ಆರೋಗ್ಯಇತ್ತೀಚಿನ ಸುದ್ದಿರಾಜ್ಯಸುದ್ದಿ

ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಕರ್ನಾಟಕ ಸರ್ಕಾರ; 400 ರೂ. ಪಿಪಿಇ ಕಿಟ್‌ಗೆ 1312 ರೂ. ಬಿಲ್‌ ಪತ್ತೆ!

ಕೋವಿಡ್‌ – 19 ಎರಡನೇ ಅಲೆ ಸಂದರ್ಭದಲ್ಲಿ ದುಬಾರಿ ದರಕ್ಕೆ ಪಿಪಿಇ ಕಿಟ್‌ಗಳನ್ನು ಪೂರೈಸಿದ ಆರೋಪ ಸಂಬಂಧ ಪ್ರುಡೆಂಟ್‌ ಮ್ಯಾನೇಜ್‌ಮೆಂಟ್‌ ಸೊಲ್ಯೂಷನ್‌ ಹಾಗೂ ಲಾಜ್‌ ಎಕ್ಸ್‌ಪೋರ್ಟ್‌ ಲಿಮಿಟೆಡ್‌ ಕಂಪನಿಗಳ ವಿರುದ್ಧದ ವರದಿಯನ್ನು ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದೆ.ಪಿಪಿಇ ಕಿಟ್‌ ಪೂರೈಸಿದ ಈ ಎರಡು ಖಾಸಗಿ ಸಂಸ್ಥೆಗಳ ಪರ ಏಕಸದಸ್ಯ ಪೀಠ ನೀಡಿದ್ದ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಯು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾ. ಎಂ.ಐ ಅರುಣ್‌ ಅವರಿದ್ದ ಏಕಸದಸ್ಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ರೂಬೆನ್‌ ಜಾಕಬ್‌, ” ಕೋವಿಡ್‌ ಮೊದಲ ಅಲೆ ಸಂದರ್ಭದಲ್ಲಿಪಿಪಿಇ ಕಿಟ್‌ಗಳನ್ನು ಪೂರೈಸಲು ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸೊಲ್ಯೂಷನ್‌ ಹಾಗೂ ಲಾಜ್‌ ಎಕ್ಸ್‌ಪೋರ್ಟ್‌ ಲಿಮಿಟೆಡ್‌ ಕಂಪನಿಗಳು ಟೆಂಡರ್‌ ಪಡೆದುಕೊಂಡಿದ್ದವು. ಆದರೆ, ಎರಡನೇ ಅಲೆ ಸಂದರ್ಭದಲ್ಲಿಹೊಸದಾಗಿ ಟೆಂಡರ್‌ನಲ್ಲಿ ಪಾಲ್ಗೊಳ್ಳದೇ ಅಧಿಕಾರಿಗಳ ಜತೆ ಶಾಮೀಲಾಗಿ ಈ ಎರಡು ಕಂಪನಿಗಳು ಆರೋಗ್ಯ ಇಲಾಖೆಗೆ ಪಿಪಿಇ ಕಿಟ್‌ಗಳನ್ನು ಪೂರೈಸಿವೆ. ಆದರೆ, ಪ್ರತಿ ಪಿಪಿಇ ಕಿಟ್‌ಗೆ 400 ರೂ. ಮೂಲ ಬೆಲೆ ಇದ್ದರೆ, 1,312 ರೂ.ಗೆ ಪೂರೈಸಿದ್ದಾರೆ. ಈ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತನಿಖೆ ನಡೆಸಿದ್ದು, ಅಕ್ರಮ ಪತ್ತೆ ಮಾಡಿದ್ದಾರೆ ” ಎಂದರು.

ಈ ನಡುವೆ, ಕೋವಿಡ್‌ ಹಗರಣದ ತನಿಖೆಗೆ ರಧಿಚಿಧಿಸಧಿಲಾಧಿಗಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ನೇತೃತ್ವದ ಆಯೋಗ ಪ್ರುಧಿಡೆಂಟ್‌ ಮ್ಯಾನೇಜ್‌ಮೆಂಟ್‌ ಸೊಲ್ಯೂಷನ್‌ ಹಾಗೂ ಲಾಜ್‌ ಎಕ್ಸ್‌ಪೋರ್ಟ್‌ ಲಿಮಿಟೆಡ್‌ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಧಿಲ್ಲಿಧಿಸಿಧಿದ್ದ ವರದಿಯನ್ನು ಸಧಿರಧಿಕಾರ ಮುಚ್ಚಿದ ಲಕೋಟೆಯಲ್ಲಿನ್ಯಾಯಾಲಯಕ್ಕೆ ಸಲ್ಲಿಸಿತು.ವರದಿಯ ಲಕೋಟೆಯನ್ನು ತೆರೆದ ನ್ಯಾಯಪೀಠ, ಆ ವರದಿಯ ಪ್ರತಿಯನ್ನು ಖಾಸಗಿ ಸಂಸ್ಥೆಗಳ ಪರ ವಕೀಲರಿಗೆ ನೀಡುವಂತೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗೆ ಸೂಚಿಸಿತು. ಅಲ್ಲದೆ, ವರದಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಖಾಸಗಿ ಸಂಸ್ಥೆಗಳ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿತು.

ಕೋವಿಡ್‌ ಸಂದರ್ಭದಲ್ಲಿಪಿಪಿಇ ಕಿಟ್‌ಗಳನ್ನು ಪೂರೈಸಿದ ಬಿಲ್‌ ಮೊತ್ತ ಪಾವತಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಖಾಸಗಿ ಕಂಪನಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದವು. ಆರು ವಾರಗಳಲ್ಲಿಬಾಕಿ ಬಿಲ್‌ ಮೊತ್ತ 38.26 ಕೋಟಿ ರೂ. ಪಾವತಿಸುವಂತೆ ಏಕಸದಸ್ಯ ಪೀಠ 2024ರ ಏ.10ಕ್ಕೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.


Related Articles

Leave a Reply

Your email address will not be published. Required fields are marked *

Back to top button