ರೈನ್ ಬೋ ಇನ್ನೊವೇಟ್ ಅಕಾಡೆಮಿ ಶಾಲೆಯಲ್ಲಿ ಕನಕದಾಸರ ಜಯಂತಿ ಜೊತೆಗೆ ಉಚಿತ ಆರೋಗ್ಯತಪಾಸಣಾ ಶಿಬಿರ
ಹೊಸಕೋಟೆ:
ಕನಕದಾಸರು ಸುಮಾರು 15- 16ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದಾರು. ಎಂದು ರೈನ್ ಬೋ ಇನ್ನೊವೇಟ್ ಅಕಾಡೆಮಿ ಶಾಲೆ ಮತ್ತು ರೈನ್ ಬೋ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕರಾದ ವರಲಕ್ಷ್ಮಿ.ಬಿ.ಎಸ್. ರವರು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ರೈನ್ ಬೋ ಇನ್ನೊವೇಟ್ ಅಕಾಡೆಮಿ ಶಾಲೆ ಬೂದಿಗೆರೆ ಕ್ರಾಸ್ ಇಲ್ಲಿ ಹಮ್ಮಿಕೊಂಡಿದ್ದ *ಕನಕದಾಸರ ಜಯಂತೋತ್ಸವ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕದಾಸರು ವ್ಯಾಸರಾಯರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಅವರಿಂದಲೇ ಮಧ್ವತತ್ವಶಾಸ್ತ್ರವನ್ನ ಕಲಿತರು. ಒಂದು ಸಲ ವ್ಯಾಸರಾಯರ ಜೊತೆ ಉಡುಪಿ ಶ್ರೀಕೃಷ್ಣನ ಮಠಕ್ಕೆ ಆಗಮಿಸಿದ್ದರು. ಆದರೆ ಅವರು ಕೆಳಜಾತಿಯವರು ಎಂಬ ಕಾರಣಕ್ಕೆ ದೇಗುಲದ ಒಳಗೆ ಪ್ರವೇಶ ಸಿಗಲಿಲ್ಲ. ಕನಕದಾಸರು ಅಲ್ಲೇ ದೇಗುಲದ ಹಿಂದೆ ನಿಂತು ಶ್ರೀಕೃಷ್ಣನ ಪ್ರಾರ್ಥನೆಯಲ್ಲಿ ತೊಡಗಿದ್ದರು. ಆಗ ಸಾಕ್ಷಾತ್ ಕೃಷ್ಣ ದೇಗುಲದ ಹಿಂದಿನ ಗೋಡೆ ಒಡೆದು ಕನಕದಾಸರಿಗೆ ದರ್ಶನ ನೀಡಿದ್ದರು. ಅದನ್ನು ಇಂದಿಗೂ ಕನಕನ ಕಿಂಡಿ ಎಂದೇ ಕರೆಯಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಚಿತವಾಗಿ ಆರೋಗ್ಯ ಶಿಬಿರವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಡಾಕ್ಟರ್. ವಿನಯ್ ಕುಮಾರ್, ಪ್ರೋಟೀಸ್ ಆಸ್ಪತ್ರೆ, ಡಾಕ್ಟರ್. ಸೇವಂತಿ ನ್ಯೂರೋ ಕೇರ್ ನಾಗರಬಾವಿ, ಓ ಆರ್ ಡಬ್ಲ್ಯೂಆನಂದ್ ಮತ್ತು ಮ್ಯಾಥ್ಯೂ ಇವರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಅನೇಕ ಮಾಹಿತಿಯನ್ನು ಹಂಚಿಕೊಂಡು ಆರೋಗ್ಯ ತಪಾಸಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥಾಪಕರಾದ ವರಲಕ್ಷ್ಮಿ.ಬಿ.ಎಸ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಿತ.ಎಸ್ ಮತ್ತು ಪ್ರಾಂಶುಪಾಲರಾದ ಮಂಜುನಾಥ್.ಆರ್.ಎ ಸೇರಿದಂತೆ ಶಾಲೆ ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.