ಇತ್ತೀಚಿನ ಸುದ್ದಿರಾಜ್ಯ

ವೇಮಗಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಡಾ ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಉಪ ಪ್ರಾಂಶುಪಾಲೆ ಸುಮಾ ರವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಕೋಲಾರ:
ತಾಲೂಕು ವೇಮಗಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಡಾ ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಉಪ ಪ್ರಾಂಶುಪಾಲರಾದ ಸುಮಾ ರವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ

ವೇಮಗಲ್ ಸರ್ಕಾರಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದಲ್ಲಿ ಸುಮಾರು ವರ್ಷಗಳಿಂದ ರಾಷ್ಟ್ರ ನಾಯಕರ ಭಾವಚಿತ್ರಗಳು ಉಪ ಪ್ರಾಂಶುಪಾಲರ ಕೊಠಡಿಯಲ್ಲಿದ್ದು, ಇದರಲ್ಲಿ ರಾಷ್ಟ್ರ ನಾಯಕರಾದ ಸಂವಿಧಾನ ಶಿಲ್ಪಿ ಡಾ.ಬಿ ಆರ್.ಅಂಬೇಡ್ಕರ್ ರವರ ಭಾವಚಿತ್ರವು ಸಹ ಇತ್ತು ಈಗ ಉಪ ಪ್ರಾಂಶುಪಾಲರಾಗಿ ಸುಮಾರು ನಾಲ್ಕೈದು ತಿಂಗಳ ಹಿಂದೆ ಪ್ರಭಾರ ಉಪ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಸುಮಾ ರವರು ತಮ್ಮ ಕೊಠಡಿಯಲ್ಲಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಎತ್ತಿ ಬಿಸಾಕಿ ಅಂಬೇಡ್ಕರ್ ರವರಿಗೆ ಅಪಮಾನ ಮಾಡಿದ್ದಾರೆ ,

ಸುಮಾರು 4-5 ತಿಂಗಳಿಗಳಿಂದ ಅನೇಕ ಬಾರಿ ಇವರ ಗಮನಕ್ಕೂ ತಂದರೂ ಸಹ ಅಂಬೇಡ್ಕರ್ ರವರ ಭಾವಚಿತ್ರವನ್ನು ಹಾಕಿರುವುದಿಲ್ಲ, ಆದ್ದರಿಂದ ಅಂಬೇಡ್ಕರ್ ರವರಿಗೆ ಅಪಮಾನ ಮಾಡಿರುವ ಈ ದಲಿತ ವಿರೋಧಿ ಉಪ ಪ್ರಾಂಶುಪಾಲರಾದ ಸುಮಾ ರವರನ್ನು ಈ ಕೂಡಲೇ ಅಮಾನತ್ತುಗೊಳಿಸಿ ಇವರ ಮೇಲೆ ದಲಿತ ದೌರ್ಜನ್ಯ ಕಾಯಿದೆ ಅಡಿಯಲ್ಲಿ ಕೇಸು ದಾಖಲಿಸಿ ಇವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಚನ್ನಪ್ಪನಹಳ್ಳಿ ದಲಿತ ಜಿ.ನಾಗರಾಜ್ ರವರು ವೇಮಗಲ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದ್ದಾರೆ.

ಈ ಕೂಡಲೇ ಇವರನ್ನು ಅಮಾನತ್ತುಗೊಳಿಸಿ ಇವರ ಮೇಲೆ ದಲಿತ ದೌರ್ಜನ್ಯದ ಅಡಿಯಲ್ಲಿ ಕೇಸು ದಾಖಲಿಸಿ ಇವರ ಮೇಲೆ ಕಾನೂನು ರಿತ್ಯಾ ಕ್ರಮ ಕೈಗೊಳ್ಳದೆ ಇರುವ ಪಕ್ಷದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಬೃಹತ್ ಹೋರಾಟ ಅಮ್ಮಿಕೋಳಲಾಗುವುದೆಂದು ಜಿಲ್ಲಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಚನ್ನಪ್ಪನಹಳ್ಳಿ ದಲಿತ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ನಮಗೆ ಸಂವಿಧಾನವನ್ನು ಬರೆದು ಕೊಟ್ಟಂತಹ ಮಹಾನ್ ವ್ಯಕ್ತಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಾವೆಲ್ಲಾ ಸಂವಿಧಾನವನ್ನು ಪಾಲಿಸ ಬೇಕಾಗಿರುವುದು ನಮ್ಮ ಕರ್ತವ್ಯ ಅಂತಹ ಮಹಾನ್ ವ್ಯಕ್ತಿಗಳ ಫೋಟೋವೇ ಕಿತ್ತು ಬಿಸಾಕಿದ್ದಾರೆ. ಕಚೇರಿಯಲ್ಲಿ ಎಲ್ಲೂ ಹುಡುಕಿದರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಸಿಗಲೇ ಇಲ್ಲ ಕಾಣಿಸಲೇ ಇಲ್ಲ. ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರು ಇರುವ ಸ್ಥಳದಲ್ಲಿ ಈ ರೀತಿ ಆದರೆ ಮುಂದಿನ ಪೀಳಿಗೆ ಗತಿ ಹೇಗೆ ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಕೆಲವು ದಲಿತ ಮುಖಂಡರುಗಳ ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡುವಾಗ ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗರಾಜ್, ಸಮನ್ವಯ ಸಮಿತಿಯ ಜಿಲ್ಲಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಚನ್ನಪ್ಪನಹಳ್ಳಿ ದಲಿತ ಜಿ.ನಾಗರಾಜ್, ದಲಿತ ನಾಗರೀಕ ಸಮಿತಿಯ ರಾಜ್ಯಾಧ್ಯಕ್ಷರಾದ ಪುರಹಳ್ಳಿ ಜಿ.ಯಲ್ಲಪ್ಪ, ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದಿ ಜಿಲ್ಲಾಧ್ಯಕ್ಷ ನಾಗನಾಳ ರಮೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್. ಡಿ.ಎಂ.ಸಿ ಮಾಜಿ ಅಧ್ಯಕ್ಷ ಹಾಗೂ ದಲಿತ ನಾಗರೀಕ ಸಮಿತಿಯ ರಾಜ್ಯಾಧ್ಯಕ್ಷ ಪುರಹಳ್ಳಿ ಜಿ.ಯಲ್ಲಪ್ಪ ರವರು ಮಾತನಾಡಿ ನಮ್ಮ ಅಧಿಕಾರ ಅವಧಿಯಲ್ಲಿ ಉಪ ಪ್ರಾಂಶುಪಾಲರು ಕುಳಿತುಕೊಳ್ಳುವ ತಲೆಯ ಮೇಲೆಯೇ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಫೋಟೋವನ್ನು ಅಳವಡಿಕೆ ಮಾಡಲಾಗಿದ್ದು, ಈಗ ಬಂದಿರುವ ಪ್ರಭಾರ ಉಪಪ್ರಾಂಶುಪಾಲರಾದ ಸುಮಾ ರವರು ಕಿತ್ತು ಬಿಸಾಕಿದ್ದಾರೆ ಎಂದು ಆರೋಪಿಸಿದರು.

Related Articles

Leave a Reply

Your email address will not be published. Required fields are marked *

Back to top button