ಸರ್ಕಾರಿ ಗೋಮಾಳವನ್ನು ಅನ್ಯ ವ್ಯಕ್ತಿಗಳ ಪಾಲಾಗಲು ಬಿಡಬಾರದು ಎಂದು ಗ್ರಾಮಸ್ಥರ ಪ್ರತಿಭಟನೆ
ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಲಾರಪಾಳ್ಯ ಗ್ರಾಮದ ಕರುವಿನಗುಡ್ಡೆ ಪಕ್ಕದಲ್ಲಿ ಇರುವ ಸರ್ವೆ ನಂಬರ್ 97ರ ಸರ್ಕಾರಿ ಗೋಮಾಳವನ್ನು ಅನ್ಯ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ಈ ಗೋಮಾಳವನ್ನು ಕಳೆದ ಎರಡು ಮೂರು ದಿನಗಳಿಂದ ಜೆ ಸಿ ಬಿ ಯಂತ್ರಗಳ ಮೂಲಕ ಈ ಗೋಮಾಳವನ್ನು ಉಳುಮೆ ಮಾಡುತ್ತಿದ್ದಾರೆ
ಬಹಳ ಹಿಂದಿನಿಂದಲೂ ಕೂಡ ಈ ಗೋಮಾಳದ ಜಾಗದಲ್ಲಿ ಹಸು ಕುರಿ ಎಮ್ಮೆಗಳನ್ನು ಮೇಯಿಸಿಕೊಂಡು ಜೀವನ ಮಾಡುತ್ತಿವಿ ಈ ರೀತಿ ನೀವು ಏಕಾಏಕಿ ಬಂದು ಈ ಜಾಗವನ್ನು ಅಕ್ರಮವಾಗಿ ಉಳುಮೆ ಮಾಡಿದರೆ ನಾವು ಎಲ್ಲಿಗೆ ಹೋಗಿ ಧನ ಕರುಗಳನ್ನು ಮೇಯಿಸುವುದು ನೀವೆ ಹೇಳಿ
ಕಾಡಿಗೆ ಬಿಡಲು ಹೋದರೆ ಅರಣ್ಯ ಇಲಾಖೆಯವರು ತಡೆಯುತ್ತಾರೆ ನಾವು ಎಲ್ಲಿಗೆ ಹೋಗಬೇಕು ಹೇಳಿ
ಈ ಗೋಮಾಳವನ್ನು ಏಕಾಏಕಿ ಬಂದು ಉಳುಮೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ ಗ್ರಾಮಸ್ಥರನ್ನು ಎದುರಿಸಿ ಬೆದುರಿಸಿ ಕಳುಹಿಸುತ್ತಾರೆ ಈ ಪ್ರಭಾವಿ ವ್ಯಕ್ತಿಗಳು
ಈ ಗೋಮಾಳವನ್ನು ರಾತ್ರಿ ಸಮಯದಲ್ಲಿ ಜೆ ಸಿ ಬಿ ಯಂತ್ರಗಳ ಮೂಲಕ ಉಳುಮೆ ಮಾಡುತ್ತಿದ್ದಾರೆ
ರಾತ್ರಿ ಸಮಯದಲ್ಲಿ ಜೆ ಸಿ ಬಿ ಟ್ರ್ಯಾಕ್ಟರ್ ಗಳ ಮೂಲಕ ಮಣ್ಣು ಸಾಗಾಟ ಮಾಡುತ್ತಿದ್ದಾರೆ ಈ ಪ್ರಭಾವಿ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೆ ಈ ಸರ್ಕಾರಿ ಗೋಮಾಳವನ್ನು ನಮ್ಮ ಗ್ರಾಮದ ಎಲ್ಲಾ ಜನಾಂಗದವರು
ಧನಕರುಗಳನ್ನು ಮೇಯಿಸಿಕೊಂಡು ಜೀವನ ನೆಡೆಸಲು ಈ ಜಾಗವನ್ನು ಉಳಿಸಿಕೊಡಿ ಅನ್ಯರ ಪಾಲಾಗುವುದನ್ನು ತಪ್ಪಿಸಿ ಎಂದು ಗ್ರಾಮಸ್ಥರು ಪ್ರತಿಭಟನೆ ನೆಡಿಸಿದರು ಈ ಸಂದರ್ಭದಲ್ಲಿ ಗ್ರಾಮದ ಯಜಮಾನ್ರು ಶಂಕರಪ್ಪ,ಶಿವನಂಜಯ್ಯ, ನಿಂಗಯ್ಯ,ಬಸವಯ್ಯ,ನೀಲಯ್ಯ,ರಂಗಯ್ಯ ಮಲ್ಲಯ್ಯ, ಉಮಾಪತಿ,ನಿಂಗರಾಜಪ್ಪ, ಬಸವಣ್ಣ,ರಾಜೇಶ್ , ನಿಂಗರಾಜು,ಅನೀಲ್ ಪ್ರಭುಸ್ವಾಮಿ,ಮದನ್, ಪ್ರಸಾದ್, ಜೋಗಿ ಇನ್ನೂ ಹಲವರು ಇದ್ದರು
ವರದಿ ಆರ್ ಉಮೇಶ್ ಮಲಾರಪಾಳ್ಯ
ಬಾಕ್ಸ್ ಸುದ್ದಿ 1
ಈ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಮಾತನಾಡಿ ಯಾವುದೇ ಕಾರಣಕ್ಕೂ ನಮ್ಮ ಈ ಸರ್ಕಾರಿ ಗೋಮಾಳವನ್ನು ಅನ್ಯ ವ್ಯಕ್ತಿಗಳ ಪಾಲಾಗಲು ನಮ್ಮ ಇಲಾಖೆ ಯಾವುದೇ ಕಾರಣಕ್ಕೂ ಜಮೀನನ್ನು ಉಳುಮೆ ಮಾಡಲು ಬಿಡುವುದಿಲ್ಲ ಈ ಗೋಮಾಳವನ್ನು ಅಕ್ರಮವಾಗಿ ಉಳುಮೆ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.