ಇತ್ತೀಚಿನ ಸುದ್ದಿರಾಜ್ಯ
ಪದವಿ ವಿದ್ಯಾರ್ಥಿಗಳಿಂದ ಕಾಲೇಜಿನ ಸ್ವಚ್ಛತೆ…
ಸಾಗರ :
ಸಾಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕಾಲೇಜು ಆವರಣಗಳನ್ನು ಸ್ವಚ್ಛಗೊಳಿಸಿದರು.
ಮುಖ್ಯವಾಗಿ ವಿದ್ಯಾರ್ಥಿಗಳು ಕಾಲೇಜು ಸುತ್ತಮುತ್ತಲು ಬಿದ್ದಿರುವ ಪ್ಲಾಸ್ಟಿಕ್ ಗಳನ್ನು ಹಾಗೂ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಿದರು .
ನಂತರ ಕಾಲೇಜು ಮುಂಭಾಗದಲ್ಲಿ ಬೆಳೆಸಿದ್ದಂತಹ ಅಲಂಕಾರಿಕ ಗಿಡಗಳ ಮಧ್ಯೆ ಕಳೆಗಳು ಯಥೇಚ್ಛವಾಗಿ ಬೆಳೆದುಕೊಂಡಿದ್ದು ಇದನ್ನು ವಿದ್ಯಾರ್ಥಿಗಳು ಎಲ್ಲರೂ ಸೇರಿ ಕಳೆಗಳನ್ನು ಕಿತ್ತು ಹಾಗೆ ಗಿಡಗಳನ್ನು ಸಂರಕ್ಷಿಸಲು ಗಿಡಗಳ ಬುಡಕ್ಕೆ ಮಣ್ಣು ಹಾಕಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಸುರೇಶ್ ಜಂಬಾನಿ ಮತ್ತು ಮಮತಾ ಹೆಗಡೆ, ರಾಜು ಹಾಗೂ ಇತರರು ಇದ್ದರು.