ಇತ್ತೀಚಿನ ಸುದ್ದಿರಾಜ್ಯ

ತಿಕೋಟಾ ಪಟ್ಟಣದ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮರ ಜಯಂತಿಯನ್ನು ಆಚರಿಸಲಾಯಿತು.

ತಿಕೋಟಾ : ಪಟ್ಟಣದ ತಾಲೂಕ ದಂಡಾಧಿಕಾರಿಗಳಾದ ಶ್ರೀ ಚನಗೊಂಡ್ ಅವರು ಕಿತ್ತೂರು ರಾಣಿ ಚೆನ್ನಮ್ಮ 200 ವರ್ಷಗಳ ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ದೇಶಕ್ಕಾಗಿ ಪ್ರಾಣ ತೆತ್ತ ವೀರ ವನಿತೆ ಎಂದು ಇತಿಹಾಸದಲ್ಲಿ ಅಮರರಾಗಿದ್ದಾರೆ ಎಂದರು. ಚನ್ನಮ್ಮನವರ ಶೌರ್ಯ ಸಾಹಸ ಮೆಚ್ಚುವಂತಹುದು ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕಿ ಶ್ರೀಮತಿ ನಂದಾ ತಿಕೋಟಿ ಚನ್ನಮ್ಮನವರ ವೀರಗಾತೆ ಕುರಿತು ಉಪನ್ಯಾಸ ನೀಡಿದರು.

ಪ ಪೂ ಬಾಬುರಾವ್ ಮಹಾರಾಜರು ಚನ್ನಮ್ಮಾಜಿ ತಾಯಿಯ ಗರ್ಭದಲ್ಲಿರುವಾಗಲೇ ಶೌರ್ಯದ ಲಕ್ಷಣ ಹೊಂದಿದ್ದರಿಂದಲೇ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು ಎಂದರು.

ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ರಾಮಯ್ಯ ಲಕ್ಕುಂಡಿಮಠ್ ದಕ್ಷಿಣ ಭಾರತದಲ್ಲಿಯೇ ಬ್ರಿಟಿಷರ ವಿರುದ್ಧ ದಂಗೆ ಏಳುವಲ್ಲಿ ಚನ್ನಮ್ಮ ಮೊದಲಿಗರು ಎಂದು ಅಭಿಪ್ರಾಯಪಟ್ಟರು.

ಇದೆ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಹಾಗು ತಿಕೋಟಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಕುರಿತಂತೆ ಚರ್ಚೆ ಮಾಡಲಾಯಿತು. ಸಭೆಯಲ್ಲಿ ಉಪತಹಶಿಲ್ದಾರರು, ಉಪನೊoದಣಾಧಿಕಾರಿಗಳು, ತಾಲೂಕ ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು, ಶಿಕ್ಷಣಾಧಿಕಾರಿಗಳು, ಎಲ್ಲಾ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಸೋಮಶೇಖರ್ ಜತ್ತಿ, ಧರೆಪ್ಪ ಎಚ್ಚಿ, ಬಸಯ್ಯ ವಿಭೂತಿಮಠ, ಶ್ರೀಕಾಂತ್ ಕುಂಬಾರ, ಡಾ. ಸಿದ್ದಲಿಂಗಪ್ಪ ಸಾರವಾಡ ನಿಂಗಪ್ಪ ಕಲಗಟಗಿ ಹಾಗೂ ಪತ್ರಕರ್ತರಾದ ಶ್ರೀ ಸಾತಲಿಂಗಯ್ಯ ಸಾಲಿಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button