ಬೆಂಗಳೂರಲ್ಲಿ ಲೋಕಾಯುಕ್ತ ರೇಡ್ DHO ಸುನೀಲ್ ಕುಮಾರ್ ಮನೆ ಡೋರ್ ಓಪನ್ ಮಾಡದೇ ಕಳ್ಳಾಟ
DHO ಸುನೀಲ್ ಕುಮಾರ್ ಅವರು ಬಸವೇಶ್ವರನಗರದ ನಾಲ್ಕಂತಸ್ತಿನ ಮನೆಯಲ್ಲಿ ವಾಸವಿದ್ದಾರೆ. ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ಎಂಟ್ರಿ ಕೊಟ್ಟು ತ್ರಿಪ್ಲೆಕ್ಸ್ ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾರೆ. ಲೋಕಾಯುಕ್ತ ರೇಡ್ ಗೊತ್ತಾಗುತ್ತಿದ್ದಂತೆ DHO ಸುನೀಲ್ ಕುಮಾರ್ ಅವರು ಸತತ 4 ಗಂಟೆಗಳ ಕಾಲ ಮನೆಯ ಡೋರ್ ಓಪನ್ ಮಾಡಿಲ್ಲ.
4 ಗಂಟೆಯ ಬಳಿಕ ಬೆಳಗ್ಗೆ 10:15ಕ್ಕೆ ಅಧಿಕಾರಿಗಳು, ಪೊಲೀಸರು ಪಕ್ಕದ ಮನೆಯ ಬಿಲ್ಡಿಂಗ್ ಹತ್ತಿ ಕಾಂಪೌಂಡ್ ಮೂಲಕ ಮನೆಗೆ ಎಂಟ್ರಿ ಕೊಟ್ಟರು. ಪಕ್ಕದ ಮನೆಯ ಬಿಲ್ಡಿಂಗ್ ಹತ್ತಿ ಸುನೀಲ್ ಕುಮಾರ್ ನಿವಾಸದ ಲಿಫ್ಟ್ ಡೋರ್ ಒಡೆದು ಲೋಕಾಯುಕ್ತ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ.
ಲಿಫ್ಟ್ ಮೂಲಕ ನೇರವಾಗಿ ಮನೆಯ ಹಾಲ್‌ಗೆ ಎಂಟ್ರಿ ಕೊಟ್ಟಿರುವ ಲೋಕಾಯುಕ್ತ ಆಫೀಸರ್ಸ್ ಇಡೀ ಮನೆಯನ್ನ ಪರಿಶೀಲನೆ ನಡೆಸಿದ್ದಾರೆ. DHO ಸುನೀಲ್ ಕುಮಾರ್ ಅವರ ಈ ಐಷಾರಾಮಿ ಮನೆಯಲ್ಲಿ ಸುಮಾರು 7 ಬೆಡ್ ರೂಂಗಳಿವೆ.ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ, ಡಿವೈಎಸ್ಪಿ ಉಮಾದೇವಿ ಟೀಂನಿಂದ ಸುನೀಲ್ ಕುಮಾರ್ ನಿವಾಸವನ್ನು ಪರಿಶೀಲನೆ ನಡೆಸಲಾಗಿದೆ. ಮನೆಯ ಬೆಡ್ ರೂಂಗಳು, ಹಾಲ್, ಪಾರ್ಕಿಂಗ್ ಜಾಗ, ಕಾರುಗಳು ಅಷ್ಟೇ ಅಲ್ಲದೇ ಮನೆಯ ಸಂಪ್ ಒಳಗೂ ಇಳಿದು ಲೋಕಾಯುಕ್ತ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದಾರೆ.
ನ್ಯೂಸ್10ಕನ್ನಡ ರಿಪೋರ್ಟರ್ – ಸುನಿಲ್ ಗೌಡ 🖋️