ರಾಜ್ಯ
Trending

೨ ಕೋಟಿ ರೂ. ವೆಚ್ಚದಲ್ಲಿ ಫೀರಾಪೂರ-ಅಮಲಿಹಾಳ ರಸ್ತೆ ಕಾಮಗಾರಿಗೆ ಚಾಲನೆಜನರ ಭಾವನೆ ಅರೀತುಕೊಳ್ಳುವವನೇ ನಿಜವಾದ ರಾಜಕಾರಣಿ

ರಾಜಕಾರಣಿ ಎಂದರೆ ಬರೆ ದುಡ್ಡು ಮಾಡುವದು ಮತ್ತು ಮುಂದಿನ ೫ ವರ್ಷದ ಅಧಿಕಾರಕ್ಕಾಗಿ ಅಲ್ಲಾ ಆ ಕ್ಷೇತ್ರದ ಜನರ ಭಾವನೆಗಳನ್ನು ಅರೀತುಕೊಂಡು ಕೆಲಸ ಮಾಡುವವನೇ ನಿಜವಾದ ಕಾಜಕಾರಣಿಯಾಗಿದ್ದಾನೆ ಅಂತಹ ಜನರ ಭಾವನೆ ಅರೀತುಕೊಳ್ಳುವ ಶಕ್ತಿ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರಲ್ಲಿ ಅಡಗಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.

ಗುರುವಾರರಂದು ತಾಲೂಕಿನ ಫೀರಾಪೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ,ಕರ್ನಾಟಕ ರೂರಲ್ ಇನ್‌ಪ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ ೨೦೨೨-೨೩ನೇ ಸಾಲಿನ ಜಿಲ್ಲಾ ಪಂಚಾಯತ್ ೩೦೫೪ ಲಮಸಮ್ ಯೋಜನೆಯಡಿ ದೇವರ ಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದ ಫೀರಾಪೂರ ಗ್ರಾಮದಿಂದ ಅಮಲಿಹಾಳ ಗ್ರಾಮದವರೆಗೆ ೨ ಕೋಟಿ ರೂ. ವೆಚ್ಚದ ರಸ್ತೆ ಸುದಾರಣೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡುತ್ತಿದ್ದ ಅವರು ಶಾಸಕ ರಾಜುಗೌಡ ಪಾಟೀಲ ಅವರಲ್ಲಿ ಅತ್ಯಂತ ಸರಳತೆ ಕಂಡಿದ್ದೇನೆ ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡಿಸುತ್ತಾ ಜನರೊಂದಿಗೆ ಉತ್ತಮ ಬಾಂದವ್ಯವನ್ನು ಹೊಂದಿದ್ದಾರೆಂದ ಅವರು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಗ್ರಾಂ ಪಂಚಾಯ್ತಿ ಸದಸ್ಯರಾದರೇ ಸಾಕು ಮನುಷ್ಯನಲ್ಲಿ ಎಲ್ಲವೂ ಬದಲಾವಣೆಯಾಗುತ್ತದೆ ಆದರೆ ಸಾಮಾನ್ಯ ಮನುಷ್ಯನಾಗಿ ಜನರೊಂದಿಗೆ ಬೆಳೆದ ವ್ಯಕ್ತಿ ಶಾಸಕ ರಾಜುಗೌಡ ಪಾಟೀಲ ಶಾಸಕರಾದರೂ ಕೂಡಾ ನಾನೆಂದೂ ಅವರಲ್ಲಿ ಬದಲಾವಣೆ ಕಂಡಿಲ್ಲಾ ಮೊದಲಿನಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನರ ಭಾವನೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಾ ಸಾಗಿದ್ದಾರೆ ಯಾವಾಗಲೂ ನನ್ನ ಜನ ನನ್ನ ಊರು ಎಂಬ ಕಾಳಜಿ ವಹಿಸುತ್ತಾ ಸಾಗಿದ್ದಾರೆ ಬಂಗಾರ ಕಾರು ಆಸ್ತಿಗಳಿಂದ ಯಾರೂ ದೊಡ್ಡವರಾಗುವದಿಲ್ಲಾ ವೇದಗಳನ್ನು ಓದಿದವನು ದೊಡ್ಡವನಾಗುವದಿಲ್ಲಾ ಜನರ ವೇದನೆಗಳನ್ನು ಯಾರೂ ತಿಳಿದುಕೊಂಡಿದ್ದಾರೆ ಅವನು ನಿಜವಾಗಲೂ ದೊಡ್ಡವನಾಗುತ್ತಾನೆಂದ ಅವರು ಫೀರಾಪೂರ ಗ್ರಾಮದಿಂದ ಅಮಲ್ಯಾಳ ಗ್ರಾಮಕ್ಕೆ ಉತ್ತಮ ರಸ್ತೆ ಇಲ್ಲದೇ ಎಲ್ಲವೂ ಹದಗೆಟ್ಟು ಹೋಗಿತ್ತು ಅಮಲ್ಯಾಳ ಗ್ರಾಮದ ವಿದ್ಯಾರ್ಥಿಗಳು ಕೆಟ್ಟ ರಸ್ತೆಯಲ್ಲಿ ನಡೆದುಕೊಂಡು ಫೀರಾಪೂರ ಗ್ರಾಮಕ್ಕೆ ಶಾಲೆಗೆ ಬರುತ್ತಿದ್ದರು ಇದನ್ನು ಮನಗಂಡು ನಾನು ಶಾಸಕ ರಾಜುಗೌಡರಿಗೆ ರಸ್ತೆ ಮಾಡಿದರೆ ಮಕ್ಕಳಿಗೆ ಒಳಿತಾಗಲಿದೆ ಫೀರಾಪೂರ ಗ್ರಾಮ ನಿಮ್ಮ ಮತಕ್ಷೇತ್ರದಲ್ಲಿದ್ದರೂ ಅಮಲ್ಯಾಳ ಗ್ರಾಮ ಸುರಪೂರ ಮತಕ್ಷೇತ್ರದಲ್ಲಿದೆ ಈ ರಸ್ತೆ ಮಾಡಬೇಕೆಂದು ಎಂದಾಗ ಸೀಘ್ರದಲ್ಲಿಯೇ ಮಾಡುತ್ತೇನೆಂದು ೧೫ ದಿನಗಳ ಹಿಂದೆ ಹೇಳಿದ್ದರು ಈ ಕೆಲಸ ಇಷ್ಟು ಬೇಗನೇ ಆಗುತ್ತದೆ ಎಂದು ನಾನು ತಿಳಿದಿದ್ದಿಲ್ಲಾ ನನ್ನ ಒಂದೇ ಕರೆಗೆ ೨ ಕೋಟಿ ರೂ. ಅನುದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ಕೊಡಿಸಿದ್ದಾರೆ ಶಾಸಕ ರಾಜುಗೌಡರಿಗೆ ಫೀರಾಪೂರ ಹಾಗೂ ಅಮಲ್ಯಾಳ ಗ್ರಾಮದ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರು ಮಾತನಾಡಿ ನಾನು ಶ್ರೀ ಖಾಸ್ಗತೇಶ್ವರ ಮಠದ ಭಕ್ತನಾಗಿದ್ದೇನೆ ಶ್ರೀಗಳ ಹಾಗೂ ಜನರ ಆಶಿರ್ವಾದದಿಂದ ಶಾಸಕನಾಗಿ ಜನರ ಸೇವೆ ಮಾಡುತ್ತಿದ್ದೇನೆ ನನ್ನನ್ನು ಸಂಪರ್ಕಿಸಿದ ಸಿದ್ದಲಿಂಗಶ್ರೀಗಳು ಗಡಿಭಾಗದ ಅಮಲ್ಯಾಳ ಗ್ರಾಮದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ರಸ್ತೆ ಇಲ್ಲದಕ್ಕೆ ಆಗುತ್ತಿರುವ ತೊಂದರೆಯನ್ನು ಗಮನಕ್ಕೆ ತಂದು ರಸ್ತೆ ಮಾಡಲು ಸೂಚಿಸಿದ್ದ ಪರಿಣಾಮ ೨ ಕೋಟಿ ರೂ. ವೆಚ್ಚದಲ್ಲಿ ಫೀರಾಪೂರ-ಅಮಲ್ಯಾಳ ಗ್ರಾಮದ ಸಂಪರ್ಕ ರಸ್ತೆಗೆ ಚಾಲನೆ ನೀಡಿದ್ದೇವೆ ರಸ್ತೆ ಕಾಮಗಾರಿ ಮುಗಿದ ತಕ್ಷಣ ಬಸ್ಸಿನ ಸೌಕರ್‍ಯವನ್ನು ಪ್ರಾರಂಬಿಸಲಾಗುವುದೆಂದ ಅವರು ಇಂದಿನ ಕಾಂಗ್ರೇಸ್ ಸರ್ಕಾರದಲ್ಲಿ ಗ್ಯಾರೆಂಟಿಗಳಿಂದ ಯಾವುದೇ ಶಾಸಕರಿಗೂ ಅನುದಾನ ಸಿಗುತ್ತಿಲ್ಲಾ ಅಂತಹದ್ದರಲ್ಲಿಯೇ ಸಿಗುವ ಹಣದ ಬಜೆಟ್‌ನಲ್ಲಿ ನಾನು ಚುನಾವಣೆ ಸಂದರ್ಬದಲ್ಲಿ ನೀಡಿದ ಬರವಸೆಯಂತೆ ಯಾವ ಊರಿಗೆ ಮೂಲಭೂತ ಸೌಕರ್ಯಗಳಲ್ಲಿ ಅತ್ಯವಶ್ಯವಾಗಿ ಬೇಕಾಗಿದೆ ಎಂಬುದನ್ನು ಅರೀತುಕೊಂಡು ಕೆಲಸ ಮಾಡುತ್ತಿದ್ದೇನೆ ಇದರ ಜೊತೆಗೆ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವಂತಹ ಕೆಲಸವನ್ನೂ ಮಾಡುತ್ತಿದ್ದೇನೆ ಫೀರಾಪೂರ ಗ್ರಾಮಕ್ಕೆ ಇನ್ನೂ ೩ ಪ್ರಮುಖ ಕೆಲಸಗಳನ್ನು ಹಾಕಿದ್ದೇನೆ ಅವುಗಳನ್ನು ಸೀಘ್ರದಲ್ಲಿಯೇ ಚಾಲನೆ ನೀಡಲಿದ್ದೇನೆಂದ ಅವರು ಕಾರ್ಯಕರ್ತರು ದೃತಿಗೆಡದೇ ದೈರ್ಯವಾಗಿರಿ ಆದಷ್ಟು ಬೇಗನೇ ನೀವು ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಇಡೇರಿಸುವಂತಹ ಕೆಲಸ ಮಾಡುತ್ತೇನೆಂದರು.

ಇನ್ನೋರ್ವ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ ಅವರು ಮಾತನಾಡಿ ಫೀರಾಪೂರ-ಅಮಲ್ಯಾಳ ಗ್ರಾಮವು ಬೇರೆ ಬೇರೆ ತಾಲೂಕಿಗೆ ಒಳಪಡುತ್ತಿದ್ದರೂ ಕೂಡಾ ಈ ಎರಡು ಗ್ರಾಮಗಳು ತಾಳಿಕೋಟೆ ಪಟ್ಟಣದ ನೇರ ಸಂಪರ್ಕದಲ್ಲಿರುವ ಗ್ರಾಮಗಳಾಗಿವೆ ಈ ಗ್ರಾಮಗಳ ಜನರಿಗೆ ಅತ್ಯವಶ್ಯವಾಗಿ ಬೇಕಾಗಿದ್ದ ರಸ್ತೆ ಸುದಾರಣೆ ಕಾಮಗಾರಿಗೆ ೨ ಕೋಟಿ ರೂ. ವೆಚ್ಚದಲ್ಲಿ ಶಾಸಕ ರಾಜುಗೌಡ ಪಾಟೀಲರು ಚಾಲನೆ ನೀಡಿದ್ದಾರೆ ಮುಂಬರುವ ದಿನಗಳಲ್ಲಿ ಈ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಉತ್ತಮ ರಸ್ತೆ, ಕುಡಿಯುವ ನೀರಿನ ಸೌಲಬ್ಯ ಅಲ್ಲದೇ ಎಲ್ಲ ಮೂಲಭೂತ ಸೌಲಭ್ಯಗಳು ಇಡೇರಲಿದೆ ಎಂದ ಅವರು ಜನರ ಆಶಿರ್ವಾದದಿಂದ ಶಾಸಕರಾಗಿರುವ ರಾಜುಗೌಡ ಪಾಟೀಲರು ಅತ್ಯಂತ ಸರಳತೆ ಉಳ್ಳ ವ್ಯಕ್ತಿಯಾಗಿದ್ದಾರೆ ಕಾಂಗ್ರೇಸ್ ಸರ್ಕರದ ಗ್ಯಾರೆಂಟಿ ಬಿಟ್ಟಿ ಯೋಜನೆಗಳಿಂದ ಅನುದಾನದ ಕೊರತೆ ಇದೆ ಆದ್ದರಿಂದ ಸಾದ್ಯವಾದಷ್ಟು ಜನರಿಗೆ ಅವಶ್ಯಕವಾಗಿರುವ ಎಲ್ಲ ಕಾರ್ಯಗಳನ್ನು ಮಾಡುತ್ತಾ ಸಾಗಿದ್ದಾರೆಂದರು.

ಇನ್ನೋರ್ವ ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ ಅವರು ಮಾತನಾಡಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ವ್ಯಕ್ತಿಯಾರಾದರೂ ಇದ್ದರೆ ಅದು ಶಾಸಕ ರಾಜುಗೌಡ ಪಾಟೀಲರು ಆಗಿದ್ದಾರೆ ಶ್ರೀ ಖಾಸ್ಗತೇಶ್ವರ ಮಠದ ಸಿದ್ದಲಿಂಗಶ್ರೀಗಳ ಒಂದು ಮಾತಿಗೆ ಕೇವಲ ೧೫ ದಿನಗಳಲ್ಲಿಯೇ ೨ ಕೋಟಿ ರೂ. ಅನುದಾನದೊಂದಿಗೆ ಉತ್ತಮ ರಸ್ತೆ ನಿರ್ಮಾಣಕ್ಕಾಗಿ ಮುಂದಾಗಿದ್ದಾರೆ ಫೀರಾಪೂರ-ಅಮಲ್ಯಾಳ ಎರಡು ಗ್ರಾಮಗಳು ಎರಡು ಕಣ್ಣುಗಳಿಂದಂತೆ ನಿತ್ಯ ನೇರ ಸಂಪರ್ಕದಲ್ಲಿರುವ ಈ ಗ್ರಾಮಗಳ ಮುಖಾಂತರ ಸಾಕಷ್ಟು ಗ್ರಾಮಗಳೊಂದಿಗೆ ಸಂಪರ್ಕ ಸಾದಿಸಿಕೊಂಡಿವೆ ಅದರ ಜೊತೆಗೆ ಸಂಬಂದಗಳ ಕೊಂಡಿಯೂ ಬಹಳಷ್ಟು ಅಡಗಿದೆ ಹದಗೆಟ್ಟ ರಸ್ತೆಯಿಂದ ದೂರ ಸರಿಯುತ್ತಿದ್ದ ಜನರಿಗೆ ಮತ್ತೇ ಸರಪಳಿಕೊಂಡಿಯಂತೆ ಉತ್ತಮ ರಸ್ತೆ ನಿರ್ಮಿಸಿ ಜೋಡಿಸುವಂತಹ ಕೆಲಸ ಶಾಸಕ ರಾಜುಗೌಡ ಪಾಟೀಲ ಅವರು ಮಾಡಿದ್ದಾರೆಂದರು.

ಜೆಡಿಎಸ್ ಪಕ್ಷದ ತಾಲೂಕಾ ಅಧ್ಯಕ್ಷ ಮಡುಸಾಹುಕಾರ ಬಿರಾದಾರ ಅವರು ಮಾತನಾಡಿ ಹುಟ್ಟಿದಾಗ ಮನುಷ್ಯನಿಗೆ ಹೆಸರು ಇರುವದಿಲ್ಲಾ ಕೇವಲ ಉಸಿರು ಇರುತ್ತದೆ ಅಂತಹ ಮನುಷ್ಯನ ಹೆಸರು ಅಜರಾಮರವಾಗಿ ಉಳಿಯಬೇಕೆಂದರೆ ಜನರ ಭಾವನೆಗಳಿಗೆ ತಕ್ಕಂತೆ ಕೆಲಸ ಮಾಡಿದಾಗ ಮಾತ್ರ ಸಾದ್ಯವಾಗುತ್ತದೆ ಸದಾ ಜನರ ನಾಡಿಮಿಡಿತ ಅರೀತುಕೊಳ್ಳುವದರೊಂದಿಗೆ ಅವರೊಂದಿಗೆ ಬೆರೆತು ಪ್ರೀತಿ ವಿಸ್ವಾದಿಂದ ಕೆಲಸಗಳನ್ನು ಮಾಡುತ್ತಾ ಸಾಗಿರುವ ಶಾಸಕ ರಾಜುಗೌಡ ಪಾಟೀಲ ಅವರು ಆಗಿದ್ದಾರೆಂದರು.

ಈ ಸಮಯದಲ್ಲಿ ಮುಖಂಡರುಗಳಾದ ಎಂ.ಎಂ.ಪಾಟೀಲ, ರಾಜುಗೌಡ ಕೊಳೂರ, ಪ್ರಭುಗೌಡ ಪಾಟೀಲ, ಲಿಂಗನಗೌಡ ತುಂಬಗಿ(ಅಮಲ್ಯಾಳ), ಈಸುಗೌಡ ನಾಡಗೌಡ, ವೀರೇಶ ಕಾರನೂರ, ಸಿದ್ದನಗೌಡ ಲಕ್ಕುಂಡಿ, ಸಾಹೇಬಗೌಡ ಬೊಮ್ಮನಹಳ್ಳಿ, ಅರವಿಂದ ಹಾಲಣ್ಣವರ, ಹುಸೇನಿ ವಕೀಲ(ಫೀರಾಪೂರ), ಮಾಳಪ್ಪ ಪೂಜಾರಿ, ಫೀರಾಪೂರ ಹಾಗೂ ಅಮಲ್ಯಾಳ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button