ರಂಗೇರಿದ ದೀಪಾಳಿ ಹಬ್ಬದ ಸಂತೆ….
ಆನಂದಪುರ :
ಆನಂದಪುರದಲ್ಲಿ ನಿನ್ನೆ ನಡೆದ ದೀಪಾವಳಿ ಹಬ್ಬದ ಸಂತೆಯಲ್ಲಿ ಜನಕಂಗೊಳಿಸಿದರು ಹಾಗೂ ವ್ಯಾಪಾರವು ಸಹ ಬಿರುಸಾಗಿ ಸಾಗಿತು.
ಹಿಂದುಗಳಿಗೆ ದೀಪಾವಳಿ ಹಬ್ಬವೆಂದರೆ ಒಂದು ವಿಶಿಷ್ಟವಾದ ಹಬ್ಬ ಹಾಗೂ ಇದು ಹಬ್ಬದಲ್ಲಿ ಅತಿ ದೊಡ್ಡ ಹಬ್ಬವಾಗಿದೆ.ಮತ್ತು ಈ ಹಬ್ಬ ಒಂದು ವಾರೆಡೆ ಸಂಭ್ರಮದಿಂದ ಮನೆಮನೆಯಲ್ಲೂ ಆಚರಿಸುತ್ತಾರೆ.
ಹಬ್ಬದ ಸಂತೆಗೆ ಸುತ್ತಮುತ್ತಲಿನ ಹಳ್ಳಿಯ ಜನರು ಭಾಗಿಯಾಗಿದ್ದರು. ವಿಶೇಷವಾಗಿ ಜಾನುವಾರಗಳಿಗೆ ಸಿಂಗರಿಸಲು ಬೇಕಾದಂತಹ ಕಣ್ಣಿ, ಗಂಟೆ, ಬಲೂನು , ಹೂವ ಹಾಗೂ ಪೂಜೆಗೆ ಬೇಕಾದಂತಹ ಪಚ್ಚೆ ತೆನೆ , ಹಿಂಗಾರ , ಅಡಿಕೆ, ನೆಲ್ಲಿಕಾಯಿ, ಗೇರುಕಾಯಿ, ಬುರೆ ಕುಂಬಗಳು ,ಹಾಗೂ ವಿವಿಧ ಹಣ್ಣು ಹಂಪಲುಗಳು ಮತ್ತು ತರಕಾರಿಗಳು ಹೀಗೆ ಹಬ್ಬದ ಸಂತೆಯಲ್ಲಿ ಹಲವಾರು ವಸ್ತುಗಳ ಖರೀದಿ ಬಿರುಸಾಗಿ ಸಾಗಿತು.
ಹಬ್ಬದ ಸಂತೆಯಲ್ಲಿ ವಿಶೇಷವಾಗಿ ಬಹಳಷ್ಟು ಜನ ಸೇರುತ್ತಾರೆ ಇದರಿಂದ ಕಳ್ಳತನ ಆಗಬಹುದೆಂದು ಮುನ್ನೆಚ್ಚರಿಕೆ ಕ್ರಮದಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೋಹನ್ ಕುಮಾರ್ ರವರು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯುವರಾಜ್ ಕಂಬಳಿ ಯವರ ಸಹಕಾರದೊಂದಿಗೆ ಸಂತೆಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿದ್ದರು. ಹಾಗೂ ಸಂತೆಯಲ್ಲಿ ವಾಹನದಟ್ಟಣೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾದರು.
*