎನ್ ಹಟ್ಟಿರಂಗಯ್ಯನವರು” ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಫೋಟೋ ಇಡಬೇಕು,ಎಂದು ಸುತ್ತೋಲೆ ಇದ್ದು ಅದನ್ನು ಅಧಿಕಾರಿಗಳು ಪಾಲನೆ ಮಾಡಬೇಕು, ದಲಿತ ಮುಖಂಡರ ಮನೆಗಳಲ್ಲಿ ಇದ್ದೇ ಇರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಮಧ್ಯ ಮಾರಾಟ ತೀವ್ರ ಹೆಚ್ಚಾಗಿದ್ದು ಇದಕ್ಕೆ ಸೂಕ್ತ ಕಡಿಯೋಣ ಹಾಕಬೇಕು , ಮಕ್ಕಳನ್ನೇ ನಂಬಿಕೊಂಡಿರುವ ತಂದೆ ತಾಯಿಯ ಜೀವನ ಚಿಂತಾ ಜನಕವಾಗಿದೆ, ಕೆಲಸಕ್ಕೂ ಹೋಗದೆ ಹಳ್ಳಿಗಳಲ್ಲಿ ಪ್ರತಿನಿತ್ಯ ಕುಡಿದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಇದಕ್ಕೆ ಪೋಲಿಸ್ ಇಲಾಖೆ ಹೆಚ್ಚೆಚ್ಚುಕೊಂಡು ಮಧ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿವಕುಮಾರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ದಲಿತ ಸೇನೆ ರಾಷ್ಟ್ರೀಯ ಸಂಘಟನೆ ತಾಲೂಕು ಅಧ್ಯಕ್ಷರಾದ ಡಿಸಿ ವರದರಾಜು ರವರು ಮಾತನಾಡಿ, ತಾಲೂಕು ದಂಡಾಧಿಕಾರಿಗಳು ಯಾವುದೇ ದಲಿತ ಕುಂದುಕೊರತ ಸಭೆಯನ್ನು ಈವರೆಗು ನಡೆಸಿಲ್ಲ, ಆದಷ್ಟು ಬೇಗ ತಾಲೂಕಿನಲ್ಲಿ ಇರುವಂತಹ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಕಡಿವಾಣ ಹಾಕಬೇಕು ಆದ್ದರಿಂದ ಮಾತನಾಡಿದರು, ಹಾಗೂ “ಡಿವೈಎಸ್ಪಿ ಓಂ ಪ್ರಕಾಶ್ “ಸಾಹೇಬರು ಕೂಡ ದಲಿತರ ಕುಂದು ಕೊರತೆ ಸಭೆಯನ್ನು ಮಾಡಿರುವುದಿಲ್ಲ, ದೊಡ್ಡ ದೊಡ್ಡ ಸಮಸ್ಯೆಗಳಿಗೆ ನಾವು ಉತ್ತರ ಕೊಡುವ ಪರಿಸ್ಥಿತಿಯಲ್ಲಿ ಇಲ್ಲ, ಬಿವೈ ಎಸ್ ಪಿ ಸಾಹೇಬರು ಈ ಕೂಡಲೇ ದಲಿತರ ಕುಂದು ಕೊರತೆ ಸಭೆಯನ್ನು ಅತಿ ತುರ್ತಾಗಿ ಮಾಡಬೇಕು ಎಂದು ಮಾತನಾಡಿದರು.
ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಪೊಲೀಸ್ ಸ್ಟೇಷನ್ ದಲಿತರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ “ವೈ ಎಚ್ ಹುಚ್ಚಯ್ಯ, ರವರು ಮಾತನಾಡಿ ಯಾವುದೇ ರೀತಿ ದಲಿತರ ದೂರುಗಳಿಗೆ ಕೌಂಟರ್ ಕೇಸ್ ಮಾಡುವ ಹಾಗಿಲ್ಲ, ಯಾವುದೇ ಒತ್ತಡಕ್ಕೆ ಮಣಿಯದೆ ಪೊಲೀಸ್ ಇಲಾಖೆಯವರು ಕರ್ತವ್ಯ ನಿರ್ವಹಿಸಬೇಕು, ನ್ಯಾಯ ಇರುವ ಕಡೆ ಗಮನಹರಿಸಿ ಅನ್ಯಾಯವಾಗಿರುವ ದಲಿತರಿಗೆ ಸದಾ ಸೂಕ್ತ ರಕ್ಷಣೆಗೆ ನಿಲ್ಲಬೇಕು ಎಂದು ತಿಳಿಸಿದರು.
ಏಪ್ರಿಲ್ 14ರಂದು ತುಮಕೂರಿನಲ್ಲಿ ಅಂಬೇಡ್ಕರ್ ಅವರ ಪುತ್ತಳಿ ಅನಾವರಣ ಇರುವ ಕಾರಣ ತುಮಕೂರಿನಲ್ಲಿ ನಾಲ್ಕು ಗಂಟೆಗೆ ಕಾರ್ಯಕ್ರಮ ಇದ್ದು, ನಮ್ಮ ತಾಲೂಕಿನ ಸರ್ಕಾರಿ ಅಧಿಕಾರಿಗಳು ಬೆಳಗ್ಗೆ 10 ಗಂಟೆಗೆ ಬಸ್ಗಳ ಮೂಲಕ ತೆರಳುವಂತೆ ಸರ್ಕಾರ ಸೂಚಿಸಿದ್ದು,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮವನ್ನು ಆದಷ್ಟು ಬೇಗ ತಾಲೂಕಿನಲ್ಲಿ ಮುಗಿಸಿ ಮದ್ಯಹ್ನ ಎರಡು ಗಂಟೆ ನಂತರ ತುಮಕೂರಿಗೆ ಎಲ್ಲಾ ಅಧಿಕಾರಿಗಳು ತೆರಳಬೇಕು, ಇಲ್ಲದಿದ್ದರೆ ಬಸ್ ಗಳನ್ನು ತಡೆದು ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಜಿಲ್ಲಾ ದಲಿತ ಜನ ಜಾಗೃತಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ದಲಿತ್ ನಾರಾಯಣ್ ಹಾಗೂ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ವಿ ಶಿವಶಂಕರ್ ರವರು ಮಾತನಾಡಿದರು.