ಲಯನ್ಸ್ ಕ್ಲಬ್ ವತಿಯಿಂದ ಮಹಾನ್ ವ್ಯಕ್ತಿಗಳ ಸ್ಮರಣಾರ್ಥ.
ಆಲೂರು: ಪಟ್ಟಣದ ಲಯನ್ಸ್ ಕ್ಲಬ್ ಮಂದಿರದಲ್ಲಿ ಲಯನ್ಸ್ ಸೇವಾ ಸಂಸ್ಥೆ ಮತ್ತು ಕರ್ನಾಟಕ
ರಕ್ಷಣಾ ವೇದಿಕೆ, ಆಲೂರು, ಇವರ ವತಿಯಿಂದ
ಹಾಗೂ ಯೋಗ ಶಿಬಿರಾರ್ಥಿಗಳ
ಸಹಕಾರದಿಂದ ಭಾರತರತ್ನ ರತನ್ ಟಾಟಾ
ಮತ್ತು ಕರ್ನಾಟಕ ರತ್ನ ಪುನೀತ್ ರಾಜಕುಮಾರ್
ಅವರ ಸ್ಮರಣಾರ್ಥಾಂಗವಾಗಿ, ರಾಜೀವ್ ಆಯುರ್ವೇದ ಆಸ್ಪತ್ರೆ ಹಾಸನ ಇವರಿಂದ ಉಚಿತ ವೈದ್ಯಕೀಯ ತಪಾಸಣೆ,ಅಲ್ಲದೆ ಜೀವ ರಕ್ಷಾ ರಕ್ತ ನಿಧಿ,
ಹಾಸನ ಇವರಿಂದ ರಕ್ತದಾನ ಶಿಬಿರ
ಏರ್ಪಡಿಸಲಾಗಿತ್ತು .
ಇಂತಹ ಮಹಾನ್ ವ್ಯಕ್ತಿಗಳ ಪುಣ್ಯಸ್ಮರಣೆಯ ಅಂಗವಾಗಿ ಎಲ್ಲರೂ ಭಾಂಧವ್ಯದಿಂದ ಸೇರಿಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಂತೋಷದ ವಿಚಾರ, ಇಂದು ರಕ್ತದಾನ ಶಿಬಿರದಲ್ಲಿ ಅನೇಕ ಯುವಕರು ಮುಂದೆ ಬಂದು ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ರಕ್ಷಕರಾಗಿದ್ದಾರೆ ಎಂದು ಉಯನ್ಸ್ ಕ್ಲಬ್ ಅಧ್ಯಕ್ಷರಾದ ಮಹೇಶ್ ತಿಳಿಸಿದರು.
ಈ ಸಂಧರ್ಭದಲ್ಲಿ ಚೇತನ್ ಗುರೂಜಿ ಅಡಗೂರು. ರಘು ಪಾಳ್ಯ.ಜಗದೀಶ್.ನಟರಾಜ್.ನವೀನ್ ದಡದಹಳ್ಳಿ.ಆನಂದ್.ಮಲ್ಲಿಕಾರ್ಜುನ.ದೀಪು.ಗಿರೀಶ್ ಹೊಸಹಳ್ಳಿ.ಹಾಗೂ ಲಯನ್ಸ್ ಕ್ಲಬ್ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.