ರಾಜ್ಯ
Trending

ಯಡಿಯೂರಪ್ಪ, ನಡಹಳ್ಳಿ.ವಿಜೇಂದ್ರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ

ಕೇಂದ್ರ ಮಾಜಿ ಸಚಿವ ವಿಜಯಪುರ ನಗರದ ಹಾಲಿ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವದನ್ನು ಖಂಡಿಸಿ ಮಿಣಜಗಿ ಗ್ರಾಮದ ಹಿಂದೂಪರ ಸಂಘಟಿಕರು ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರಲ್ಲದೇ ಬಿ.ಎಸ್.ಯಡಿಯೂರಪ್ಪ, ವಿಜೇಂದ್ರ ಯಡಿಯೂರಪ್ಪ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕುವದರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಮಿಣಜಗಿ ಗ್ರಾಮದಲ್ಲಿ ಬೆಳಿಗ್ಗೆಯಿಂದಲೇ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವದರೊಂದಿಗೆ ಪ್ರತಿಭಟನಾ ಮೇರವಣಿಗೆಗೆ ಬೆಂಬಲಿಸಿದ ಸಾವಿರಾರು ಜನ ಗ್ರಾಮಸ್ಥರರು ಸುಮಾರು ೬ ಗಂಟೆ ಕಾಲ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರಲ್ಲದೇ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷಕ್ಕೆ ಗೌರವವಿತವಾಗಿ ಮರು ಸೇರ್ಪಡೆ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಹಿಂದೂ ಸಮಾಜ ಬಿಜೆಪಿ ಪಕ್ಷದಿಂದ ಸಂಪೂರ್ಣ ಹಿಂದಕ್ಕೆ ಸರಿಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಗ್ರಾಮದ ಸುಮಾರು ಹತ್ತಾರು ಕಡೆಗಳನ್ನು ಯಡಿಯೂರಪ್ಪನವರ ಹಾಗೂ ಮಾಜಿ ಶಾಸಕ ನಡಹಳ್ಳಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.

ಮಿಣಜಗಿ ಗ್ರಾಮದ ದ್ವಾರ ಭಾಗಿಲಿನಿಂದ ಪ್ರಾರಂಭಗೊಂಡ ಬೃಹತ್ ಪ್ರತಿಭಟನಾ ಮೇರವಣಿಗೆಯೂ ತಾಳಿಕೋಟೆ ರಸ್ತೆಯ ತೆರಳಿ ಮರಳಿ ಸಂತ ಸೇವಾಲಾ ವೃತ್ತದವರೆಗೆ ಹೋಗಿ ಮರಳಿ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಗಂಟೆಕಾಲ ರಸ್ತೆ ತಡೆ ನಡೆಸಿ ನಂತರ ಭಹಿರಂಗ ಸಭೆಯಾಗಿ ಮಾರ್ಪಟ್ಟಿತು.

ಈ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿ ಬಸನಗೌಡ ಪಾಟೀಲ(ಯತ್ನಾಳ) ಅವರು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಯಾಗಿ ಕಟ್ಟಿ ನೆಲೆ ನಿಲ್ಲಿಸಿದ್ದಾರೆ ಸದ್ಯ ಇಡೀ ಕರ್ನಾಟಕದ ತುಂಬೆಲ್ಲಾ ಪಕ್ಷ ಸಂಘಟನೆ ಮಾಡುತ್ತಾ ಸಾಗಿದ್ದರು ಪಕ್ಷಕ್ಕೆ ಮುಳ್ಳವಾಗಿ ಪರಿಣಮಿಸುವದರೊಂದಿಗೆ ಅಪ್ಪ ಮಕ್ಕಳು ಇಬ್ಬರೂ ಕೂಡಿ ಬಿಜೆಪಿ ಪಕ್ಷವನ್ನು ಮೂಲಿ ಗುಂಪು ಮಾಡಲು ಹೋರಟಿದ್ದಾರೆ ಅವರವಿರೂದ್ದ ದ್ವನಿ ಎತ್ತಿದ್ದಾರೆ ಇದನ್ನು ಪಕ್ಷದ ಹೈಕಮಾಂಡನವರು ನೋಡಬೇಕಿತ್ತು ಆದರೆ ಯಾರದೋ ಮಾತಿಗೆ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವದು ಸರಿಯಲ್ಲಾ ಕೂಡಲೇ ಅವರನ್ನು ಬಿಜೆಪಿ ಪಕ್ಷಕ್ಕೆ ಗೌರವಿತವಾಗಿ ಸೇರ್ಪಡೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದ ಅವರು ಮಾಜಿ ಶಾಸಕ ನಡಹಳ್ಳಿ ಅವರು ತೊಗಲಿನ ನಾಲಿಗೆ ಇದೆ ಎಂದು ಯತ್ನಾಳ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ ಅವರಿಗೆ ಏಚ್ಚರಿಕೆಯನ್ನು ಕೊಡುತ್ತೇನೆ ಯತ್ನಾಳ ಅವರು ಕರ್ನಾಟಕದ ಹಿಂದೂ ಹುಲಿ ಎಂದು ಜನರೇ ಬಿರುದುಕೊಟ್ಟಿದ್ದಾಗಿದೆ ಇನ್ನ ನೀನು ಯಾವ ಲೆಕ್ಕ ಇದೇ ಮುದ್ದೇಬಿಹಾಳದಲ್ಲಿಯೇ ೧ ಲಕ್ಷ ಜನರನ್ನು ಸೇರಿಸಿ ಬೃಹತ್ ಹೋರಾಟ ಮಾಡಿ ತೋರಿಸುತ್ತೇವೆ ಬೇಕಿದ್ದರೆ ಜನರ ಲೆಕ್ಕ ಹಾಕಿಕೊಂಡು ಹೋಗಲಿ ಎಂದು ಗುಡುಗಿದ ಅವರು ನಡಹಳ್ಳಿ ಅವರಿಗೆ ಅಳಗಾಲ ಬಂದಿದೆ ಹೀಗಾಗಿ ಯತ್ನಾಳ ಅವರ ಹಗುರವಾಗಿ ಮಾತನಾಡುತ್ತಿದ್ದಾರೆ ಇದರ ಪರಿಣಾಮ ಒಮ್ಮೇ ಈಗಾಗಲೇ ಚುನಾವಣೆಯಲ್ಲಿ ಸೋಲಿಸಿ ತೋರಿಸಿದ್ದೇವೆ ಇನ್ನೊಮ್ಮೇ ಮಾಡಿ ತೋರಿಸುತ್ತೇವೆಂದ ಅವರು ಕೇಂದ್ರದ ನಾಯಕರು ಯತ್ನಾಳ ಅವರ ಉಚ್ಚಾಟನೆಯನ್ನು ಪರಿಶೀಲಿಸಬೇಕು ಯಾಕೆಂದರೆ ಕರ್ನಾಟಕದಲ್ಲಿ ಹಿಂದೂ ಸಮಾಜ ಧಃಗ ಧಃಗ ಹೊತ್ತು ಉರಿಯಲಿಕ್ಕೆ ಹತ್ತಿದೆ ಠಿಕಾಕಾರರು ಮಾತನಾಡುವಾಗ ಏಚ್ಚರದಿಂದ ಮಾತನಾಡಬೇಕು ಯಾಕೆಂದರೆ ಯತ್ನಾಳ ಅವರು ಮತ್ತೇ ಬಿಜೆಪಿ ಪಕ್ಷಕ್ಕೆ ಬಂದೇ ಬರ್ತಾರ ನಾಲಿಗೆ ಹರಿಬಿಟ್ಟವರಿಗೆ ಮುಂದೆ ಮಾರಿ ಹಬ್ಬ ಕಾದೈತಿ ಎಂದು ಏಚ್ಚರಿಸಿದರು.

ಇನ್ನೋರ್ವ ಮುಖಂಡ ಬಸನಗೌಡ ಪಾಟೀಲ(ಯತ್ನಾಳ) ಅವರು ಒಬ್ಬ ವ್ಯಕ್ತಿಯಲ್ಲಾ ಹಿಂದೂ ಸಮಾಜದ ಒಂದು ದೊಡ್ಡ ಶಕ್ತಿಯಾಗಿದ್ದಾರೆ ಇತ್ತೀಚಗೆ ಬಿಜೆಪಿ ಕೆಲವು ನಾಯಕರು ಹಿಂದೂತ್ವ ಎಂದು ಯಾರು ಬರ್‍ತಾರೋ ಅವರನ್ನು ಮೊದಲು ಮಣ್ಣು ಕೊಡುವ ಕೆಲಸ ಮಾಡುತ್ತಾ ಸಾಗಿದ್ದಾರೆ ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಳವಿನಂಚಿಗೆ ಬರಲು ಕಾರಣವಾಗಿದೆ ಸದ್ಯ ಅಪ್ಪ ಮಕ್ಕಳು ಇಬ್ಬರೂ ಸೇರಿ ನಾ ಕಟ್ಟಿನ ಪಕ್ಷ ಎಂದು ಹೇಳುತ್ತಾ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಸರ್ವನಾಶ ಮಾಡಲು ಹೋರಟಿದ್ದಾರೆ ಕರಾವಳಿ ಭಾಗದಲ್ಲಿ ಹಲವಾರು ನಾಯಕರನ್ನು ಮುಗಿಸಿದ ಕೀರ್ತಿ ಈ ಅಪ್ಪ ಮಕ್ಕಳಿಗೆ ಸಲ್ಲುತ್ತದೆ ಎಂದು ಯಡಿಯೂರಪ್ಪ ಕುಟುಂಭದ ವಿರೂದ್ದ ಕಿಡಿ ಕಾರಿದ ಅವರು ಮಾಜಿ ಶಾಸಕ ನಡಹಳ್ಳಿ ಅವರು ಪಕ್ಷದ ಸಿದ್ದಾಂತದ ಬಗ್ಗೆ ಮಾತನಾಡುತ್ತಾರೆ ವರ್ಷದ ಅಧಿಕಾರ ಅವಧಿಯಲ್ಲಿ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರನ್ನು ಸಂಪೂರ್ಣ ಕಡಿಸಿದರು ಅದರ ಪರಿಣಾಮ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರೇ ನೇರವಾಗಿ ನಡಹಳ್ಳಿ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ ಆದರೂ ಇನ್ನೂ ದುರ್ಬುದ್ದಿ ಬಿಟ್ಟಿಲ್ಲಾ ಅಂದರ ಮುಂದೆ ನಡಹಳ್ಳಿ ಅವರಿಗೆ ಕಾದಿದೆ ಮಾರಿ ಹಬ್ಬ ಎಂದ ಅವರು ಇಡೀ ಮಿಣಜಗಿ ಗ್ರಾಮ ಇಂದು ಯತ್ನಾಳ ಗೌಡರ ಪರವಾಗಿ ಎದ್ದು ನಿಂತಿದೆ ಇದನ್ನು ನೋಡಿ ಕಲಿತುಕೋ ಮುಂದೆ ತಾಳಿಕೋಟೆಯಲ್ಲಿ ಮುದ್ದೇಬಿಹಾಳದಲ್ಲಿ ತೋರಿಸ್ತಿವಿ ಯತ್ನಾಳ ಗೌಡರ ತಾಕತ್ತು ಏನೆಂಬುದು ಎಂದು ಏಚ್ಚರಿಸಿದ ಅವರು ಯತ್ನಾಳ ಗೌಡರು ಒಂದೇ ಸಮಾಜಕ್ಕೆ ಸೀಮಿತವಾಗಿಲ್ಲಾ ಇಡೀ ಹಿಂದೂ ಸಮಾಜದ ನಾಯಕ ಎಂದು ಒಪ್ಪಿಕೊಂಡಿದ್ದಾರೆ ಬಿಜೆಪಿ ಪಕ್ಷ ಅಪ್ಪ ಮಕ್ಕಳ ಪಕ್ಷವಾಗದೇ ಇಡೀ ಹಿಂದೂ ಸಮಾಜದ ಪಕ್ಷವನ್ನಾಗಿ ಮಾಡಲು ಕೇಂದ್ರ ನಾಯಕರು ಯತ್ನಾಳಗೌಡರ ಉಚ್ಚಾಟನೆಯನ್ನು ಪರಿಶೀಲಿಸಿ ಮರು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಇನ್ನೋರ್ವ ಮುಖಂಡರಾದ ಸುರೇಶ ಹಜೇರಿ ಅವರು ಮಾತನಾಡಿ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಯತ್ನಾಳ ಅವರು ಹುಲಿ ಅಲ್ಲಾ ಇಲಿಯಾಗಿದ್ದಾರೆಂದು ಠಿಕಿಸಿದ್ದಾರೆ ಯತ್ನಾಳ ಅವರು ಹುಲಿಯೋ ಅಥವಾ ಇಲಿ ಎಂಬುದನ್ನು ತಕ್ಕ ಉತ್ತರ ಮುದ್ದೇಬಿಹಾಳ ಕ್ಷೇತ್ರದ ಜನರು ನೀಡುತ್ತಿದ್ದಾರೆ ಇವತ್ತಿನ ಮಿಣಜಗಿ ಗ್ರಾಮದ ಹೋರಾಟ ನಡಹಳ್ಳಿ ತಕ್ಕ ಉತ್ತರವಾಗಿದೆ ಎಂದ ಅವರು ನಡಹಳ್ಳಿ ಅವರು ಕೇವಲ ಬಾಯಿ ಚಪಲಕ್ಕ ಮಾತನಾಡುವದನ್ನು ಬಿಡಬೇಕು ಯತ್ನಾಳ ಅವರ ಬಗ್ಗೆ ಮಾತಾಡಿದರೆ ನಾನು ದೊಡ್ಡವನಾಗುತ್ತೇನೆಂದು ನಡಹಳ್ಳಿ ಅವರು ತಿಳಿದುಕೊಂಡಿದ್ದರೆ ಅದನ್ನು ಬಿಡಬೇಕು ನಡಹಳ್ಳಿ ಹಿಂದೂತ್ವ ಮರೆತಿದ್ದಕ್ಕೆ ಮಾಜಿ ಆಗಿದ್ದಾರೆ ಯಾಕೆಂದರೆ ಒಳಗೊಂದು ಹೊರಗೊಂದು ಮಾತಾಡೊವ ವ್ಯಕ್ತಿ ನಡಹಳ್ಳಿಯಾಗಿದ್ದಾನೆ ಇತನ ಮಾತಿನಿಂದ ಯತ್ನಾಳ ಅವರ ವರ್ಚಸ್ಸಿಗೆ ದಕ್ಕೆ ಇಲ್ಲಾ ಇತನಿಗೆ ಯತ್ನಾಳ ಅವರ ಅಭಿಮಾನಿಗಳು ಉತ್ತರ ನೀಡಲು ಸಿದ್ದರಿದ್ದೇವೆಂದರು.

ಇನ್ನೋರ್ವ ಮುಖಂಡ ಮಡುಸಾಹುಕಾರ ಬಿರಾದಾರ ಅವರು ಮಾತನಾಡಿ ಕರ್ನಾಟಕದಲ್ಲಿ ಕೇಸರಿ ದ್ವಜ ಉಳಿಯಬೇಕಾದರೆ ಯತ್ನಾಳ ಗೌಡರು ಕಾರಣರಾಗಿದ್ದಾರೆ ಬಿಜೆಪಿ ಪಕ್ಷದಿಂದ ಕೇವಲ ಯತ್ನಾಳ ಗೌಡರನ್ನು ಹೊರಗೆ ಹಾಕಿಲ್ಲಾ ಇಡೀ ಹಿಂದೂ ಸಮಾಜವನ್ನು ಪಕ್ಷದಿಂದ ಹೊರ ಹಾಕಿದಂತಾಗಿದೆ ಇದರಿಂದ ಕುಪಿತಗೊಂಡಿರುವ ಹಿಂದೂ ಸಮಾಜಬಾಂದವರು ಇಡೀ ಕರ್ನಾಟಕ ರಾಜ್ಯದ ತುಂಬೆಲ್ಲಾ ಸಿಡಿದೆದ್ದು ನಿಂತಿದ್ದಾರೆ ಇದನ್ನು ಬಿಜೆಪಿ ಪಕ್ಷದ ಹೈಕಮಾಂಡ ಪರಿಶೀಲನೆ ಮಾಡಬೇಕು ಯತ್ನಾಳ ಅವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬೇಕೆಂದ ಅವರು ಚಮಚಾಗಿರಿ ಮಾಡುವವರಿಗೆ ಬಿಜೆಪಿ ಪಕ್ಷದಲ್ಲಿ ನೀಡುತ್ತಿರುವ ಬೆಲೆಯನ್ನು ಕಡಿಗಣಿಸಬೇಕು ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಪೂರ್ಣ ಅಸ್ಥಿತ್ವ ಕಳೆದುಕೊಳ್ಳಲಿದೆ ಎಂದರು.

ಇನ್ನೋರ್ವ ವಿರೇಶಗೌಡ ಹಡ್ಲಗೇರಿ, ಮಿಣಜಗಿ ಗ್ರಾಮದ ಮುಖಂಡರುಗಳು ಯತ್ನಾಳ ಗೌಡರನ್ನು ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.

ಈ ಬೃಹತ್ ಪ್ರತಿಭಟನಾ ನೇತೃತ್ವವನ್ನು ಮಿಣಜಗಿ ಗ್ರಾಮದ ಸಮಸ್ತ ಮುಖಂಡರುಗಳು ವಹಿಸಿದ್ದರಲ್ಲದೇ ಪ್ರತಿಭಟನಾ ಸಮಯದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button